Goa Panchayat Polls: ಗೋವಾದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು! ಪಂಚಾಯತ್ ಚುನಾವಣೆಯಲ್ಲಿ ದಾಖಲೆಯ ಜಯಭೇರಿ

ನಾವು 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ವಿಧಾನಸಭೆ, ಲೋಕಸಭೆಯ ನಂತರ ಈಗ ನಾವು ಪಂಚಾಯತ್ ಚುನಾವಣೆಗಳನ್ನು ಸಹ ಗೆದ್ದಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಗೋವಾ ಸಿಎಂ ಪ್ರಮೋದ್ ಸಾವಂತ್

ಗೋವಾ ಸಿಎಂ ಪ್ರಮೋದ್ ಸಾವಂತ್

  • Share this:
    ಪಣಜಿ: ಗೋವಾ ಪಂಚಾಯತ್ ಚುನಾವಣೆಯಲ್ಲಿ 186 ಸ್ಥಾನಗಳಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆದ್ದಿದೆ. ಗೋವಾದ 186 ಪಂಚಾಯತ್ ಸಂಸ್ಥೆಗಳಿಗೆ ಆಗಸ್ಟ್ 10 ರಂದು ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister Pramod Sawant) ಹೇಳಿದ್ದಾರೆ. ಗೋವಾದಲ್ಲಿ 186 ಪಂಚಾಯತ್ ಸಂಸ್ಥೆಗಳಿಗೆ ಆಗಸ್ಟ್ 10 ರಂದು ನಡೆಸಲಾಗಿದ್ದ ಚುನಾವಣೆಗಳ ಫಲಿತಾಂಶಗಳು ಪ್ರಕಟವಾಗಿವೆ. ನಾವು 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ವಿಧಾನಸಭೆ, ಲೋಕಸಭೆಯ ನಂತರ ಈಗ ನಾವು ಪಂಚಾಯತ್ ಚುನಾವಣೆಗಳನ್ನು ಸಹ ಗೆದ್ದಿದ್ದೇವೆ. ಈ ಚುನಾವಣಾ ಫಲಿತಾಂಶ (Goa Panchayat Polls Results) ನಮ್ಮ ಕೆಲಸವನ್ನು ತೋರಿಸುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

    ಆಗಸ್ಟ್ 10 ರಂದು ನಡಿದ್ದ ಗೋವಾ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 78.70 ರಷ್ಟು ಮತದಾನವಾಗಿದೆ ಎಂದು ವರದಿಯಾಗಿತ್ತು.

    ದಾಖಲೆ ನಿರ್ಮಿಸಿದ ಬಿಜೆಪಿ
    ಗೋವಾ ಪಂಚಾಯತ್‌ ಚುನಾವಣೆಗಳಲ್ಲಿ ಯಾವುದೇ ಪಕ್ಷ ಇಷ್ಟೊಂದು ಸ್ಥಾನ ಗಳಿಸಿರುವುದು ಇದೇ ಮೊದಲು ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತನವಡೆ ಎಎನ್‌ಐಗೆ ತಿಳಿಸಿದ್ದಾರೆ.  ಮೊದಲ ಬಾರಿಗೆ ಗೋವಾ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷವು ಇಷ್ಟು ಸ್ಥಾನಗಳನ್ನು ಗೆದ್ದಿದೆ, ಇದು ಬಿಜೆಪಿಯ ಐತಿಹಾಸಿಕ ಗೆಲುವು ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತನವಡೆ ವ್ಯಾಖ್ಯಾನಿಸಿದ್ದಾರೆ.

    82 ವರ್ಷದ ಅಭ್ಯರ್ಥಿ ಗೆಲುವು
    ಗೋವಾ ಅಸೆಂಬ್ಲಿ ಸ್ಪೀಕರ್ ಮತ್ತು ಬಿಜೆಪಿ ನಾಯಕ ರಮೇಶ್ ತಾವಡ್ಕರ್ ಅವರ ಪತ್ನಿ ಸವಿತಾ ತಾವಡ್ಕರ್ ಅವರು ಪೊಯಿಂಗ್ವಿನಿಮ್‌ನಿಂದ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಲ್ಲದೇ ವ್ಯಾನ್ ಮೌಲಿಂಗ್ಯು ಕುಡ್ಚಿರೆ ಗ್ರಾಮ ಪಂಚಾಯತ್‌ನ 6 ನೇ ವಾರ್ಡ್‌ನ 82 ವರ್ಷದ ಅಭ್ಯರ್ಥಿ ಭಾಗೋ ಭೈರೋ ವರಕ್ ಅವರು ಈ ವರ್ಷದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ? ಅವರ ಬಳಿಯಿರುವ ಹಣವೆಷ್ಟು? ಮಾಹಿತಿ ಬಿಡುಗಡೆ

    ಸುನೀತಾ ಬುಗ್ಡೆ ಅವರು 2ನೇ ವಾರ್ಡ್ ವೈದೊಂಗರ್ ಪಾರ್ಸೆಮ್ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ. 493 ಮತಗಳ ಪೈಕಿ 274 ಮತಗಳನ್ನು ಪಡೆದ ಅವರು 127 ಮತಗಳ ಅಂತರದಿಂದ ಗೆದ್ದರು. 72 ವರ್ಷದ ನಾಯಕಿ, ರುಕ್ಮಿಣಿ ಗಾಂವ್ಕರ್ ಅವರು ದಾಬಲ್ ಕಿರ್ಲಾಪಾಲ್ ಗ್ರಾಮದ ವಾರ್ಡ್ 7 ರಿಂದ ಗೆದ್ದಿದ್ದಾರೆ.

    900 ಬಿಜೆಪಿ ಬೆಂಬಲಿಗರ ಗೆಲುವು

    ನಿನ್ನೆ ಮತ ಎಣಿಕೆ ಆರಂಭವಾಗುವ ಮುನ್ನ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ್ ಸೆಟ್ ತನವಡೆ ಬಿಜೆಪಿ ಆಡಳಿತದಲ್ಲಿ ಗರಿಷ್ಠ ಪಂಚಾಯತಿಗಳ ಹಕ್ಕು ಚಲಾಯಿಸಿ ಈಗಾಗಲೇ 900 ಬಿಜೆಪಿ ಬೆಂಬಲಿಗರು ಗೆದ್ದಿದ್ದಾರೆ ಎಂದು ಹೇಳಿದ್ದರು.

    ಮಹಾರಾಷ್ಟ್ರ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ
    ಮಹಾರಾಷ್ಟ್ರದಲ್ಲಿ ಬಿಜೆಪಿಯಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುತ್ತಿದೆ. ಏಕನಾಥ ಶಿಂಧೆ ಅವರ ಜೊತೆಗೂಡಿ ಹೊಸ ಸರ್ಕಾರ ರಚಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಘಟಕಕ್ಕೆ ಹೊಸ ಅಧ್ಯಕ್ಷರನ್ನೂ ಸಹ ಬಿಜೆಪಿ (Maharashtra BJP) ನೇಮಿಸಿದೆ. ಮಾಜಿ ಇಂಧನ ಸಚಿವ ಮತ್ತು ಒಬಿಸಿ ನಾಯಕ ಚಂದ್ರಶೇಖರ್ ಬವಾನ್‌ಕುಲೆ ಅವರನ್ನು ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಮಾಜಿ ಶಾಲಾ ಶಿಕ್ಷಣ ಸಚಿವ ಮತ್ತು ಮರಾಠ ನಾಯಕ ಆಶಿಶ್ ಶೆಲಾರ್ ಮುಂಬೈ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬವಾಂಕುಲೆ ಮತ್ತು ಶೇಲಾರ್ ಇಬ್ಬರೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಆಪ್ತರು.

    ಇದನ್ನೂ ಓದಿ: Free Fall of Freebies: ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಂದ ಉಚಿತ ಕೊಡುಗೆ; ಸುಪ್ರೀಂಕೋರ್ಟ್ ಮಹತ್ವದ ಸೂಚನೆ

    2019 ರ ವಿಧಾನಸಭಾ ಚುನಾವಣೆಯಲ್ಲಿ ಬವಾನ್​ಕುಲೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಅವರು ಜೂನ್ 20 ರಂದು ರಾಜ್ಯ ಪರಿಷತ್ತಿಗೆ ಆಯ್ಕೆಯಾಗಿದ್ದರು. ಈ ಹಿಂದೆ ಮುಂಬೈ ಬಿಜೆಪಿ ಮುಖ್ಯಸ್ಥರಾಗಿದ್ದ ಶೇಲಾರ್ ಪ್ರಕರಣದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು.
    Published by:guruganesh bhat
    First published: