news18-kannada Updated:January 26, 2021, 8:14 PM IST
ರಂಜಿತ್ ಸಿಂಗ್ ಡಿಸಾಲೆ
ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗಣರಾಜ್ಯೋತ್ಸವ ಅಂಗವಾಗಿ ನೆಟ್ವರ್ಕ್ 18 ಮಿಷನ್ ಪಾನಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಾರ್ಪಿಕ್ ಇಂಡಿಯಾ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ಬಾಲಿವುಡ್ ತಾರೆಯರು, ಕೇಂದ್ರ ಸಚಿವರು, ಯೋಧರು, ಸೇರಿದಂತೆ ಹಲವರು ಜಲಪ್ರತಿಜ್ಞೆ ಮಾಡಿದರು. ಇದರ ಮಧ್ಯೆ ಕಳೆದ ಡಿಸೆಂಬರ್ನಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿ ಪಡೆದು ಹೆಸರಾಗಿದ್ದ ರಂಜಿತ್ ಸಿಂಗ್ ಡಿಸಾಲೆ ಕೂಡ ಮಿಷನ್ ಪಾನಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಕ್ಕಳ ಶಿಕ್ಷಣಕ್ಕೆ ಉತ್ತೇಜನದ ಜೊತೆಗೆ ನೀರಿನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಇವರು.
ಶಿಕ್ಷಕರಾಗಿ ಗುರುತಿಸಿಕೊಂಡಿರುವ ಡಿಸಾಲೆ ಪರಿಸರವಾದಿ ಕೂಡ ಎಂಬುದು ಅನೇಕರಿಗೆ ತಿಳಿದಿಲ್ಲ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಇವರು ಲಾಕ್ಡೌನ್ ಸಂದರ್ಭದಲ್ಲಿ ಮಾಡಿದ ಕೆಲಸ ಪ್ರಶಂಸನೀಯ. ಈ ಸಮಯವನ್ನು ಸದುಪಯೋಗ ಪಡಿಸಿಕೊಂಡ ಅವರು ಮಕ್ಕಳಿಗೆ ನೀರಿನ ಸಂರಕ್ಷಣೆ ನೀರಿನ ಕೊಯ್ಲು ಕುರಿತು ಮನವರಿಕೆ ಮಾಡಿಕೊಟ್ಟರು.
ಇದನ್ನು ಓದಿ: ಗ್ರಾಮೀಣ ಮಹಿಳೆಯರ ನೀರಿನ ಬವಣೆ ಅರಿಯಲು ವಿನೂತನ ಪ್ರಯೋಗಕ್ಕೆ ಮುಂದಾದ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್
ಅಷ್ಟೇ ಅಲ್ಲದೇ ಈ ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಎಷ್ಟು ನೀರು ಮತ್ತು ವಿದ್ಯುತ್ ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ಗಮನಹರಿಸಲು ಮುಂದಾದೆವು. ಆ ದತ್ತಾಂಶದ ಪ್ರಕಾರ ನಮ್ಮ ಗ್ರಾಮದಲ್ಲಿ ಲಭ್ಯವಿರುವ ನೀರನ್ನು ಎಷ್ಟು ಸಮಯದವರೆಗೆ ಬಳಸಬಹುದು ಎಂಬ ಬಗ್ಗೆ ಯೋಜನೆ ರೂಪಿಸಿದೆವು ಎಂದು ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಳೆ ಕಡಿಮೆಯಾದರ, ಪ್ಲಾನ್ ಬಿ ಬಳಸಲು ಕೂಡ ಚಿಂತಿಸಿದೆವು. ವಿದ್ಯಾರ್ಥಿಗಳು ಕೂಡ ನೀರನ್ನು ಉಪಯುಕ್ತವಾಗಿ ಬಳಸಲು ಮುಂದಾದರು ಎಂದರು.
ಬಾಲಕಿಯರ ಶಿಕ್ಷಣ ಉತ್ತೇಜನ ಮತ್ತು ತ್ವರಿತ ಪ್ರಕ್ರಿಯೆಯ ಕೋಡೆಡ್ ಪಠ್ಯಪುಸ್ತಕ ಉತ್ತೇಜನಕ್ಕಾಗಿ ಅವರು 2020ರಲ್ಲಿ ಡಿಸಾಲೆ 1 ಮಿಲಿಯನ್ ಡಾಲರ್ ಗ್ಲೋಬಲ್ ಟೀಚರ್ ಪ್ರಶಸ್ತಿ ಗೆದ್ದಿದ್ದರು. ಶಾಲಾ ಶಿಕ್ಷಕರು ನಿಜವಾದ ಬದಲಾವಣೆಗಾರರು ಎಂಬುದಕ್ಕೆ ಮಾದರಿಯಾದ ಎಂಬುದಕ್ಕೆ ತೋರಿಸಿಕೊಟ್ಟಿದ್ದ ಇವರು ತಮ್ಮ ಬಹುಮಾನ ಮೊತ್ತದ ಅರ್ಧ ಹಣವನ್ನು ತಮ್ಮ ಅಂತಿಮ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುಕೊಂಡಿದ್ದರು.
ಮತ್ತೊಬ್ಬ ನೀರಿನ ಯೋಧರಾಗಿರುವ ಅಮ್ಲಾ ರುಯಾ ಮತ್ತು ಡಾ ಫೌಜಿಯಾ ತಾರನ್ನಮ್ , ಮಕ್ಕಳ ಪರಿಸರವಾದಿ ಲಿಸಿಪ್ರಿಯಾ ಕಾಂಜುಗಮ್ ಮತ್ತ ನಟ ಅಕ್ಷಯ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಕುರಿತು ಧ್ವನಿ ಎತ್ತಿದರು.
Published by:
Seema R
First published:
January 26, 2021, 8:10 PM IST