• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Goa: ಸರ್ದಾರ್ ಪಟೇಲ್ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಗೋವಾ ಇನ್ನು ಬೇಗ ಮುಕ್ತವಾಗುತ್ತಿತ್ತು: ಮೋದಿ

Goa: ಸರ್ದಾರ್ ಪಟೇಲ್ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಗೋವಾ ಇನ್ನು ಬೇಗ ಮುಕ್ತವಾಗುತ್ತಿತ್ತು: ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತ ಪ್ರಧಾನಿಯವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾದ ಮುಕ್ತಿಗಾಗಿ ಪರಿಶ್ರಮಿಸಿದ ಗೋವಾದ ಹೊರಗಿನ ಹೋರಾಟಗಾರರ ಕೊಡುಗೆಯನ್ನೂ ಪ್ರಧಾನಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

  • Share this:

ಪ್ರಸ್ತುತ ದೇಶದ ರಾಜಕೀಯ ವಲಯದಲ್ಲಿ ಗೋವಾ(Goa) ಸಾಕಷ್ಟು ಸದ್ದು ಮಾಡುತ್ತಿದೆ. ಕೆಲ ಸಮಯದ ಹಿಂದೆ ಪ. ಬಂಗಾಳದ(Chief minister) ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ( Mamata Banerjee) ಗೋವಾಗೆ ಭೇಟಿ ನೀಡಿ ಅಲ್ಲಿನ ರಾಜಕೀಯ ವಲಯದಲ್ಲಿ (Political sector) ಸಂಚಲನ ಮೂಡಿಸಿದ್ದರು. ಅಂದಿನಿಂದ ದೇಶದ ರಾಜಕಾರಣದಲ್ಲಿ ಆಗಾಗ ಗೋವಾದ ಹೆಸರು ಕೇಳಿ ಬರುತ್ತಲೇ ಇರುತ್ತದೆ.


ಗೋವಾ ಲಿಬರೇಷನ್ ಡೇ
ಭಾನುವಾರದದಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು, ಸರ್ದಾರ್ ಪಟೇಲ್ ಇನ್ನೂ ಸ್ವಲ್ಪ ಹೆಚ್ಚು ಕಾಲ ಬದುಕಿದ್ದರೆ ಗೋವಾ ಬೇಗನೇ ಮುಕ್ತವಾಗುತ್ತಿತ್ತು ಎಂದು ನುಡಿದಿದ್ದಾರೆ. ಡಿಸೆಂಬರ್ 19ರಂದು 'ಗೋವಾ ಲಿಬರೇಷನ್ ಡೇ' ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಈ ಮಾತನ್ನು ಹೇಳಿದ್ದಾರೆ. ಪೋರ್ಚುಗೀಸರ ಆಡಳಿತದಿಂದ 1961ರಲ್ಲಿ ಭಾರತೀಯ ಸೈನ್ಯವು ಗೋವಾ ರಾಜ್ಯವನ್ನು ಮುಕ್ತ ಮಾಡಿತ್ತು. ಅಂದಿನಿಂದ ಡಿಸೆಂಬರ್ 19 ಅನ್ನು 'ಗೋವಾ ಲಿಬರೇಷನ್ ಡೇ' ಎಂದು ಆಚರಿಸಲಾಗುತ್ತಿದೆ.


ಗೋವಾ ಮುಕ್ತ
ಇದರ ಪ್ರಯುಕ್ತ, ಗೋವಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿಯು, ಅಂದಿನ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಇದಕ್ಕಿಂತ ಮುಂಚೆಯೇ ಗೋವಾ ಮುಕ್ತವಾಗುತ್ತಿತ್ತು ಎಂದು ಹೇಳಿದರು. ಪ್ರಧಾನಿ ನೆಹರು ಸಂಪುಟದಲ್ಲಿ ಉಪಪ್ರಧಾನಿಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಪಟೇಲ್ , ಡಿಸೆಂಬರ್ 15, 1950ರಂದು ಇಹಲೋಕ ತ್ಯಜಿಸಿದ್ದರು. ಇದಕ್ಕೂ ಮುಂಚೆ ಅವರು ನಿಜಾಮರ ಸುಪರ್ದಿಯಲ್ಲಿದ್ದ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶವನ್ನು ಮುಕ್ತ ಮಾಡಿಸಿದ್ದರು.


ಇದನ್ನೂ ಓದಿ: PM Modi: ಭಾರತ ಈಗ ಶಸ್ತ್ರಾಸ್ತ್ರ ವಿಚಾರದಲ್ಲಿ ಸ್ವಾವಲಂಬಿ, ಎಲ್ಲಾ Make in India ಪರಿಣಾಮ


ಇತ್ತೀಚಿನ ತಮ್ಮ ರೋಮ್ ಭೇಟಿಯ ಸಂದರ್ಭಕ್ಕೆ ಸಂಬಂಧಿಸಿದಂತೆ ಪ್ರಧಾನಿ, "ಇತ್ತೀಚೆಗೆ ಕೆಲ ಸಮಯದ ಹಿಂದೆ ನಾನು ಇಟಲಿಗೆ ಹೋಗಿದ್ದಾಗ ಅಲ್ಲಿನ ವ್ಯಾಟಿಕನ್‌ ನಗರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ಪೋಪ್ ಫ್ರಾನ್ಸಿಸ್‌ರನ್ನು ಭೇಟಿ ಮಾಡುವ ಅವಕಾಶ ದೊರೆತಿತ್ತು. ಆಗ ನಾನು ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದಾಗ ಅವರು, "ಇದು ನೀವು ನನಗೆ ನೀಡಿರುವ ಅತ್ಯುತ್ತಮ ಉಡುಗೊರೆ" ಎಂದು ಹೇಳಿದ್ದರು. ಇದುವೇ ನಮ್ಮ ಭಾರತದ ಅದ್ಭುತವಾದ ವೈವಿಧ್ಯತೆ ಹಾಗೂ ಕಾಂತಿಯುಕ್ತ ಪ್ರಜಾಪ್ರಭುತ್ವದ ಮಹತ್ವ" ಎಂದು ಹೇಳಿದರು.


ಪ್ರಧಾನಿ ಪ್ರಶಂಸೆ
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತ ಪ್ರಧಾನಿಯವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾದ ಮುಕ್ತಿಗಾಗಿ ಪರಿಶ್ರಮಿಸಿದ ಗೋವಾದ ಹೊರಗಿನ ಹೋರಾಟಗಾರರ ಕೊಡುಗೆಯನ್ನೂ ಪ್ರಧಾನಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಸುಮ್ಮನೆ ಕೂರದೆ ಗೋವಾದ ಮುಕ್ತಿಗಾಗಿ ಹೋರಾಡಿದ್ದನ್ನು ಪ್ರಧಾನಿ ಪ್ರಶಂಸಿಸಿದರು.


ಇದೇ ಸಂದರ್ಭದಲ್ಲಿ, ಪ್ರಧಾನಿ, ಗೋವಾದ ಸರ್ಕಾರವನ್ನು ಜನರಿಗಾಗಿ ತನ್ನ ಉತ್ತಮ ಆಡಳಿತ ಒದಗಿಸುವ ನಿಮಿತ್ತ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಶ್ಲಾಘಿಸಿದರು. ಈ ಕುರಿತ ಮಾತನಾಡುತ್ತ ಅವರು, ಈ ಸರ್ಕಾರವು ಜನರ ಪರ್‌ ಕ್ಯಾಪಿಟಾ (ಆರ್ಥಿಕತೆ)ದಲ್ಲಿ ವೃದ್ಧಿ ತರುವುದಲ್ಲದೆ, ಹೆಣ್ಣು ಮಕ್ಕಳಿಗಾಗಿ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯ, ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವಿಕೆ, ಪ್ರತಿ ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ಹೀಗೆ ಹಲವಾರು ಜನೋಪಕಾರಿ ಸೌಲಭ್ಯಗಳನ್ನು ಅನುಷ್ಠಾನಗೊಳಿಸಿರುವುದರ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: PM Narendra Modi: ವಾಯುಮಾಲಿನ್ಯಕ್ಕೆ ಪರಿಹಾರ ನೀಡುವ ಯಂತ್ರ ಆವಿಷ್ಕರಿಸಿದ ವ್ಯಕ್ತಿಯನ್ನು ಭೇಟಿಯಾದ ಪ್ರಧಾನಿ ಮೋದಿ


ಜನಪರ ಕೆಲಸ
ಈ ಸಂದರ್ಭದಲ್ಲಿ ಪ್ರಧಾನಿ ಗೋವಾದ ಮಾಜಿ ಮುಖ್ಯಮಂತ್ರಿಗಳಾದ ಮನೋಹರ್ ಪರಿಕ್ಕರ್‌ರನ್ನೂ ಸಹ ನೆನಪಿಸಿಕೊಳ್ಳುತ್ತ, ಅವರು ಈ ರಾಜ್ಯದ ಸಾಮರ್ಥ್ಯ ಕಂಡುಕೊಂಡು ಹಲವಾರು ಜನಪರ ಕೆಲಸಗಳನ್ನು ಮಾಡಿದರು ಎಂದು ಶ್ಲಾಘಿಸಿದರು. ಗೋವಾದವರಾಗಿದ್ದ ಪರಿಕ್ಕರ್ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಸಚಿವ ಸಂಪುಟದಲ್ಲಿ ರಕ್ಷಣಾ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ದೀರ್ಘಕಾಲದ ಆ ಕಾಯಿಲೆ ವಿರುದ್ಧ ಹೋರಾಡಿ ಕೊನೆಗೆ ಮಾರ್ಚ್ 17, 2019ರಂದು ತಮ್ಮ ಕೊನೆಯುಸಿರನ್ನು ಎಳೆದಿದ್ದರು.


ಈ ಸಂದರ್ಭದಲ್ಲಿ ಪ್ರಧಾನಿ ಭಾರತೀಯ ಸೈನ್ಯದಿಂದ ಗೋವಾ ಮುಕ್ತಿಗಾಗಿ ರೂಪಿಸಲಾಗಿದ್ದ ಆಪರೇಷನ್ ವಿಜಯದ ಹೋರಾಟಗಾರರಿಗೆ ಸನ್ಮಾನ ಮಾಡಿದರು.

First published: