Court: ದೇವರ ಮೂರ್ತಿಯನ್ನು ತಪಾಸಣೆಗೆ ತರುವಂತೆ ಆದೇಶಿಸಿದ್ದ ನ್ಯಾಯಾಲಯ! ಮುಂದೆ?

Madras HC: ಸಿವಿರಿಪಾಳ್ಯಂನ ಪರಮಶಿವನ್​ ಸ್ವಾಮಿ ದೇವಸ್ಥಾನದಲ್ಲಿ ಕಳುವಾಗಿದ್ದ ಮೂಲ ವಿಗ್ರಹವನ್ನು ಪತ್ತೆ ಹಚ್ಚಿ ಪುನರ್​ಪ್ರತಿಷ್ಠಾಪನೆ ಮಾಡಿದ್ದ ಪ್ರಕರಣ ಸಂಬಂಧ ಕುಂಭಕೋಣಂನ ಕೆಳ ಹಂತದ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ಮುಗಿದ ಬಳಿಕ ವಿಗ್ರಹವನ್ನು ಅದರ ಪೀಠದಿಂದ ಮೇಲೆಕ್ಕೆ ಎತ್ತಿ ನ್ಯಾಯಾಲಯದ ಎದುರು ಹಾಜರುಪಡಿಸಿ ಎಂದು ಹೇಳಿದ್ದ ಕೆಳ ಹಂತದ ನ್ಯಾಯಾಲಯ ಆದೇಶ ಮಾಡಿತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಾಸ್ತಿಕ ಮತ್ತು ಆಸ್ತಿಕ ವಾದಗಳ(Atheistic and Theism) ಜಂಗಿ ನಿಕಾಲಿ ಕುಸ್ತಿ ಇಂದು ನೆನ್ನೆಯದ್ದಲ್ಲ. ದೇವರ(God) ಇರುವಿಕೆಯನ್ನು ಪ್ರಶ್ನಿಸುವ ಅನೇಕ ಘಟನೆಗಳು(Incident) ಇಂದಿಗೂ ನಡೆಯುತ್ತಲೇ ಇವೆ.. ದೇವರನ್ನ ದ್ವೇಷಿಸುವ ವರ್ಗವೊಂದು ಕಡೆಯಾದರೆ ದೇವರನ್ನು ಆರಾಧಿಸುವ ಇನ್ನೊಂದು ವರ್ಗ ಮತ್ತೊಂದು ಕಡೆ ಇದೆ.. ಹೀಗಾಗಿಯೇ ಇದೇ ಕಥಾಹಂದರವನ್ನು(Storyline) ಇಟ್ಟುಕೊಂಡು ಕೆಲವು ವರ್ಷಗಳ ಹಿಂದೆ ಹಿಂದಿಯಲ್ಲಿ ಓ ಮೈ ಗಾಡ್(Oh My God) ಎನ್ನುವ ಸಿನಿಮಾ ಬಂದಿತ್ತು. ಇದೇ ಸಿನಿಮಾ ಕನ್ನಡದಲ್ಲಿ(Kannada) ಮುಕುಂದ ಮುರಾರಿ(Mukunda Murari) ಎಂಬ ಹೆಸರಿನಲ್ಲಿ ಕೂಡ ಬಂದಿತ್ತು.. ನಾಸ್ತಿಕ ಹಾಗೂ ಆಸ್ತಿಕ ವಾದಗಳನ್ನು ವಿವರಿಸುವ ಈ ಸಿನೆಮಾ ಪ್ರೇಕ್ಷಕರ ಮನ ಕೂಡ ಗೆದ್ದಿತ್ತು.

  ಈ ಸಿನಿಮಾದಲ್ಲಿ ದೇವರನ್ನು ಕಂಡರೆ ಆಗದ ವ್ಯಕ್ತಿ ಮುಕುಂದ. ದೇವರೆ ತನ್ನ ಜೀವನದ ಬೆಳಕು ಅನ್ನುವ ಆತನ ಪತ್ನಿ ಸುಕನ್ಯಾ ಈ ವೈರುಧ್ಯದ ಮಧ್ಯೆ ಮುಕುಂದ ಬದುಕಿನಲ್ಲಿ ಅವಘಡವೊಂದು ಸಂಭವಿಸುತ್ತದೆ. ಭೂಕಂಪದಿಂದಾಗಿ ಆತ ತನ್ನ ಸರ್ವಸ್ವವೇ ಆಗಿದ್ದ ಅಂಗಡಿಯನ್ನು ಕಳೆದುಕೊಳ್ಳುತ್ತಾನೆ. ಅಂಗಡಿಯ ಮೇಲೆ ಇನ್‌ಶ್ಯೂರೆನ್ಸ್ ಇದ್ದರೂ, ಭೂಕಂಪ ಅನ್ನುವುದು ಗಾಡ್ಸ್ ಆಕ್ಟ್ ಎಂಬ ಕಾರಣಕ್ಕೆ ಹಣ ನೀಡಲು ಕಂಪೆನಿ ನಿರಾಕರಿಸುತ್ತದೆ. ಆಗ ಮುಕುಂದ ದೇವರ ಮೇಲೆ ದಾವೆ ಹೂಡುತ್ತಾನೆ..

  ಹೀಗಾಗಿ ಆ ಸಿನಿಮಾದಲ್ಲಿ ಕೋರ್ಟ್ ದೇವರನ್ನ ಸಾಕ್ಷಿಯಾಗಿ ಕಟಕಟೆಗೆ ತರುವಂತೆ ನಾಯಕನಿಗೆ ಸೂಚನೆ ನೀಡಿತ್ತು. ಈ ಸಿನಿಮಾದಲ್ಲಿ ಇರುವಂತೆಯೇ ಕಳೆದ ಕೆಲವು ದಿನಗಳ ಹಿಂದೆ ತಮಿಳುನಾಡಿನ ಕೆಳಹಂತದ ನ್ಯಾಯಾಲಯ ವಿಗ್ರಹದ ಪರಿಶೀಲನೆಗಾಗಿ ವಿಗ್ರಹವನ್ನು ನ್ಯಾಯಾಲಯದ ಮುಂದೆ ವಿಗ್ರಹವನ್ನು ಹಾಜರುಪಡಿಸುವಂತೆ ಕೇಳಿಕೊಂಡಿತ್ತು. ಆದರೆ ಈಗ ಕೆಳಹಂತದ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದು ಮಾಡಿ ಕೆಳಹಂತದ ನ್ಯಾಯಾಲಯಕ್ಕೆ ಛೀಮಾರಿ ಹಾಕಿದೆ.

  ಮುಕುಂದ ಮುರಾರಿ ಸಿನಿಮಾದ ಕಥೆಯಂತೆ ದೇವರನ್ನು ಕೋರ್ಟ್ಗೆ ಕರೆತರುವಂತೆ ಆದೇಶ ನೀಡುವಂತೆಯೇ , ಪರಿಶೀಲನೆಗಾಗಿ ಕೋರ್ಟ್ಗೆ ವಿಗ್ರಹವನ್ನು ತಮಿಳುನಾಡಿನ ಕೆಳಹಂತದ ನ್ಯಾಯಾಲಯ ಆದೇಶ ನೀಡಿತ್ತು. ಈಗ ಅದೇ ಆದೇಶದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ ದೇವರನ್ನು ನ್ಯಾಯಾಲಯಕ್ಕೆ ಕರೆ ತರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದೆ.

  ಇದನ್ನೂ ಓದಿ: ಅನಾರೋಗ್ಯ ಮುಚ್ಚಿಟ್ಟು ಮದುವೆಯಾಗುವುದು ಅಪರಾಧ: High Court ಮಹತ್ವದ ತೀರ್ಪು

  ಅಷ್ಟಕ್ಕೂ ಏನಿದು ಪ್ರಕರಣ..?

  ಸಿವಿರಿಪಾಳ್ಯಂನ ಪರಮಶಿವನ್​ ಸ್ವಾಮಿ ದೇವಸ್ಥಾನದಲ್ಲಿ ಕಳುವಾಗಿದ್ದ ಮೂಲ ವಿಗ್ರಹವನ್ನು ಪತ್ತೆ ಹಚ್ಚಿ ಪುನರ್​ಪ್ರತಿಷ್ಠಾಪನೆ ಮಾಡಿದ್ದ ಪ್ರಕರಣ ಸಂಬಂಧ ಕುಂಭಕೋಣಂನ ಕೆಳ ಹಂತದ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ಮುಗಿದ ಬಳಿಕ ವಿಗ್ರಹವನ್ನು ಅದರ ಪೀಠದಿಂದ ಮೇಲೆಕ್ಕೆ ಎತ್ತಿ ನ್ಯಾಯಾಲಯದ ಎದುರು ಹಾಜರುಪಡಿಸಿ ಎಂದು ಹೇಳಿದ್ದ ಕೆಳ ಹಂತದ ನ್ಯಾಯಾಲಯ ಆದೇಶ ಮಾಡಿತ್ತು.. ಹೀಗಾಗಿ ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.

  ದೇವರನ್ನು ಕೋರ್ಟ್ ಗೆ ಕರೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಹೈಕೋರ್ಟ್..?

  ಸಿವಿರಿಪಾಳ್ಯಂನ ಪರಮಶಿವನ್​ ಸ್ವಾಮಿ ದೇವಸ್ಥಾನದ ವಿಗ್ರಹ ವಿವಾದವನ್ನು ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಆರ್​. ಸುರೇಶ್​ ಕುಮಾರ್​, ದೇವರ ಮೂರ್ತಿಯನ್ನು ಪರಿಶೀಲನೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಹೇಳಿದ್ದ ಕೆಳಹಂತದ ನ್ಯಾಯಾಲಯಕ್ಕೆ ಛೀಮಾರಿ ಹಾಕಿದೆ.

  ಭಕ್ತರ ದೃಷ್ಟಿಯಲ್ಲಿ ಮೂರ್ತಿಯು ದೇವರ ರೂಪವಾಗಿರುವ ಕಾರಣ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಾರದು. ಅಪರಾಧದ ವಸ್ತುವಂತೆ ಬಿಂಬಿಸಿ ದೇವರ ಮೂರ್ತಿಯನ್ನು ತಪಾಸಣೆಗೆಂದು ನ್ಯಾಯಾಲಯಕ್ಕೆ ಕರೆಯುವಂತಿಲ್ಲ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಸಾರ್ವಜನಿಕ ರಜೆ ವಿಚಾರ ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್

  ಇನ್ನು ನ್ಯಾಯಮೂರ್ತಿ ಆರ್​. ಸುರೇಶ್​ ಕುಮಾರ್ ತಮ್ಮ ಆದೇಶದಲ್ಲಿ ವಿಗ್ರಹವನ್ನು ಎಲ್ಲಿಯೂ ಸ್ಥಳಾಂತರಿಸದೇ, ಭಕ್ತರ ಭಾವನೆಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟು ಮಾಡದೇ ಪರಿಶೀಲನೆ ಮಾಡಲು ಆಯುಕ್ತರನ್ನು ನೇಮಕ ಮಾಡಬಹುದು ಎಂದು ಆದೇಶದಲ್ಲಿ ಸಲಹೆ ನೀಡಲಾಗಿದೆ. ಕಮಿಷನರ್​ ವಿಗ್ರಹ ಪರಿಶೀಲನೆ ನಡೆಸಿದ ವಿವರವಾದ ವರದಿಯನ್ನು ಕೋರ್ಟ್​ಗೆ ಸಲ್ಲಿಸಬಹುದು ಎಂದು ಹೇಳಲಾಗಿದೆ.
  Published by:ranjumbkgowda1 ranjumbkgowda1
  First published: