ಚಂದ್ರಯಾನವನ್ನು ಲೇವಡಿ ಮಾಡಿದ್ದ ಪಾಕ್​​​ನಿಂದಲೇ ಈಗ ಶಹಬ್ಬಾಸ್​ಗಿರಿ!

‘ಚಂದ್ರಯಾನ 2‘ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಕಿಸ್ತಾನದ ಈ ಮಹಿಳೆಯ ಹೆಸರು ನಮೀರಾ ಸಲೀಂ.

news18-kannada
Updated:September 9, 2019, 11:00 PM IST
ಚಂದ್ರಯಾನವನ್ನು ಲೇವಡಿ ಮಾಡಿದ್ದ ಪಾಕ್​​​ನಿಂದಲೇ ಈಗ ಶಹಬ್ಬಾಸ್​ಗಿರಿ!
ನಮೀರಾ ಸಲೀಂ
  • Share this:
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದಿರನ ಅಂಗಳಕ್ಕೆ ಹಾರಿಸಿರುವ ‘ಚಂದ್ರಯಾನ-2‘ ಯೋಜನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ನೆರೆಯ ದೇಶ ಪಾಕ್ ಮಾತ್ರ ಭಾರತದ ಕಾಲೆಳೆದಿತ್ತು. ಪಾಕಿಸ್ತಾನ ಸಚಿವ ಫವಾದ್​ ಹುಸೇನ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 'ಭಾರತ ವಿಫಲವಾಯ್ತು' ಎಂಬ ಹ್ಯಾಶ್​ಟ್ಯಾಗ್​  ಬಳಸಿ ಭಾರತಕ್ಕೆ ಗೇಲಿ ಮಾಡಿದ್ದರು.  ​ಇದೆಲ್ಲದರ ಮಧ್ಯೆ ಪಾಕಿಸ್ತಾನಿ ಮಹಿಳೆಯೊಬ್ಬರು ಭಾರತದ ಚಂದ್ರಯಾನ-2 ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಪಾಕಿಗಳಿಗೆ ಆಚ್ಚರಿ ಮೂಡುವಂತೆ ಮಾಡಿದ್ದಾರೆ.

ಇಸ್ರೋ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ‘ಚಂದ್ರಯಾನ 2‘ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್​ ಇಳಿಯುವ ಪ್ರಯತ್ನ ನಿಜಕ್ಕೂ ಐತಿಹಾಸಿಕ, ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಯಾರಿವರು..?:

‘ಚಂದ್ರಯಾನ- 2‘ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಕಿಸ್ತಾನದ ಈ ಮಹಿಳೆಯ ಹೆಸರು ನಮೀರಾ ಸಲೀಂ. ಇವರು ಪಾಕಿಸ್ತಾನದ ಮೊದಲ ಮಹಿಳಾ ಗಗನಯಾತ್ರಿಯಾಗಿದ್ದಾರೆ.  ‘ಚಂದ್ರಯಾನ-2‘ ಲ್ಯಾಂಡರ್​ ವಿಕ್ರಂ​ ವೈಫಲ್ಯಕ್ಕೆ ಪಾಕಿಸ್ತಾನಿ ಸಚಿವ ಫವಾದ್​ ಹುಸೇನ್​ ಟ್ಟಿಟ್ಟರ್​ನಲ್ಲಿ ಲೇವಡಿ ಮಾಡಿದ್ದರು. ಆದರೆ ನಮೀರಾ ಸಲೀಂ ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರ್​ ಅನ್ನು ಇಳಿಸುವ ಪ್ರಯತ್ನಕ್ಕೆ  ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್​ ತಲುಪಲು ಕೇವಲ 2.1 ಕಿ,ಮೀ ದೂರವಿದ್ದಾಗ ಭೂಮಿಯಿಂದ ತನ್ನ ಸಂಪರ್ಕ ಕಳೆದುಕೊಂಡಿತ್ತು. ಇದಾದ ಬಳಿಕ ಪಾಕ್​ ಇದೇ ವಿಷಯವನ್ನಿಟ್ಟುಕೊಂಡು ಭಾರತೀಯರ ಕಾಲೆಳೆಯುವ ಕೆಲಸ ಮಾಡಿತ್ತು. ಆದರೆ ಇದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರತೀಯರು ಸಖತ್​ ಆಗಿ ತಿರುಗೇಟು ನೀಡಿದ್ದರು.  ಎಸ್ಸೆಸ್ಸೆಲ್ಸಿ ಪಾಸಾಗದವನು ಸಿಎ ಫೇಲಾದವನಿಗೆ ಲೇವಡಿ ಮಾಡಿದಂತಾಯ್ತು ಎಂದು ಪಾಕ್​ ಸಚಿವನಿಗೆ ಕಮೆಂಟ್​ ಮಾಡಿದ್ದರು.
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ