ನೋಟಿನ ಮೇಲೆ ಲಕ್ಷ್ಮೀ ಫೋಟೋ ಮುದ್ರಿಸಿದರೆ ರೂಪಾಯಿ ಮೌಲ್ಯ ಹೆಚ್ಚಳ; ಸುಬ್ರಮಣಿಯನ್ ಸ್ವಾಮಿ ಸಲಹೆ

ನೋಟುಗಳ ಮೇಲೆ ಲಕ್ಷ್ಮೀ ದೇವತೆಯ ಫೋಟೋ ಮುದ್ರಿಸಿದರೆ ರೂಪಾಯಿಯ ಸ್ಥಿತಿಯನ್ನು ಸುಧಾರಿಸಬಹುದು. ಒಂದೊಮ್ಮೆ ಪ್ರಧಾನಿಗಳು ಈ ತೀರ್ಮಾನಕ್ಕೆ ಬಂದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

Sushma Chakre | news18-kannada
Updated:January 16, 2020, 9:22 AM IST
ನೋಟಿನ ಮೇಲೆ ಲಕ್ಷ್ಮೀ ಫೋಟೋ ಮುದ್ರಿಸಿದರೆ ರೂಪಾಯಿ ಮೌಲ್ಯ ಹೆಚ್ಚಳ; ಸುಬ್ರಮಣಿಯನ್ ಸ್ವಾಮಿ ಸಲಹೆ
ಸುಬ್ರಮಣಿಯನ್ ಸ್ವಾಮಿ
  • Share this:
ನವದೆಹಲಿ (ಜ. 16): ನೋಟುಗಳ ಮೇಲೆ ಲಕ್ಷ್ಮೀ ದೇವತೆಯ ಚಿತ್ರವನ್ನು ಮುದ್ರಿಸಿದರೆ ರೂಪಾಯಿ ಮೌಲ್ಯ ಹೆಚ್ಚಾಗಿ, ಭಾರತದ ಆರ್ಥಿಕತೆಯೂ ಸುಧಾರಿಸಲಿದೆ ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಇಂಡೋನೇಷ್ಯಾದಲ್ಲಿ ನೋಟುಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಗಣೇಶ ನಮಗಿರುವ ಎಲ್ಲ ತೊಂದರೆಗಳನ್ನು ನಿವಾರಿಸುವ ಶಕ್ತಿ ಉಳ್ಳವನು. ನಮ್ಮ ದೇಶದಲ್ಲೂ ನೋಟುಗಳ ಮೇಲೆ ಲಕ್ಷ್ಮೀ ದೇವತೆಯ ಫೋಟೋ ಮುದ್ರಿಸಿದರೆ ರೂಪಾಯಿಯ ಸ್ಥಿತಿಯನ್ನು ಸುಧಾರಿಸಬಹುದು. ಒಂದೊಮ್ಮೆ ಪ್ರಧಾನಿಗಳು ಈ ತೀರ್ಮಾನಕ್ಕೆ ಬಂದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಉಗ್ರರಿಗೆ ಆಶ್ರಯ ನೀಡಿದ್ದ ಆರೋಪ; ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಶೌರ್ಯ ಪ್ರಶಸ್ತಿ ಮುಟ್ಟುಗೋಲು

ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ ಕಾಯ್ದೆ ಜಾರಿಯನ್ನು ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ 44 ನೇ ಪರಿಚ್ಚೇದದ ಮೂಲಕ ಬಿಜೆಪಿ ಶೀಘ್ರದಲ್ಲೇ ಏಕರೂಪ ಸಿವಿಲ್ ಕೋಡ್ (ಯುಸಿಸಿ) ಯನ್ನು ಪರಿಚಯಿಸಲಿದೆ ಎಂದು ಸ್ವಾಮಿ ಹೇಳಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಬ್ರಮಣಿಯನ್ ಸ್ವಾಮಿ, 2025ರ ವೇಳೆಗೆ ಚೀನಾವನ್ನು ಹಿಂದಿಕ್ಕುವ ಭಾರತ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎನಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಉಪನ್ಯಾಸದಲ್ಲಿ ಮಾತನಾಡಿದ್ದ ಸುಬ್ರಮಣಿಯನ್ ಸ್ವಾಮಿ, ಮುಸ್ಲಿಮರು ಮತ್ತು ಹಿಂದೂಗಳ ಡಿಎನ್‌ಎ ಬ್ರಾಹ್ಮಣರು ಮತ್ತು ದಲಿತರ ಡಿಎನ್‌ಎಗಳಂತಿದೆ ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Published by: Sushma Chakre
First published: January 16, 2020, 9:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading