Goa: ಕೋವಿಡ್​ ಭಯ ಮರೆತ ಪ್ರವಾಸಿಗರು; ಗೋವಾದಲ್ಲಿನ ಹೊಸ ವರ್ಷದ ಚಿತ್ರಣ ವೈರಲ್​​​​

ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಕೋವಿಡ್​​ ಪಾಸಿಟಿವಿಟಿ ದರ ಶೇ 10ರಷ್ಟು ಹೆಚ್ಚಿಸಿದೆ.

ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಕೋವಿಡ್​​ ಪಾಸಿಟಿವಿಟಿ ದರ ಶೇ 10ರಷ್ಟು ಹೆಚ್ಚಿಸಿದೆ.

ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಕೋವಿಡ್​​ ಪಾಸಿಟಿವಿಟಿ ದರ ಶೇ 10ರಷ್ಟು ಹೆಚ್ಚಿಸಿದೆ.

 • Share this:
  ಸಾಲ ಮಾಡಿಯಾದರೂ ತುಪ್ಪ ತಿನ್ನುವಂತೆ ನಮ್ಮ ಮಂದಿ ಕೋವಿಡ್ ಇರಲಿ ಓಮೈಕ್ರಾನ್​ ಇರಲಿ ಡೋಂಟ್ ಕೇರ್ ಎಂದು ಸಂಭ್ರಮದಿಂದ ಸಾಮಾಜಿಕ ಅಂತರ ಮರೆತು ಹೊಸ ವರ್ಷವನ್ನು (New Year) ಬರಮಾಡಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ. ಅದರಲ್ಲೂ ಗೋವಾದಂತಹ ಜನಪ್ರಿಯ ಪ್ರವಾಸಿ ತಾಣದಲ್ಲಿ ಜನರು ಕೋವಿಡ್​ ಭಯ (Covid Fear) ಮರೆತು ಸಂಭ್ರಮಾಚರಣೆ ಮಾಡಿದ್ದಾರೆ. ಹೇಮನ್​ ಗೋಮ್ಸ್​ ಎಂಬುವವರು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಜನಸಂದಣಿಯ ಈ ಫೋಟೋ ಸಾಕಷ್ಟು ವೈರಲ್​ ಆಗಿದೆ. ಕ್ರಿಸ್​ಮಸ್​ ಹೊಸ ವರ್ಷ ಸಂಭ್ರಮದಲ್ಲಿ ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ನಿರೀಕ್ಷೆಗೂ ಮೀರಿದ್ದು, ಆದರೆ, ಆತಂಕಕಾರಿ ಕೋವಿಡ್​​ ರೂಪಾಂತರಿ ತಳಿ ಓಮೈಕ್ರಾನ್​ ದೇಶದಲ್ಲಿ ಉಲ್ಬಣಿಸುತ್ತಿರುವ ಈ ಸಮಯದಲ್ಲಿ ಈ ರೀತಿ ಜನರು ಸೇರಿರುವುದು ಸೋಂಕು ಮತ್ತಷ್ಟು ಹೆಚ್ಚಲು ಆಹ್ವಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಕೋವಿಡ್​​ ಪಾಸಿಟಿವಿಟಿ ದರ ಶೇ 10ರಷ್ಟು ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ ಗೋವಾದಲ್ಲಿ 338 ಮಂದಿಗೆ ಕೋವಿಡ್​ ದೃಢ ಪಟ್ಟಿದೆ. ಇನ್ನು ಕೋವಿಡ್​ ಸಂಖ್ಯೆ ಇಲ್ಲಿಯವರೆಗೆ 1,81,570 ಆಗಿದ್ದರೆ, ಸಾವಿನ ಸಂಖ್ಯೆ 3, 523 ತಲುಪಿದೆ.

  ಇದನ್ನು ಓದಿ: ಈ ವಯಸ್ಸಲ್ಲೂ ಸಖತ್​ ವರ್ಕೌಟ್​ ಮಾಡಿದ ಮೋದಿ: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

  ದೇಶದಲ್ಲಿ ಕೋವಿಡ್ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನಲೆ ಈಗಾಗಲೇ ಸರ್ಕಾರ ಅನೇಕ ಕಠಿಣ ನಿರ್ಬಂಧ ವಿಧಿಸಿದ್ದರೂ ಕೂಡ ಪ್ರವಾಸಿಗರು ಮಾತ್ರ ಹೊಸ ವರ್ಷ ಬರಮಾಡಿಕೊಳ್ಳಲು ಮುಗಿ ಬಿದ್ದಿದ್ದರು. ಗೋವಾದ ಬೀಚ್​ಗಳು, ಪಬ್​ಗಳು ಮತ್ತು ನೈಟ್​ಕ್ಲಬ್​ಗಳಲ್ಲಿ ಜನರು ಮುಗಿಬಿದ್ದಿದ್ದರು.

  ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಅಥವಾ ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ ಮಾಡಲಾಗಿತ್ತು ಅಲ್ಲದೇ ಈ ಪ್ರಮಾಣ ಪತ್ರ ಇದ್ದರೆ ಮಾತ್ರ ಹೊಟೇಲ್​, ರೆಸ್ಟೋರೆಂಟ್​ ಮತ್ತು ಕ್ಯಾಸಿನೊಗಳಿಗೆ ಅನುಮತಿ ನೀಡುವಂತೆ ಧಿಕಾರಿಗಳು ನಿರ್ದೇಶನಗಳನ್ನು ನೀಡಲಾಗಿತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಕಂಡು ಬಂದಿತು.
  ಈ ಹಿಂದೆ ಕೋವಿಡ್ ಎರಡನೇ ಅಲೆ​ ಲಾಕ್​ಡೌನ್​ ನಿಯಮ ಸಡಿಲಿಸಿದಾಗಲೂ ಕೂಡ ಜನರು ಹಿಮಾಚಲ ಪ್ರದೇಶದ ಮನಾಲಿ ಸೇರಿದಂತೆ ಮತ್ತಿತ್ತರ ಗಿರಿಧಾಮಗಳಲ್ಲಿ ಜನರು ದಾಂಗುಡಿ ಇಟ್ಟಿದ್ದ ದೃಶ್ಯಗಳು ವೈರಲ್​ ಆಗಿದ್ದವು.

  ಇದನ್ನು ಓದಿ: ಪ್ರವಾಸಿಗರಿಂದ ತುಂಬಿದ ಮನಾಲಿ: ಟ್ವಿಟ್ಟರ್‌ನಲ್ಲಿ ಟ್ರೋಲ್‌ಗಳ ಸುರಿಮಳೆ

  ಕೊರೋನಾ ಎರಡನೇ ಅಲೆ ದೇಶದಲ್ಲಿ ಮರಣ ಮೃದಂಗವನ್ನೇ ಬಾರಿಸಿದೆ. ಲಕ್ಷಾಂತರ ಮಂದಿ ಸೋಂಕಿಗೆ ಮೃತಪಟ್ಟಿದ್ದರು. ಈ ನಡುವೆ ಲಸಿಕೆ ಪಡೆದ ಬಳಿಕ ಜನರು ತಮಗೆ ಏನು ಆಗುವುದಿಲ್ಲ ಎಂದು ಎಲ್ಲೆಡೆ ಮುಕ್ತವಾಗಿ ಸಂಚರಿಸುತ್ತಿರುವುದು ಕಂಡು ಬಂದಿದೆ. ಓಮೈಕ್ರಾನ್​ ಸೋಂಕು ಲಸಿಕೆಗೂ ಬಗ್ಗುವುದಿಲ್ಲ. ಈ ಹಿನ್ನಲೆ ಮುನ್ನೆಚ್ಚರಿಕೆವಹಿಸುವಂತೆ ಪ್ರಧಾನಿ ಮೋದಿ ಅವರು ಕೂಡ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದರು.

  ಆದರೂ, ಜನರು ಇದೆಲ್ಲವನ್ನು ಮರೆತು ಪ್ರವಾಸ ಹೋಗುತ್ತಿರುವುದನ್ನು ನೋಡಿದ ಹಲವು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಗೋವಾದ ರಸ್ತೆಗಳು ಹೆಚ್ಚು ಜನದಟ್ಟಣೆಯಿಂದ ತುಂಬಿರುವ ಹಿನ್ನೆಲೆ ನೆಟ್ಟಿಗರು ಮತ್ತಷ್ಟು ಆತಂಕ ಹಾಗೂ ನಿರಾಶೆ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ಸಾಮಾಜಿಕ ಅಂತರ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

  ಹೊಸ ತಳಿ ಓಮೈ ಕ್ರಾನ್ ವೈರಸ್ ಜಗತ್ತಿನಾದ್ಯಂತ ನಿಯಂತ್ರಣ ಕ್ರಮಗಳನ್ನು ಮರಳಿ ತರುವಂತೆ ಮಾಡಿದೆ. ಇದು ಅತ್ಯಧಿಕ ಸಾಂಕ್ರಾಮಿಕ ಎನ್ನಲಾಗಿದೆ. ಆದರೆ ಅದರ ತೀವ್ರತೆ ಅಷ್ಟೇನೂ ಮಾರಕವಲ್ಲ ಎಂದು ಹೇಳಿದೆ ರೋಗ ಲಕ್ಷಣಗಳು ಇರುವ ಎಲ್ಲರೂ ಕೂಡಲೇ ಸ್ವಯಂ ಐಸೋಲೇಟ್‌ಗೆ ಒಳಗಾಗಬೇಕು ಮತ್ತು ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
  Published by:Seema R
  First published: