Global Award: ಭಾರತೀಯ ವಿಜ್ಞಾನಿಗೆ ಜಾಗತಿಕ ಪ್ರಶಸ್ತಿ; ಇವರು ಮಾಡಿರುವ ಸಂಶೋಧನೆ ಏನು ಗೊತ್ತೇ?

ಕಬ್ಬಿಣ ಮತ್ತು ಸತುವು ಸಮೃದ್ಧವಾಗಿರುವ ಬಯೋಫೋರ್ಟಿಫೈಡ್ ಸಜ್ಜೆ (ಬಾಜ್ರಾ) ಅನ್ನು ಅಭಿವೃದ್ಧಿಪಡಿಸಿರುವ ಡಾ.ಮಹಾಲಿಂಗಂ ಗೋವಿಂದರಾಜ್ ಅವರ ಸಾಧನೆಯನ್ನು ಗುರುತಿಸಿ ಜಾಗತಿಕ ಪ್ರಶಸ್ತಿಯನ್ನು ನೀಡಲಾಗಿದೆ. ಹಾರ್ವೆಸ್ಟ್‌ಪ್ಲಸ್ ಮತ್ತು ಅಲೈಯನ್ಸ್ ಆಫ್ ಬಯೋವರ್ಸಿಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಟ್ರಾಪಿಕಲ್ ಅಗ್ರಿಕಲ್ಚರ್ ನಲ್ಲಿ ಹಿರಿಯ ಬೆಳೆ ಅಭಿವೃದ್ಧಿ ವಿಜ್ಞಾನಿಯಾಗಿ ಡಾ ಗೋವಿಂದರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ.ಮಹಾಲಿಂಗಂ ಗೋವಿಂದರಾಜ್

ಡಾ.ಮಹಾಲಿಂಗಂ ಗೋವಿಂದರಾಜ್

  • Share this:
ಕೃಷಿ ವಿಜ್ಞಾನಿಯಾಗಿರುವ (Agricultural Scientist) ಡಾ.ಮಹಾಲಿಂಗಂ ಗೋವಿಂದರಾಜ್ ಅವರು 2022 ರ ಭೂಮಿ ಸಂಶೋಧನೆ ಮತ್ತು ಅಪ್ಲಿಕೇಶನ್‌ಗಾಗಿ (Field Research and Application 2022) ನಾರ್ಮನ್ ಇ ಬೋರ್ಲಾಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರಿಗೆ ಈ ಪ್ರಶಸ್ತಿ (Award) ನೀಡಿರುವುದು ಕೃಷಿಯಲ್ಲಿ ಮಹಾಲಿಂಗಂ ಮಾಡಿರುವ ಸಾಧನೆಗಾಗಿ. ಕಬ್ಬಿಣ ಮತ್ತು ಸತುವು ಸಮೃದ್ಧವಾಗಿರುವ ಬಯೋಫೋರ್ಟಿಫೈಡ್ ಸಜ್ಜೆ (ಬಾಜ್ರಾ) ಅನ್ನು ಅಭಿವೃದ್ಧಿಪಡಿಸಿರುವ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಾರ್ವೆಸ್ಟ್‌ಪ್ಲಸ್ ಮತ್ತು ಅಲೈಯನ್ಸ್ ಆಫ್ ಬಯೋವರ್ಸಿಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಟ್ರಾಪಿಕಲ್ ಅಗ್ರಿಕಲ್ಚರ್ (CIAT) ನಲ್ಲಿ ಹಿರಿಯ ಬೆಳೆ ಅಭಿವೃದ್ಧಿ (Crop Development) ವಿಜ್ಞಾನಿಯಾಗಿ ಡಾ ಗೋವಿಂದರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.

2014 ರಲ್ಲಿ ವಿಶ್ವದ ಮೊದಲ ಬಯೋಫೋರ್ಟಿಫೈಡ್ ಸಜ್ಜೆ ಧನಶಕ್ತಿಯ ಆವಿಷ್ಕಾರ
ಬಯೋಫೋರ್ಟಿಫೈಡ್ ಅಥವಾ ಜೈವಿಕ ಬಲವರ್ಧನೆ ಎಂಬುದು ಬೆಳೆಗಳ ಸೂಕ್ಷ್ಮಪೋಷಕಾಂಶವನ್ನು ಹೆಚ್ಚಿಸಲು ಸಂತಾನೋತ್ಪತ್ತಿ ಮಾಡುವ ಪ್ರಕ್ರಿಯೆಯಾಗಿದೆ. ವರ್ಲ್ಡ್ ಫುಡ್ ಪ್ರೈಜ್ ಫೌಂಡೇಶನ್‌ ಹೇಳಿರುವಂತೆ ಧನಶಕ್ತಿ ಸಜ್ಜೆಯು ಮಹಿಳೆಯರು ಪ್ರತಿನಿತ್ಯ ಸೇವಿಸಬೇಕಾದ 80% ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಒದಗಿಸುತ್ತದೆ. ಇನ್ನು ಇತರ ಸಜ್ಜೆ ಪ್ರಭೇದಗಳು ಕೇವಲ 20% ದಷ್ಟು ಕಬ್ಬಿಣದ ಪೂರೈಕೆಯನ್ನು ಮಾಡುತ್ತವೆ.

ಇದನ್ನೂ ಓದಿ: Gujarat: ಇಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗುತ್ತದೆ ಜೀವಂತ ಮೊಸಳೆ ಏಣಿ ಆಟ; ಏನಿದರ ವಿಶೇಷತೆ?

ಭಾರತದಲ್ಲಿ ಸರಿಸುಮಾರು 120,000 ಕ್ಕಿಂತಲೂ ಹೆಚ್ಚಿನ ಕೃಷಿ ಕುಟುಂಬಗಳು ಧನಲಕ್ಷ್ಮಿಯನ್ನು ಬೆಳೆಯುತ್ತವೆ. ಹತ್ತಕ್ಕೂ ಹೆಚ್ಚು ಕಬ್ಬಿಣ ಮತ್ತು ಸತುವಿನ ಅಂಶವುಳ್ಳ ಸಜ್ಜೆ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಗೋವಿಂದರಾಜ್ ತೊಡಗಿದ್ದಾರೆ. ಈ ಪ್ರಭೇದಗಳನ್ನು ಕೀನ್ಯಾ, ಜಿಂಬಾಬ್ವೆ, ಸುಡಾನ್, ನೈಜರ್, ನೈಜೀರಿಯಾ ಮತ್ತು ಸೆನೆಗಲ್‌ನಲ್ಲಿಯೂ ಬೆಳೆಯಲಾಗುತ್ತಿದೆ. 2024 ರ ವೇಳೆಗೆ, ಭಾರತದಲ್ಲಿ 9 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕಬ್ಬಿಣ ಮತ್ತು ಸತು ಸಮೃದ್ಧವಾದ ಸಜ್ಜೆಯನ್ನು ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದ್ದು ಇದು ಉತ್ತಮ ಪೋಷಣೆಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.

ಭಾರತ ಹಾಗೂ ಆಫ್ರಿಕಾದ ಬಡಜನರಿಗೆ ಕಬ್ಬಿಣ ಹಾಗೂ ಸತುವಿನ ಪೂರೈಕೆ
ಗೋವಿಂದರಾಜ್ ಅವರ ಸಾಧನೆಯು ಬಡಜನರ ಪೌಷ್ಟಿಕಾಂಶವನ್ನು ಸುಧಾರಿಸಿದೆ ಮತ್ತು ಸಣ್ಣ ರೈತರ ಜೀವನೋಪಾಯವನ್ನು ಹೆಚ್ಚಿಸಿದೆ ಎಂದು ವರದಿಗಳು ಹೇಳುತ್ತವೆ. ತಮಿಳುನಾಡಿನ ಕೃಷಿ ಕುಟುಂಬದಿಂದ ಬಂದಿರುವ ಡಾ.ಗೋವಿಂದರಾಜ್ ಅವರಿಗೆ ಕೃಷಿಯ ಮೇಲಿನ ಪ್ರೀತಿ ಎಳವೆಯಲ್ಲಿಯೇ ಆರಂಭವಾಯಿತು. ಅವರು ಮೊದಲ ತಲೆಮಾರಿನ ಪದವೀಧರರಾಗಿದ್ದರು. ಭಾರತದ ದಕ್ಷಿಣ ಭಾಗದಲ್ಲಿ ಹುಟ್ಟಿ ಬೆಳೆದ ನಾನು ಹೆಚ್ಚಾಗಿ ಅಕ್ಕಿಯನ್ನೇ ಬೆಳೆಯುವ ಕುಟುಂಬದ ಸದಸ್ಯನಾಗಿರುವೆ. ನನ್ನ ಕುಟುಂಬದಲ್ಲಿ ಕಾಲೇಜಿನಿಂದ ಪದವಿ ಪಡೆದವರಲ್ಲಿ ನಾನೇ ಮೊದಲಿಗ. ವಿಜ್ಞಾನವನ್ನು ಕಲಿಯಲು ಇಷ್ಟಪಟ್ಟೆ ಅಂತೆಯೇ ವೈಜ್ಞಾನಿಕ ವಿಧಾನಗಳನ್ನು ಕೃಷಿಯ ಮೇಲೆ ಹೇಗೆ ಪರಿಣಾಮಕಾರಿಯಾಗಿಸಬಹುದು ಎಂಬುದನ್ನು ಅರಿತುಕೊಳ್ಳುವುದು ನನ್ನ ಗುರಿಯಾಗಿತ್ತು ಎನ್ನುತ್ತಾರೆ ಗೋಂವಿಂದರಾಜ್.

ಇನ್ನು, ಜೌಗು ಪ್ರದೇಶಗಳಿಗಿಂತ ಹೆಚ್ಚು ಸವಾಲಿನ ವಾತಾವರಣದಲ್ಲಿ ಬೆಳೆಯುವ ಭತ್ತವನ್ನು ಮೀರಿ ಇತರ ಬೆಳೆಯನ್ನು ಬೆಳೆಸುವ ಸಾಧ್ಯತೆಗಳ ಕುರಿತು ನಾನು ಆಕರ್ಷಿತನಾಗಿದ್ದೆ ಎಂಬುದು ಗೋವಿಂದರಾಜ್ ಅವರ ಅಭಿಪ್ರಾಯವಾಗಿದೆ. ಗೋವಿಂದರಾಜ್ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ತಮಿಳುನಾಡಿನ ಕಿಲ್ಲಿಕುಲಂನ ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಪಡೆದರು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ಸಸ್ಯ ತಳಿ ಮತ್ತು ತಳಿಶಾಸ್ತ್ರದಲ್ಲಿ ಮಾಸ್ಟರ್ ಆಫ್ ಸೈನ್ಸ್ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದರು.

ಇದನ್ನೂ ಓದಿ: Government Schools: ಗುಜರಿಗಿಂತ ಕೆಟ್ಟದಾಗಿವೆ ದೇಶದ ಸರ್ಕಾರಿ ಶಾಲೆಗಳು; ಪ್ರಧಾನಿಗೆ ಪತ್ರ ಬರೆದ ಕೇಜ್ರಿವಾಲ್‌

ಅವರು 2011 ರಿಂದ 2021 ರವರೆಗೆ ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ದಿ ಸೆಮಿ-ಆರಿಡ್ ಟ್ರಾಪಿಕ್ಸ್ (ICRISAT) ನಲ್ಲಿ CGIAR ಸಂಶೋಧಕರಾಗಿ ಕೆಲಸ ಮಾಡಿದರು. ಅವರ ಸತತ ಪ್ರಯತ್ನಗಳ ಮೂಲಕ, ಸಜ್ಜೆಯು 2018 ರಲ್ಲಿ ಕನಿಷ್ಠ ಮಟ್ಟದ ಸತು ಮತ್ತು ಕಬ್ಬಿಣವನ್ನು ಕಡ್ಡಾಯಗೊಳಿಸಿದ ಮೊದಲ ಬೆಳೆಯಾಗಿದೆ.

ವಿಶ್ವದ ಕಾರ್ಯಸೂಚಿಯಲ್ಲಿ ಪೌಷ್ಟಿಕಾಂಶದ ಭದ್ರತೆ
ಅಂತರಾಷ್ಟ್ರೀಯ ಸಜ್ಜೆ ವರ್ಷಕ್ಕೆ (2023) ಮುಂಚಿತವಾಗಿ ಈ ಪುರಸ್ಕಾರವನ್ನು ಸ್ವೀಕರಿಸುವುದು ನನಗೆ ಸಂತೋಷದ ವಿಷಯವಾಗಿದೆ. ಜೈವಿಕ ಬಲವರ್ಧಿತ ಸಜ್ಜೆಯಂತಹ ಮಧ್ಯಸ್ಥಿಕೆಗಳು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯ ನಡುವಿನ ಅಂತರವನ್ನು ತುಂಬಲು ನಮಗೆ ಅನುವು ಮಾಡಿಕೊಡುತ್ತದೆ ಎಂಬುದು ಗೋವಿಂದರಾಜ್ ಮಾತಾಗಿದೆ.
Published by:Ashwini Prabhu
First published: