Hrithik Roshan: ಮಹಾಕಾಲನಿಗೆ ಅಪಮಾನ ಮಾಡಿದ್ರಾ ಹೃತಿಕ್ ರೋಷನ್? ಜೊಮ್ಯಾಟೊ ಜಾಹೀರಾತಿಗೆ ಬೈಕಾಟ್ ಬಿಸಿ!

ಜೊಮ್ಯಾಟೋ ಜಾಹೀರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಜೊಮ್ಯಾಟೋ ಹಾಗೂ ಹೃತಿಕ್ ರೋಷನ್ ಇಬ್ಬರಿಗೂ ಬೈಕಾಟ್ (Boycott) ಬಿಸಿ ತಟ್ಟಿದೆ.

ಜೊಮೇಟೊ ಜಾಹೀರಾತು ವಿರುದ್ಧ ಆಕ್ರೋಶ

ಜೊಮೇಟೊ ಜಾಹೀರಾತು ವಿರುದ್ಧ ಆಕ್ರೋಶ

  • Share this:
ನವದೆಹಲಿ: ಬಾಲಿವುಡ್‌ನ ಖ್ಯಾತ ನಟ (Bollywood Famous Actor) ಹೃತಿಕ್ ರೋಷನ್ (Hrithik Roshan) ಹಾಗೂ ಪ್ರಸಿದ್ಧ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ (Online Food Delivery Company) ಜೊಮ್ಯಾಟೋ (Zomato) ವಿರುದ್ಧ ದೇಶಾದ್ಯಂತ ಈಗ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ ಹೃತಿಕ್ ರೋಷನ್ ಅಭಿನಯಿಸಿದ್ದ, ಜೊಮ್ಯಾಟೋ ಕಂಪನಿಯ ಜಾಹೀರಾತು ವಿಡಿಯೋ (Advertisement video). ಹೌದು, ಈ ಜಾಹೀರಾತಿನಲ್ಲಿ ಮಧ್ಯಪ್ರದೇಶದಲ್ಲಿರುವ (Madhya Pradesh) ಪ್ರಸಿದ್ಧ ಹಿಂದೂ ದೇವತೆ (Hindu God) ಮಹಾಕಾಲನಿಗೆ (Mahakala) ಅಪಮಾನ ಮಾಡಿಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 30 ಸೆಕೆಂಡುಗಳ ಈ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಅವರು, ‘ನನಗೆ ಪನ್ನೀರ್ ಥಾಲಿ ತಿನ್ನೋ ಹಾಗೇ ಆಗಿತ್ತು. ಇದನ್ನು ಮಹಾಕಾಲದಿಂದ ಆರ್ಡರ್ ಮಾಡಿದೆ’ ಎಂದು ವಿಡಿಯೋದಲ್ಲಿ ಹೇಳುತ್ತಾರೆ. ಇದು ಮಹಾಕಾಲನ ಭಕ್ತರ (Devotees) ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಜೊಮ್ಯಾಟೋ ಹಾಗೂ ಹೃತಿಕ್ ರೋಷನ್ ಇಬ್ಬರಿಗೂ ಬೈಕಾಟ್ (Boycott) ಬಿಸಿ ತಟ್ಟಿದೆ.

ಜೊಮ್ಯಾಟೋ ಜಾಹೀರಾತಿನಲ್ಲಿ ಮಹಾಕಾಲನಿಗೆ ಅಪಮಾನ

ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಉಜ್ಜೈನಿಯ ಮಹಾಕಾಲ ದೇವಸ್ಥಾನದ ಬಗ್ಗೆ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಜೊಮಾಟೊ ಅವಹೇಳನಕಾರಿ ಜಾಹೀರಾತನ್ನು ಪ್ರಸಾರ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. 30 ಸೆಕೆಂಡುಗಳ ಈ ಜಾಹೀರಾತಿನಲ್ಲಿ ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯಿಸಿದ್ದಾರೆ. ಈ ಜಾಹೀರಾತಿನಲ್ಲಿ ಅವರು, ‘ನನಗೆ ಪನ್ನೀರ್ ಥಾಲಿ ತಿನ್ನೋ ಹಾಗೇ ಆಗಿತ್ತು. ಇದನ್ನು ಮಹಾಕಾಲದಿಂದ ಆರ್ಡರ್ ಮಾಡಿದೆ’ ಎಂದು ವಿಡಿಯೊದಲ್ಲಿ ಹೇಳುತ್ತಾರೆ. ಇದು ಮಹಾಕಾಲನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.ಮಹಾಕಾಲನ ಪ್ರಸಾದಕ್ಕೆ ಅಪಮಾನ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಾಕಾಲ ದೇವಸ್ಥಾನದ ಮುಖ್ಯ ಅರ್ಚಕರು ಈ ಜಾಹೀರಾತಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಜೊಮಾಟೊ ಜಾಹೀರಾತು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಮಹಾಕಾಲದಲ್ಲಿ ಥಾಲಿಯನ್ನು ಆನ್‌ಲೈನ್ ಡೆಲಿವರಿ ಮಾಡುವುದಿಲ್ಲ. ಭಕ್ತರು ಭಕ್ತಿಯಿಂದ ಸ್ವೀಕರಿಸುವ ಪ್ರಸಾದವದು. ಪ್ರಸಾದದ ಬಗ್ಗೆ ಈ ರೀತಿಯ ಅಸಹ್ಯಕರ ಜಾಹೀರಾತನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Laal Singh Chaddha Controversy: ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ವಿವಾದ ಎದುರಾಗಿದ್ದೇಕೆ? ಅಷ್ಟಕ್ಕೂ ಆ ಸಿನಿಮಾದಲ್ಲಿ ಏನಿದೆ?

ಹೃತಿಕ್ ರೋಷನ್, ಜೊಮ್ಯಾಟೋಗೆ ಬೈಕಾಟ್ ಬಿಸಿ

ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಈ ಜಾಹೀರಾತಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜೊಮ್ಯಾಟೋ ಉತ್ಪನ್ನಗಳು ಹಾಗೂ ಹೃತಿಕ್ ರೋಷನ್ ಸಿನಿಮಾ ಬಹಿಷ್ಕರಿಸಿ ಎಂಬ ಅಭಿಯಾನ ಶುರುವಾಗಿದೆ. ಇನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕೂಡ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಜೊಮಾಟೊ ಹಾಗೂ ನಟ ಹೃತಿಕ್ ರೋಷನ್ ವಿರುದ್ಧ ‍ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಕ್ಷಮೆ ಕೇಳಿದ ಜೊಮ್ಯಾಟೋ ಕಂಪನಿ

ತಮ್ಮ ಕಂಪನಿಯ ಜಾಹೀರಾತು ವಿವಾದದ ರೂಪ ಪಡೆಯುತ್ತಿದ್ದಂತೆ ಜೊಮ್ಯಾಟೋ ಎಚ್ಚೆತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದೆ. ನಾವು ಈ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ, ಜೊಮ್ಯಾಟೋ ಜಾಹೀರಾತಿನ ಉದ್ದೇಶವು ಎಂದಿಗೂ ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ನೋಯಿಸುವುದಲ್ಲ ಅಂತ ಕಂಪನಿ ಹೇಳಿದೆ.

ಜೊಮ್ಯಾಟೋ ಕ್ಷಮಾಪಣೆ


ಇದನ್ನೂ ಓದಿ: Lal Singh Chaddha: ಫಾರೆಸ್ಟ್ ಗಂಪ್‌ ಹಿಟ್​, ಲಾಲ್​ ಸಿಂಗ್​ ಫ್ಲಾಪ್​! ಆಮಿರ್​ ಖಾನ್​ ಇಲ್ಲೇ ಎಡವಿದ್ದು, ಸಿನಿಮಾ ಸೋಲಿಗೂ ಇದೇ ಕಾರಣ

ಜೊತೆಗೆ "ಜಾಹೀರಾತಿನಲ್ಲಿ 'ಮಹಾಕಲ್ ರೆಸ್ಟೋರೆಂಟ್'ನಲ್ಲಿ ಸಿಗುವ 'ಥಾಲಿಸ್' ಅನ್ನು ಉಲ್ಲೇಖಿಸಲಾಗಿದೆ, ಅದು ಶ್ರೀ ಮಹಾಕಾಳೇಶ್ವರ ದೇವಸ್ಥಾನವಲ್ಲ" ಅಂತ ಸ್ಪಷ್ಟನೆಯನ್ನೂ ನೀಡಿದೆ.
Published by:Annappa Achari
First published: