Goa Polls: ಉತ್ಪಲ್ ಓಲೈಕೆಗೆ ಬಿಜೆಪಿ ಕಸರತ್ತು; ಪರಿಸ್ಥಿತಿ ಲಾಭ ಪಡೆಯಲು ಮುಂದಾದ ಎಎಪಿ

ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಆಮ್​ ಆದ್ಮಿ ಪಕ್ಷ ಇದೀಗ ಉತ್ಪಲ್​​​​ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ.

ಉತ್ಪಲ್​ ಪರಿಕ್ಕರ್​

ಉತ್ಪಲ್​ ಪರಿಕ್ಕರ್​

  • Share this:
    ಮುಂದಿನ ತಿಂಗಳು ಚುನಾವಣೆ ಎದುರಿಸಲು ಸಜ್ಜಾಗಿರುವ ಗೋವಾದಲ್ಲಿನ (Goa) ಬಿಜೆಪಿ (BJP) ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪಕ್ಷ ಇಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಿವಂಗತ ಮುಖ್ಯಮಂತ್ರಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (Manohar Parrikar)  ಅವರ ಮಗ ಉತ್ಪಲ್ ಪರಿಕ್ಕರ್ (Utpal Parrikar) ಅವರನ್ನು ಪಣಜಿ ಕ್ಷೇತ್ರದಿಂದ ಕೈಬಿಟ್ಟಿರುವುದು ಸಾಕಷ್ಟು ಗಮನಸೆಳೆದಿದೆ. ಇನ್ನು ಪಣಜಿ ಕ್ಷೇತ್ರದ ಪಕ್ಷದ ಟಿಕೆಟ್ ಅನ್ನು ಅಟಾನಾಸಿಯೊ ಬಾಬುಷ್ ಮಾನ್ಸೆರೇಟ್‌ಗೆ ನೀಡಲಾಗುವುದು ಎಂಬುದನ್ನು ತಿಳಿದ ಉತ್ಪನ್​ ಈ ಹಿಂದೆಯೇ ಈ ಸಂಬಂಧ ಧ್ವನಿ ಎತ್ತಿದ್ದರು.

    ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ

    ಇದರ ಬೆನ್ನಲ್ಲೇ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಿಜೆಪಿಯ ಕೇಂದ್ರ ನಾಯಕತ್ವವು ಉತ್ಪಲ್ ಪರಿಕ್ಕರ್ ಅವರೊಂದಿಗೆ ಸಂಪರ್ಕದಲ್ಲಿದೆ. ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿ ಸಮಾಧಾನ ಪಡಿಸಿದ್ದರು. ಉತ್ಪಲ್ ಪರಿಕ್ಕರ್ ಅವರ ತಂದೆಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದ ಬಗ್ಗೆ ಉನ್ನತ ಅಧಿಕಾರಿಗಳಿಗೆ ತಿಳಿದಿದೆ ಎಂದು ಕೂಡ ತಿಳಿಸಿದ್ದರು
    ಉತ್ಪನ್​ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸು ಆಸಕ್ತಿ ತೋರಿದ್ದು, ಈ ಬಗ್ಗೆ ಹೈ ಕಮಾಂಡ್​ ಕೂಡ ಚಿಂತಿಸಲಿದೆ ಎಂದಿದ್ದರು.

    ಆದರೆ ಇದೀಗ ಗೋವಾ ಬಿಜೆಪಿ ಉಸ್ತುವಾರಿ ಆಗಿರುವ ದೇವೇಂದ್ರ ಫಡ್ನವಿಸ್​, ಟಿಕೆಟ್ ಪಡೆಯಲು ಮನೋಹರ್ ಪರಿಕ್ಕರ್ ಅವರ ಮಗ ಯಶಸ್ವಿಯಾಗಿಲ್ಲ ಎಂಬ ಹೇಳಿಕೆ ನೀಡಿ, ಅವರನ್ನು ಚುನಾವಣಾ ಕಣದಿಂದ ಹೊರಗೆ ಇಟ್ಟಿದ್ದಾರೆ.

    ಇದನ್ನು ಓದಿ: ನಾಳೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಪ್ರಿಯಾಂಕಾ ಗಾಂಧಿ

    ಪರಿಸ್ಥಿತಿ ಲಾಭ ಪಡೆಯಲು ಮುಂದಾದ ಎಎಪಿ

    ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಆಮ್​ ಆದ್ಮಿ ಪಕ್ಷ ಇದೀಗ ಉತ್ಪಲ್​​​​ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ. ಈ ಘಟನೆ ಬೆನ್ನಲ್ಲೇ ಟ್ವೀಟ್​ ಮಾಡಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​, ಪರಿಕ್ಕರ್ ಕುಟುಂಬದ ಜೊತೆಗೆ ಬಿಜೆಪಿಯು ಬಳಸಿ ಬಿಸಾಕುವ ನೀತಿಯನ್ನು ಅಳವಡಿಸಿಕೊಂಡಿರುವುದಕ್ಕೆ ಗೋವಾ ಜನರು ತುಂಬಾ ದುಃಖಿತರಾಗಿದ್ದಾರೆ. ಮನೋಹರ್ ಪರಿಕ್ಕರ್ ಅವರನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಉತ್ಪಲ್ ಅವರು ನಮ್ಮ ಸೇರಲು ಬಯಸಿದರೆ ಅವರಿಗೆ ಸ್ವಾಗತ ಕೋರುತ್ತೇನೆ. ಎಎಪಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಬಹುದು ಎಂದು ತಿಳಿಸಿದ್ದಾರೆ.
    ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಉತ್ಪಲ್​ ಮತ್ತು ಅವರ ಕುಟುಂಬದ ಓಲೈಕೆಗೆ ಮುಂದಾಗಿದ್ದು, ಬಿಜೆಪಿ ಟಿಕೆಟ್​ ಅಡಿಯಲ್ಲಿಯೇ ಸ್ಪರ್ಧಿಸುವಂತೆ ಮನವೊಲಿಸಿದೆ.

    ಇದನ್ನು ಓದಿ: ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಭೀಮ್​ ಆರ್ಮಿ ಆಜಾದ್​ ಕಣಕ್ಕೆ

    ಈಗಾಗಲೇ ಪ್ರಚಾರ ಆರಂಭಿಸಿರುವ ಉತ್ಪಲ್​

    2019ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದಾಗ ಪಣಜಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗ ಉತ್ಕಲ್ ಪರಿಕ್ಕರ್ ಬಿಜೆಪಿ ಟಿಕೆಟ್ ಕೇಳಿದರು. ಆದರೆ ಆಗ ಪಕ್ಷ ಸಿದ್ಧಾರ್ಥ್ ಕುನ್ಸಿಲಿಯೆಂಕರ್‌ಗೆ ಟಿಕೆಟ್ ನೀಡಿತು. ಇದಾದ ಬಳಿಕವೂ ಚುನಾವಣೆ ಸ್ಪರ್ಧೆ ಹುಮ್ಮಸು ತೊರೆಯದ ಉತ್ಪಲ್ ಕ್ಷೇತ್ರದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಜನರ ಜೊತೆ ಉತ್ತಮ ಸಂಬಂಧ ಹೊಂದಿದ್ದರೆ, ಬಿಜೆಪಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಪಲ್ ಪರಿಕ್ಕರ್ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ ಈಗಾಗಲೇ ಅವರರು ಮನೆ ಮನೆ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.

    ಉತ್ಪಾಲ್ ಅವರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಉತ್ಪಲ್ ಅವರಿಗೆ ಈಗಾಗಲೇ ಎರಡು ಆಯ್ಕೆಗಳನ್ನು ನೀಡಲಾಗಿದೆ ಎಂದು ಹೇಳಿದೆ. ಅದರಲ್ಲಿ ಒಂದನ್ನು ಅವರು ತಿರಸ್ಕರಿಸಿದ್ದು, ಮತ್ತೊಂದು ಸ್ಥಾನಕ್ಕಾಗಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
    Published by:Seema R
    First published: