Cardiac Arrest: ವಿಮಾನದಲ್ಲೇ ಹಾರ್ಟ್ ಅಟಾಕ್! ಆ ಪ್ರಯಾಣಿಕರ ಜೀವ ಉಳಿದದ್ದೇ ವಿಸ್ಮಯ!
ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರು ಸಹಾಯಕ್ಕಾಗಿ ಕೂಗುತ್ತಿದ್ದಂತೆ ಗೋ ಫಸ್ಟ್ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಅವರ ಕಡೆಗೆ ಓಡಿಬಂದರು. ಆದರೆ ಅಷ್ಟರಲ್ಲಾಗಲೇ ಯೂನಸ್ ರಾಯನ್ರೋತ್ ನಾಡಿಮಿಡಿತ ಮತ್ತು ಉಸಿರಾಟವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ವಿಮಾನ ಪ್ರಯಾಣದ ಮಧ್ಯೆ ಪ್ರಯಾಣಿಕರಿಗೆ ಆಕಸ್ಮಾತ್ ಹೃದಯಾಘಾತ (Cardiac Arrest) ಆಗಿಬಿಟ್ಟರೆ? ಮನೆಯಲ್ಲಿದ್ದಾಗಲೇ ಅಂತಹ ತುರ್ತು ಪರಿಸ್ಥಿತಿ ಉಂಟಾದರೆ ಏನು ಮಾಡಬೇಕು ಎಂದು ಒಮ್ಮೆಗೆ ಹೊಳೆಯುವುದೇ ಇಲ್ಲ. ಆದರೆ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಹಾರ್ಟ್ ಅಟಾಕ್ ಆದರೂ ಅವರಿಗೆ ತುರ್ತು ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ ಘಟನೆಯೊಂದು ವರದಿಯಾಗಿದೆ. ಕಣ್ಣೂರಿನಿಂದ ದುಬೈಗೆ ಗೋ ಫಸ್ಟ್ ವಿಮಾನದಲ್ಲಿ (Kannur-Dubai Flight) ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿಯೇ ಅಚಾನಕ್ ಆಗಿ ಹೃದಯ ಸ್ತಂಭನ ಸಂಭವಿಸಿದೆ. ಅದೃಷ್ಟವಷಾತ್ ಕ್ಯಾಬಿನ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ (GoFirst Flight) ಪ್ರಯಾಣಿಕರ ಜೀವ ಉಳಿದಿದೆ.
ಯೂನಸ್ ರಾಯನ್ರೋತ್ ಎಂಬ ವ್ಯಕ್ತಿಯೋರ್ವರು ಗೋ ಫಸ್ಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಅಚಾನಕ್ ಆಗಿ ಆಗಿ ಅವರಿಗೆ ಹೃದಯ ಸ್ತಂಭನವಾಗಿದೆ.
ವಿಮಾನಯಾನ ಕಂಪನಿ ತಿಳಿಸಿದ್ದು ಏನು? ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರು ಸಹಾಯಕ್ಕಾಗಿ ಕೂಗುತ್ತಿದ್ದಂತೆ ಗೋ ಫಸ್ಟ್ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಅವರ ಕಡೆಗೆ ಓಡಿಬಂದರು. ಆದರೆ ಅಷ್ಟರಲ್ಲಾಗಲೇ ಯೂನಸ್ ರಾಯನ್ರೋತ್ ನಾಡಿಮಿಡಿತ ಮತ್ತು ಉಸಿರಾಟವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಒಂದು ಸೆಕೆಂಡ್ನ್ನೂ ವೇಸ್ಟ್ ಮಾಡದ ಸಿಬ್ಬಂದಿ! ಇದನ್ನರಿತ ಗೋ ಫಸ್ಟ್ ವಿಮಾನದ ಸಿಬ್ಬಂದಿ ಒಂದು ಸೆಕೆಂಡ್ನ್ನು ಕೂಡ ವ್ಯರ್ಥ ಮಾಡಲಿಲ್ಲ. ಇತರ ಪ್ರಯಾಣಿಕರ ಸಹಾಯದಿಂದ ಯೂನಸ್ ರಾಯನ್ರೋತ್ ಅವರನ್ನು ಹಿಂಭಾಗದ ಗಾಲಿ ನೆಲದ ಮೇಲೆ ಇರಿಸಲಾಯಿತು. ತಕ್ಷಣವೇ ಸಿಬ್ಬಂದಿ ಸಿಪಿಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಅಚ್ಚರಿ ಎಂಬಂತೆ ವಿಮಾನದಲ್ಲಿ ವೈದ್ಯರೂ ಇದ್ದರು! ಅದೃಷ್ಟವಶಾತ್ ವೃತ್ತಿಯಿಂದ ವೈದ್ಯರಾದ ಡಾಕ್ಟರ್ ಶಬರ್ ಅಹ್ಮದ್ ಎಂಬುವವರು ಸಹ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಆಘಾತಕ್ಕೆ ಒಳಗಾಗಿದ್ದ ಯೂನಸ್ ರಾಯನ್ರೋತ್ ಅವರಿಗೆ ಚಿಕಿತ್ಸೆ ನೀಡಿದರು. ಹೀಗಾಗಿ ಯೂನಸ್ ರಾಯನ್ರೋತ್ ಅವರ ಜೀವ ಉಳಿಯಿತು.
ವಾಡಿಯಾ ಗ್ರೂಪ್ ಒಡೆತನದ ಗೋ ಫಸ್ಟ್ ಏರ್ಲೈನ್ ಕ್ಯಾಬಿನ್ ಸಿಬ್ಬಂದಿಗೆ ಅವರ ಸಮಯೋಚಿತ ಹಸ್ತಕ್ಷೇಪಕ್ಕಾಗಿ ನಗದು ಬಹುಮಾನವನ್ನು ಘೋಷಿಸಿದೆ ಎಂದು ವರದಿಯಾಗಿದೆ.
ವಿಮಾನವು ದುಬೈನಲ್ಲಿ ನಿಗದಿತ ಸಮಯಕ್ಕೆ ಲ್ಯಾಂಡಿಂಗ್ ಆಯಿತು. ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಪ್ರಯಾಣಿಕ ಯೂನಸ್ ರಾಯನ್ರೋತ್ ಅವರನ್ನು ವಿಮಾನದಿಂದ ಗಾಲಿಕುರ್ಚಿಯಲ್ಲಿ ಇಳಿಸಲಾಯಿತು. ಹೀಗೆ ಗೋ ಫಸ್ಟ್ ವಿಮಾನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಾಗಿದ್ದ ವೈದ್ಯರೊಬ್ಬರ ಸಹಾಯದಿಂದ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೋರ್ವರ ಜೀವ ಉಳಿದಿದೆ.
ವಿಮಾನ ಸಿಬ್ಬಂದಿಗೆ ನಗದು ಬಹುಮಾನ! ತನ್ನ ಪ್ರಯಾಣಿಕರ ಜೀವ ಉಳಿಸಿದ ಸಿಬ್ಬಂದಿಯನ್ನು ನಗದು ಬಹುಮಾನದೊಂದಿಗೆ ಅಭಿನಂದಿಸಲು ಗೋ ಫಸ್ಟ್ ನಿರ್ಧರಿಸಿದೆ. ಅದೃಷ್ಟವಶಾತ್ ವೃತ್ತಿಯಿಂದ ವೈದ್ಯರಾದ ಡಾಕ್ಟರ್ ಶಬರ್ ಅಹ್ಮದ್ ಎಂಬುವವರು ಸಹ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಆಘಾತಕ್ಕೆ ಒಳಗಾಗಿದ್ದ ಯೂನಸ್ ರಾಯನ್ರೋತ್ ಅವರಿಗೆ ಚಿಕಿತ್ಸೆ ನೀಡಿದರು. ಹೀಗಾಗಿ ಯೂನಸ್ ರಾಯನ್ರೋತ್ ಅವರ ಜೀವ ಉಳಿಯಿತು. GO FIRST ನೆಟ್ವರ್ಕ್ನಲ್ಲಿ ಯಾವುದೇ ದೇಶೀಯ ಅಥವಾ ಅಂತರಾಷ್ಟ್ರೀಯ ವಲಯಕ್ಕೆ ಹಾರಲು ಚಿಕಿತ್ಸೆ ನೀಡಿದ ವೈದ್ಯರು ಮತ್ತು ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರಿಬ್ಬರಿಗೂ ಉಚಿತ ಟಿಕೆಟ್ ಅನ್ನು ನೀಡಲು ಸಹ GO FIRST ತೀರ್ಮಾನಿಸಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ