ಮಾಲೀಕಳನ್ನು ಕೊಂದು ಓಡಿದ ತೋಟದ ಕೆಲಸಗಾರನೂ ಶವವಾದ!

65 ವರ್ಷದ ಮುಂಬೈ ಮೂಲದ ಶಿರಿನ್ ಮೋಡಿ ಕೊಲೆಯಾದ ಕಲಾವಿದೆ. ಗೋವಾದ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ತೋಟದ ಕೆಲಸಗಾರ ಪ್ರಫುಲ್ಲ ಮೇಲೆ ಕೋಪಗೊಂಡಿದ್ದ ಒಡತಿ ಶಿರಿನ್ ಆತನೊಂದಿಗೆ ಜಗಳವಾಡಿದ್ದಳು. ಇದೇ ಕೋಪದಲ್ಲಿ ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಅಕ್ಕಪಕ್ಕದ ಮೆನಯವರು ತಿಳಿಸಿದ್ದಾರೆ.

Sushma Chakre | news18-kannada
Updated:October 8, 2019, 3:53 PM IST
ಮಾಲೀಕಳನ್ನು ಕೊಂದು ಓಡಿದ ತೋಟದ ಕೆಲಸಗಾರನೂ ಶವವಾದ!
ಮೃತ ಕಲಾವಿದೆ ಶಿರಿನ್ ಮೋಡಿ
  • Share this:
ಪಣಜಿ (ಅ. 8): ಗೋವಾ ಮೂಲದ 65 ವರ್ಷದ ಕಲಾವಿದೆಯೊಬ್ಬರು ತೋಟದ ಮನೆಯಲ್ಲಿ ಕೊಲೆಯಾಗಿದ್ದು, ಆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೇ ಹತ್ಯೆ ಮಾಡಿದ್ದಾನೆ. ಆದರೆ, ಮಾಲೀಕಳನ್ನು ಕೊಲೆ ಮಾಡಿ ಓಡಿ ಹೋಗುವಾಗ ತೋಟದಲ್ಲಿ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯದೆ ಮಾಲೀಕಳು ಸಾವನ್ನಪ್ಪಿದ ಮಾರನೇ ದಿನವೇ ಮರಣ ಹೊಂದಿದ್ದಾನೆ.

65 ವರ್ಷದ ಮುಂಬೈ ಮೂಲದ ಶಿರಿನ್ ಮೋಡಿ ಕೊಲೆಯಾದ ಕಲಾವಿದೆ. ಗೋವಾದ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು. ತೋಟದ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ತೋಟದ ಕೆಲಸಗಾರ ಪ್ರಫುಲ್ಲಾ ತನ್ನ ಮಾಲೀಕಳನ್ನು ಕೊಲೆ ಮಾಡಿದ್ದಾನೆ. ಅಸ್ಸಾಂ ಮೂಲದ ಪ್ರಫುಲ್ಲಾ ಕಲಾವಿದೆ ಶಿರಿನ್ ಮೋಡಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಭಾನುವಾರ ಪ್ರಫುಲ್ಲ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಓಡುವಾಗ ತೋಟದಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದ. ಆತನನ್ನು ಗೋವಾ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿತ್ತು.

ಭಿಕ್ಷುಕಿಯ ಚೆಕ್ ನೋಡಿದ ಬ್ಯಾಂಕ್​ ಅಧಿಕಾರಿಗಳು ಶಾಕ್; ಭಿಕ್ಷೆ ಬೇಡಿ ಆಕೆ ಸಂಪಾದಿಸಿದ್ದು 5.62 ಕೋಟಿ ರೂ!

ಅಕ್ಕಪಕ್ಕದ ಮನೆಯವರು ಪ್ರಫುಲ್ಲನನ್ನು ಆಸ್ಪತ್ರೆಗೆ ಸೇರಿಸಿದರೂ ಆತ ಬದುಕುಳಿಯಲಿಲ್ಲ. ತನ್ನ ತೋಟದ ಕೆಲಸಗಾರ ಪ್ರಫುಲ್ಲ ಮೇಲೆ ಕೋಪಗೊಂಡಿದ್ದ ಒಡತಿ ಶಿರಿನ್ ಆತನೊಂದಿಗೆ ಜಗಳವಾಡಿದ್ದಳು. ಇದೇ ಕೋಪದಲ್ಲಿ ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಅಕ್ಕಪಕ್ಕದ ಮೆನಯವರು ತಿಳಿಸಿದ್ದಾರೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪಕ್ಕದ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು ಪ್ರಫುಲ್ಲ ಆತಂಕದಿಂದ ತೋಟದ ಕಡೆಗೆ ಓಡಿಹೋಗುತ್ತಿರುವುದು ನಿಜ ಎಂದಿದ್ದಾರೆ. ಆದರೆ, ಈ ಕೊಲೆಗೆ ನಿಖರವಾದ ಕಾರಣ ಏನೆಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಈ ಬಗ್ಗೆ ಗೋವಾದ ಅರ್ಜುನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

First published:October 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading