Tourism: ಪ್ರವಾಸಿಗರಿಗೆ ಮತ್ತೆ ಬಾಗಿಲು ತೆರೆದ Goa: ಕ್ಯಾಸಿನೋ- ನೈಟ್‌ ಕ್ಲಬ್‌ಗಳು ರೀ ಓಪನ್..!

ಗೋವಾ ಮತ್ತೆ ಪ್ರವಾಸಿಗರಿಗೆ ಬಾಗಿಲು ತೆರೆದಿದೆ. ಕ್ಯಾಸಿನೋಗಳು, ಸ್ಪಾಗಳು, ಮಸಾಜ್ ಪಾರ್ಲರ್‌ಗಳನ್ನು ಮತ್ತೆ ತೆರೆಯಬಹುದು ಎಂದು ಗೋವಾದ ರಾಜ್ಯ ಸರ್ಕಾರದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ ಸನ್‌ಬರ್ನ್‌ ಸಂಗೀತ ಉತ್ಸವದಂತಹ ಪ್ರಮುಖ ಕಾರ್ಯಕ್ರಮಗಳಿಗೆ ಇನ್ನೂ ಅನುಮತಿ ನೀಡಿಲ್ಲವಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೂರಿಸಂಗೆ ದೇಶದಲ್ಲೇ ಹೆಚ್ಚು ಹೆಸರುವಾಸಿಯಾದ ರಾಜ್ಯಗಳಲ್ಲಿ ಗೋವಾ ಅಗ್ರ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗದು. ಬೀಚ್‌ಗಳು, ಪ್ರವಾಸಿ ತಾಣಗಳು ಮಾತ್ರವಲ್ಲದೆ ನೈಟ್‌ ಲೈಫ್‌ಗೂ ಫೇಮಸ್​ ಆಗಿದೆ. ನೈಟ್‌ ಕ್ಲಬ್‌ಗಳು, ಕ್ಯಾಸಿನೋಗಳು ಅಲ್ಲಿ ಸಿಕ್ಕಾಪಟ್ಟೆ ಫೇಮಸ್‌. ಇನ್ನು, ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ಗೋವಾದಲ್ಲಿ ಪ್ರವಾಸೋದ್ಯಮ (Goa Tourism)ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ರಾಜ್ಯ ಕಾರ್ಯಪಡೆಯು ಸೆಪ್ಟೆಂಬರ್ 20ರಿಂದ ಅಂದರೆ ಇಂದಿನಿಂದ ಎಲ್ಲ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಃ ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರ ಸಹ ಇದಕ್ಕೆ ಒಪ್ಪಿಗೆ ನೀಡಿದ್ದು, ಇಂದಿನಿಂದ ಗೋವಾದ ಪ್ರವಾಸೋದ್ಯಮ ಚಟುವಟಿಕೆಯಿಂದ ಕೂಡಿರಲಿದ್ದು, ಇದು ಇಲ್ಲಿಗೆ ಭೇಟಿ ನೀಡುವವರಿಗೆ ಮತ್ತಷ್ಟು ಕಿಕ್‌ ನೀಡಲಿದೆ. ಕ್ಯಾಸಿನೋ, ನೈಟ್‌ ಕ್ಲಬ್‌ಗಳ ಜತೆಗೆ ಸ್ಪಾಗಳು ಕೂಡ ಸೋಮವಾರದಿಂದ ಶೇಕಡಾ 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಲ್ಲವು. ಆದರೆ, ಓಪನ್‌ ಆಗುವ ಮುನ್ನ ಎಲ್ಲ ಸಿಬ್ಬಂದಿ ಸಂಪೂರ್ಣ ಲಸಿಕೆ ಪಡೆದಿರಬೆಕು ಅಥವಾ ಕೋವಿಡ್ - 19 RTPCR ನೆಗೆಟಿವ್‌ ರಿಪೋರ್ಟ್ ತೋರಿಸಬೇಕು ಎಂದೂ ಹೇಳಲಾಗಿದೆ.

ಈ ಸಂಬಂಧ ಶನಿವಾರ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, "ಗೋವಾದ ಕ್ಯಾಸಿನೋಗಳು ಸೋಮವಾರದಿಂದ ಮತ್ತೆ ಪ್ರವಾಸಿಗರಿಗೆ ತೆರೆದುಕೊಳ್ಳಲಿವೆ. ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಅಥವಾ ಆರ್‌ಟಿಪಿಸಿಆರ್ ವರದಿಯನ್ನು ಹೊಂದಿರುವ ಜನರಿಗೆ ಈ ಕ್ಯಾಸಿನೋಗಳಿಗೆ ಅವಕಾಶ ನೀಡಬೇಕು" ಎಂದು ಶನಿವಾರ ಹೇಳಿದ್ದಾರೆ.

These 12 Indian cities including Mangaluru Mumbai and Goa will be submerged in sea water by 2100 says NASA study.
ಅರಬ್ಬಿ ಸಮುದ್ರ ತೀರ


ಕ್ಯಾಸಿನೋಗಳು, ಸ್ಪಾಗಳು, ಮಸಾಜ್ ಪಾರ್ಲರ್‌ಗಳನ್ನು ಮತ್ತೆ ತೆರೆಯಬಹುದು ಎಂದು ರಾಜ್ಯ ಸರ್ಕಾರದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ ಸನ್‌ಬರ್ನ್‌ ಸಂಗೀತ ಉತ್ಸವದಂತಹ ಪ್ರಮುಖ ಕಾರ್ಯಕ್ರಮಗಳಿಗೆ ಇನ್ನೂ ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಟ Ram Charan ಖರೀದಿಸಿದ 2.43 ಕೋಟಿ ಬೆಲೆಯ Mercedes-Maybach GLS 600 ವಿಶೇಷತೆ ಏನು ಗೊತ್ತೇ..?

"(ರಾಜ್ಯ ಸರ್ಕಾರದ) ತಜ್ಞರ ಸಮಿತಿಯು ಕಳೆದ ಎರಡು-ಮೂರು ವಾರಗಳಲ್ಲಿ (ಕೋವಿಡ್ -19) ಪಾಸಿಟಿವಿಟಿ ದರವನ್ನು ಹೋಲಿಸಿದೆ ಮತ್ತು ಇದು 2 ಪ್ರತಿಶತಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಕ್ಯಾಸಿನೋಗಳನ್ನು ಸೋಮವಾರ ಕಟ್ಟುನಿಟ್ಟಾದ ಎಸ್‌ಒಪಿಗಳೊಂದಿಗೆ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ಪುನಃ ತೆರೆಯಲು ಅವಕಾಶ ನೀಡಲಾಗಿದೆ'' ಎಂದೂ ಸಾವಂತ್‌ ಹೇಳಿದ್ದಾರೆ.

ಈ ಮಧ್ಯೆ, ಕೋವಿಡ್ -19 ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮತ್ತು 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ಆರಂಭಿಸಲು ಟಾಸ್ಕ್ ಫೋರ್ಸ್ ಮತ್ತೊಂದು ಸಭೆ ಕರೆಯುತ್ತದೆ ಎಂದೂ ತಿಳಿದು ಬಂದಿದೆ.

ಶಾಲೆಗಳ ಪುನಾರಂಭ

"ಶಾಲೆಗಳ ಪುನಾರಂಭದ ಬಗ್ಗೆ ನಿರ್ಧಾರವನ್ನು ಪರಿಸ್ಥಿತಿಯ ಮೇಲ್ವಿಚಾರಣೆಯ ನಂತರ ತೆಗೆದುಕೊಳ್ಳಲಾಗುವುದು. ಉನ್ನತ ತರಗತಿಗಳಿಗೆ ದೈಹಿಕ ತರಗತಿಗಳು ಅಕ್ಟೋಬರ್‌ನಿಂದ ಆರಂಭವಾಗುವ ಸಾಧ್ಯತೆಯಿದೆ. ಪ್ರಾಥಮಿಕ ತರಗತಿಗಳಿಗೆ ಶಾಲೆಯನ್ನು ಪುನರಾರಂಭಿಸುವ ಕುರಿತು ದೀಪಾವಳಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದು ಕೋವಿಡ್ ನಿರ್ವಹಣೆಗೆ ರಾಜ್ಯ ಸರ್ಕಾರದ ತಜ್ಞರ ಸಮಿತಿಯ ಅಧಿಕಾರಿ ಡಾ ಶೇಖರ್ ಸಾಲ್ಕರ್ ಮಾಹಿತಿ ನೀಡಿದ್ದಾರೆ.

ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವಲ್ಲಿ ರಾಜ್ಯವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಸಹ ಇತ್ತೀಚೆಗೆ ಹೇಳಿದ್ದರು. ಅವರು ಗೋವಾದ ಆರೋಗ್ಯ ಕಾರ್ಯಕರ್ತರು, ವೈದ್ಯರು, ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ವಾಸ್ತವ ಸಂವಾದದಲ್ಲಿ ಮಾತನಾಡಿದ್ದ ವೇಳೆ ಈ ಬಗ್ಗೆ ಮಾತನಾಡಿದ್ದರು.

"ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವಲ್ಲಿ ಗೋವಾ ಪ್ರಮುಖ ಪಾತ್ರ ವಹಿಸುತ್ತದೆ. ಹೋಟೆಲ್ ಉದ್ಯಮ, ಟ್ಯಾಕ್ಸಿ ಚಾಲಕರು, ವ್ಯಾಪಾರಿಗಳು, ಅಂಗಡಿಯವರು - ಅವರೆಲ್ಲರೂ ಲಸಿಕೆ ಹಾಕಿಸಿಕೊಂಡ ಬಳಿಕ ಪ್ರವಾಸಿಗರು ಕೂಡ ಸುರಕ್ಷತೆಯ ಭಾವನೆಯೊಂದಿಗೆ ಬರುತ್ತಾರೆ. ಈಗ, ಜನರು ಲಸಿಕೆಯ ರಕ್ಷಣೆ ಪಡೆದಿರುವ ಕೆಲವು ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಮುಂಬರುವ ಪ್ರವಾಸೋದ್ಯಮ ಋತುವಿನಲ್ಲಿ ಹಿಂದಿನಂತೆಯೇ ಪ್ರವಾಸೋದ್ಯಮ ಚಟುವಟಿಕೆಗಳು ಇರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ, ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಇಲ್ಲಿ ಆನಂದಿಸಬೇಕು'' ಎಂದು ಮೋದಿ ಹೆಳಿದ್ದರು.

ಇದನ್ನೂ ಓದಿ: Javed Akhtar ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ Kangana Ranaut

ಅಲ್ಲದೆ, "ನಾವು ಲಸಿಕೆಗಾಗಿ ಮಾಡಿದಂತೆ ನಾವು ಕೊರೊನಾ ಸುರಕ್ಷತಾ ಕ್ರಮಗಳತ್ತ ಗಮನ ಹರಿಸಿದಾಗ ಮಾತ್ರ ಇದು ಸಾಧ್ಯ. ಸೋಂಕುಗಳು ಕಡಿಮೆಯಾಗಿವೆ, ಆದರೆ ಈಗಲೂ ನಾವು ಈ ವೈರಸ್ ಅನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸುರಕ್ಷತೆ ಮತ್ತು ನೈರ್ಮಲ್ಯದ ಮೇಲೆ ಹೆಚ್ಚು ಗಮನಹರಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ ಎಂದು ಮೋದಿ ಹೇಳಿದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ರಾಜ್ಯ ಸಚಿವರಾದ ಶ್ರೀಪಾದ್ ನಾಯಕ್ ಮತ್ತು ಭಾರತಿ ಪವಾರ್ ಹಾಗೂ ರಾಜ್ಯ ಕ್ಯಾಬಿನೆಟ್‌ನ ಸಚಿವರು ಇತರರು ಭಾಗವಹಿಸಿದ್ದ ವರ್ಚುವಲ್‌ ಸಂವಾದದಲ್ಲಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದರು.

ಈ ಹಿನ್ನೆಲೆ ರಾಜ್ಯ ಸರ್ಕಾರ ಸಹ ಪ್ರವಾಸೋದ್ಯಮವನ್ನು ಪುನಾರಂಭಿಸಲು ಒಪ್ಪಿಗೆ ನೀಡಿದ್ದು, ಇಂದಿನಿಂದ ಪ್ರವಾಸಿಗರ ಸ್ವರ್ಗವಾದ ಗೋವಾಗೆ ಮತ್ತೆ ಜನರ ದಂಡು ಹರಿದುಬರಲಿದೆ ಎನ್ನಬಹುದು.
Published by:Anitha E
First published: