Goa Election: ಮುಂದಿನ ವಾರ ಗೋವಾ ಚುನಾವಣಾ ಕಣಕ್ಕಿಳಿಯಲಿರುವ ಮಮತಾ ಬ್ಯಾನರ್ಜಿ

ಮಾಜಿ  ಮುಖ್ಯಮಂತ್ರಿ ಲುಝಿನ್ಹೋ ಫಲೇರೋ ಮತ್ತು ಕಾಂಗ್ರೆಸ್ ಪಕ್ಷದ ಇತರ ದೊಡ್ಡ ನಾಯಕರು ಈಗಾಗಲೇ ಟಿಎಂಸಿಗೆ ಸೇರಿಕೊಂಡಿದ್ದು ಮಮತಾ ಬ್ಯಾನರ್ಜಿ ಭೇಟಿ ವೇಳೆ ಇನ್ನಷ್ಟು ಜನ ಟಿಎಂಸಿ ಸೇರುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

  • Share this:
ನವದೆಹಲಿ (ಅ. 22): ಮುಂದಿನ‌ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರಾಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ‌ 2024ರ ಲೋಕಸಭಾ‌ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಉತ್ತರ ಪ್ರದೇಶ‌ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದರೆ ಎರಡು ಪ್ರಮುಖ ಪ್ರತಿಪಕ್ಷಗಳಾದ ಆಮ್ ಆದ್ಮಿ‌ಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷಗಳ ನೆಲೆ ವಿಸ್ತರಣೆ ಆಗುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಿದೆ. ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banarji) ಮುಂದಿನವಾರ ಗೋವಾಕ್ಕೆ ಭೇಟಿ ನೀಡಲಿದ್ದು ಅಲ್ಲಿನ‌ ಚುನಾವಣಾ ಕಣ ಇನ್ನಷ್ಟು ರಂಗೇರುವ ಸಾಧ್ಯತೆ ಇದೆ.

ತೃಣಮೂಲ ಕಾಂಗ್ರೆಸ್ ಪಕ್ಷ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದಾಗಲೇ ಇಂಥದೊಂದು ಕುತೂಹಲ ನಿರ್ಮಾಣ ಆಗಿತ್ತು. ಇತ್ತೀಚಿಗೆ ಟಿಎಂಸಿ ಗೋವಾದಲ್ಲಿ ಇಡುತ್ತಿರುವ ಹೆಜ್ಜೆಗಳಿಂದ ಆ ಪಕ್ಷ ತನ್ನ ಪ್ರಚಾರಕ್ಕೆ ಸ್ಟಾರ್ ಗಳನ್ನು ಸೆಳೆಯಲು ನೋಡುತ್ತಿದೆ ಎಂಬುದು ಗೊತ್ತಾಗಲಿದೆ. ಈಗ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ಗೋವಾಕ್ಕೆ ಭೇಟಿ ನೀಡಿ ಚುನಾವಣಾ ತಂತ್ರ ರೂಪಿಸಲಿದ್ದಾರೆ. ಅಕ್ಟೋಬರ್ 28ರಿಂದ ಎರಡು ದಿನ‌ ಗೋವಾದಲ್ಲಿ ಇರಲಿರುವ ಮಮತಾ ಬ್ಯಾನರ್ಜಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Election Strategist Prashant Kishor) ಗೋವಾದಲ್ಲಿ ದೀರ್ಘಕಾಲ ಬೀಡುಬಿಟ್ಟು ಟಿಎಂಸಿ ಪರ ರಣತಂತ್ರ ರೂಪಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡಿದಾಗ ಪ್ರಶಾಂತ್ ಕಿಶೋರ್ ಕೂಡ ಜೊತೆಗಿರುವ ಸಾಧ್ಯತೆ ಇದೆ. ಮಾಜಿ  ಮುಖ್ಯಮಂತ್ರಿ ಲುಝಿನ್ಹೋ ಫಲೇರೋ (Former Chief Minister Luizinho Falerio) ಮತ್ತು ಕಾಂಗ್ರೆಸ್ (Congress) ಪಕ್ಷದ ಇತರ ದೊಡ್ಡ ನಾಯಕರು ಈಗಾಗಲೇ ಟಿಎಂಸಿಗೆ ಸೇರಿಕೊಂಡಿದ್ದು ಮಮತಾ ಬ್ಯಾನರ್ಜಿ ಭೇಟಿ ವೇಳೆ ಇನ್ನಷ್ಟು ಜನ ಟಿಎಂಸಿ ಸೇರುವ ಸಾಧ್ಯತೆ ಇದೆ.

ಕಳೆದ ವಾರ ಗೋವಾ ಪ್ರವಾಸದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೇರಿಕ್ ಓ'ಬ್ರೆಯನ್ (Trinamool Congress Rajasabha Member Derek O’Brien) ಅವರು ಗಾಯಕ ಲಕ್ಕಿ ಅಲಿ (Singer Lucky Ali) ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ (Actress and Activist Nafisa Ali) ಅವರನ್ನು ಭೇಟಿಯಾಗಿ ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 18 (News 18) ಜೊತೆ ಮಾತನಾಡಿದ್ದ ಡೇರಿಕ್ ಓ'ಬ್ರೆಯನ್, 'ರಾಜಕಾರಣಿಗಳು ಮಾತ್ರವಲ್ಲ, ನಾವು ಎಲ್ಲಾ ವರ್ಗದ ಜನರನ್ನು, ನಿರ್ದಿಷ್ಟವಾಗಿ ನಾಗರಿಕ ಸಮಾಜದ (Civil Society) ಜನರನ್ನು ಭೇಟಿಯಾಗುತ್ತಿದ್ದೇವೆ. ಹಾಗಾಗಿ ಎಲ್ಲೆಡೆಯಿಂದ ಜನರು ಟಿಎಂಸಿಗೆ ಸೇರುವುದನ್ನು ನೀವು ನೋಡುತ್ತೀದ್ದೀರಿ' ಎಂದು ಹೇಳಿದ್ದರು.

ಡೇರಿಕ್ ಓ'ಬ್ರೆಯನ್ ಅವರನ್ನು ಭೇಟಿ ಮಾಡಿದ ಫೋಟೋ ಜೊತೆ ನಫೀಸಾ ಅಲಿ, 'ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಗೋವಾದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ ಸಂತೋಷವನ್ನು  ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.  "ಭಾರತಕ್ಕೆ ಈಗ ಉತ್ತಮ ನಾಯಕತ್ವದ ಅಗತ್ಯವಿದೆ ಮತ್ತು ಮಮತಾ ಬ್ಯಾನರ್ಜಿ ಗೋವಾದಿಂದ ಸ್ಪರ್ಧಿಸಲು ನಿರ್ಧರಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಗೋವಾ ಭವಿಷ್ಯದ ಬಗ್ಗೆ ಯೋಚಿಸಬಲ್ಲ ಒಬ್ಬ ಉತ್ತಮ ನಾಯಕನ ಅಗತ್ಯವಿದೆ' ಎಂದು ಒತ್ತಿ ಹೇಳಿದ್ದರು. ಸದ್ಯ ಗೋವಾದಲ್ಲಿ ಉಳಿದಿರುವ ನಫೀಸಾ ಅಲಿ ಅವರು ಮಮತಾ ಬ್ಯಾನರ್ಜಿ ಅವರನ್ನು 'ಹುಲಿ' ಎಂದು ಸಂಬೋಧಿಸಿದ ಕೆಲವೇ ದಿನಗಳಲ್ಲಿ ಈ ಪೋಸ್ಟ್ (Post) ಬಂದಿದೆ. ನಫೀಸಾ ಅಲಿ ಹಿಂದೆ ಪಶ್ಚಿಮ ಬಂಗಾಳದಲ್ಲೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಮತ್ತೊಂದೆಡೆ ಲಕ್ಕಿ ಅಲಿ ಅವರು ಕೂಡ ಇತ್ತೀಚೆಗೆ ಹೆಚ್ಚಾಗಿ ಗೋವಾದಲ್ಲಿಯೇ ಇರುತ್ತಾರೆ. 90ರ ದಶಕದಲ್ಲಿ ಅವರ "ಓ ಸನಮ್" (O Sanam) ಚಿತ್ರ ಬಹಳ ಹಿಟ್ ಆಗಿತ್ತು.

ಇದನ್ನು ಓದಿ: Hangal By Election 2021: ಸಿದ್ದರಾಮಣ್ಣ ಬಂದರೆ ನಮ್ಮ ತಾಲೂಕಿಗೆ ಏನು ಮಾಡಿದ್ದೀರಿ ಎಂದು ಕೇಳಿ; ಜನರಿಗೆ ಸಿಎಂ ಬೊಮ್ಮಾಯಿ ಸಲಹೆ!

ಮೂಲಗಳು ನಫೀಸಾ ಅಲಿ ಮತ್ತು ಲಕ್ಕಿ ಅಲಿ ಅವರ ಪಾತ್ರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಏನಿರಲಿದೆ ಎಂಬುದನ್ನು ಹೇಳುತ್ತಿಲ್ಲವಾದರೂ ಇವರು ಸ್ಟಾರ್ ಪ್ರಚಾರಕರಾಗಬಹುದು, ಟಿಎಂಸಿಯಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಟಿಎಂಸಿ ನಾಯಕರು ಹೇಳುವ ಪ್ರಕಾರ ಪಕ್ಷವು ಗೋವಾದ ಬಗ್ಗೆ ತುಂಬಾ ಗಂಭೀರವಾಗಿದೆ. ಮಮತಾ ಬ್ಯಾನರ್ಜಿ ಅವರ ಬಳಿಕ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಅಭಿಷೇಕ ಬ್ಯಾನರ್ಜಿ (Abhishek Banerjee) ಕೂಡ ಶೀಘ್ರದಲ್ಲೇ ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
Published by:HR Ramesh
First published: