ಮಗುವಿಗೆ ಜನ್ಮ ಕೊಟ್ಟ ಮೇಕೆ: ಉತ್ತರ ಪ್ರದೇಶದಲ್ಲಿ ನಡೆಯಿತು ವಿಸ್ಮಯ, ಇಲ್ಲಿದೆ ಫೋಟೋ

news18
Updated:October 2, 2018, 1:33 PM IST
ಮಗುವಿಗೆ ಜನ್ಮ ಕೊಟ್ಟ ಮೇಕೆ: ಉತ್ತರ ಪ್ರದೇಶದಲ್ಲಿ ನಡೆಯಿತು ವಿಸ್ಮಯ, ಇಲ್ಲಿದೆ ಫೋಟೋ
ಸಾಂದರ್ಭಿಕ ಚಿತ್ರ
  • Advertorial
  • Last Updated: October 2, 2018, 1:33 PM IST
  • Share this:
ನ್ಯೂಸ್​ 18 ಕನ್ನಡ

ಲಕ್ನೋ(ಅ.02): ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬನಿಹಾಂ ಎಂಬ ಹಳ್ಳಿಯಲ್ಲಿ ಮೃತ ಮೇಕೆಯ ಹೊಟ್ಟೆಯಲ್ಲಿ ಶಿಶುವಿನ ಆಕಾರದ ಜೀವಿ ಪತ್ತೆಯಾಗಿದ್ದು, ಸದ್ಯ ಅಲ್ಲಿನ ಸ್ಥಳೀಯರಲ್ಲಿ ಈ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಮಾನವ ಶಿಶುವಿನ ಆಕೃತಿಯನ್ನು ನೋಡಲು ಜನರ ದಂಡೇ ಆಗಮಿಸಿದೆ. ಬಿನಿಹಾಂ ನಿವಾಸಿಯಾದ ಗೌರಿಶಂಕರ್​ ರಾಮ್​ರವರ ಮೇಕೆ ಭಾನುವಾರ ಸಂಜೆ ಸಾವನ್ನಪ್ಪಿತ್ತು. ಹೀಗಾಗಿ ಇಲ್ಲಿನ ಭೋಬತ್​ಪುರ್​ ನಿವಾಸಿ ಹರಿಶಂಕರ್​ ರಾಮ್​ ಎಂಬವವರು ಚರ್ಮ ತೆಗೆಸಲು ಸತ್ತ ಕುರಿಯನ್ನು ಕೊಂಡೊಯ್ದಿದ್ದರು.

ರಾತ್ರಿ ವೇಳೆ ಹರಿಶಂಕರ್​ ಮೇಕೆಯ ಚರ್ಮ ತೆಗೆಯುತ್ತಿದ್ಧಾಗ, ಅದರ ಹೊಟ್ಟೆಯಲ್ಲಿ ಶಿಶುವಿಗೆ ಹೋಲಿಕೆಯಾಗುವ ವಿಚಿತ್ರ ಮಗು ಹಾಗೂ ಒಂದು ಮೇಕೆ ಮರಿಯೂ ಕಂಡು ಬಂದಿದೆ. ಇದನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಭಯ ಬಿದ್ದಿದ್ದಾರೆ. ಈ ಪ್ರಕೃತಿ ವಿಸ್ಮಯದ ಸುದ್ದಿ ಹಬ್ಬುತ್ತಿದ್ದಂತೆಯೇ ಇದನ್ನು ನೋಡಲು ಜನರು ಗುಂಪು ಗುಂಪಾಗಿ ಆಗಮಿಸಿದ್ದಾರೆ. ಬಂದ ಜನರು ನೋಡುವ ಸಲುವಾಗಿ ಶಿಶುವಿಗೆ ಹೋಲಿಕೆಯಾಗುವ ಈ ಜೀವಿಯನ್ನು ಬುಟ್ಟಿಯಲ್ಲಿಡಲಾಗಿತ್ತು.ಆದರೆ ಸೋಮವಾರದಂದು ಬೆಳಗ್ಗೆ ಎದ್ದಾಗ ಹರಿಶಂಕರ್​ ರಾಮ್​ ಹಾಗೂ ಅವರ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಯಾಕೆಂದರೆ ರಾತ್ರಿ ವೇಳೆ ಅಚ್ಚರಿ ಮೂಡಿಸಿದ ಜೀವಿ ಬೆಳಗಾಗುತ್ತಿದ್ದಂತೆಯೇ ನಾಪತ್ತೆಯಾಗಿದೆ. ಈ ಘಟನೆ ಬಿನಿಹಾಂ ನಿವಾಸಿಗರನ್ನು ಬೆಚ್ಚಿ ಬೀಳಿಸಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಕರ್ನಾಟಕದಲ್ಲೂ ಇಂತಹುದೇ ಘಟನೆ ನಡೆದಿತ್ತೆನ್ನಲಾಗಿದೆ. ಸಾಮಾಜಿಕ ಜಾಲಾತಾಣವಾದ ಯೂ ಟ್ಯೂಬ್​ನಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗಿತ್ತು.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ