Goa Election: ಗೋವಾದಲ್ಲಿ ಮೊದಲ ಚುನಾವಣೆ ನಡೆದಿದ್ದು ಯಾವಾಗ ಗೊತ್ತಾ? ಪುಟ್ಟ ರಾಜ್ಯದ ಮತದಾನದ ಇತಿಹಾಸವೇ ರೋಚಕ!

ಡಿಸೆಂಬರ್ 9, 1963 ರಂದು ಗೋವಾದಲ್ಲಿ ಮೊದಲ ಎಲೆಕ್ಷನ್​ ನಡೆಸಲಾಯಿತು. 61 ಮಂದಿ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 150 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ರು.

ದಿ ಫಸ್ಟ್ ಜನರಲ್ ಎಲೆಕ್ಷನ್ಸ್ ಇನ್ ಗೋವಾ ಪುಸ್ತಕ

ದಿ ಫಸ್ಟ್ ಜನರಲ್ ಎಲೆಕ್ಷನ್ಸ್ ಇನ್ ಗೋವಾ ಪುಸ್ತಕ

  • Share this:
450 ವರ್ಷಗಳ ಪೋರ್ಚುಗೀಸ್ (Portuguese)​  ವಸಾಹತುಶಾಹಿ ಆಳ್ವಿಕೆಯಿಂದ ವಿಮೋಚನೆಯ ನಂತರ ಅಂದ್ರೆ 720 ದಿನಗಳ ಬಳಿಕ ಗೋವಾ ಮತ್ತು ದಮನ್ ಮತ್ತು ದಿಯುನಲ್ಲಿ ಮೊದಲ ಚುನಾವಣೆ (First election) ನಡೀತು. ಡಿಸೆಂಬರ್ 9, 1963 ರಂದು ನಡೆಸಲಾಯಿತು. 61 ಮಂದಿ ಸ್ವತಂತ್ರ ಅಭ್ಯರ್ಥಿಗಳು (Independents) ಸೇರಿದಂತೆ ಒಟ್ಟು 150 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ರು. ಗೋವಾದ 28 ವಿಧಾನಸಭಾ ಸ್ಥಾನಗಳಿಗೆ ಮತ್ತು ದಮನ್ ಮತ್ತು ದಿಯುನಲ್ಲಿ ತಲಾ ಒಬ್ಬರು ಸ್ಪರ್ಧಿಸಿದ್ದಾರೆ. ಆಗ, ಗೋವಾದಲ್ಲಿ (Goa) 3,28,071 ಮತದಾರರಿದ್ರು. 427 ಮತಗಟ್ಟೆಗಳನ್ನು ತೆರೆಯಲಾಯ್ತು. ದಮನ್ ಮತ್ತು ದಿಯು ಕ್ರಮವಾಗಿ 13,083 ಮತ್ತು 8,886 ಮತದಾರರು ಮತ್ತು 16 ಮತ್ತು 11 ಮತಗಟ್ಟೆಗಳನ್ನು ಹೊಂದಿದ್ದರು. ಗೋವಾದಲ್ಲಿ, 14,662 ಮತದಾರರನ್ನು ಹೊಂದಿರುವ ಮಾಂಡ್ರೆಮ್ (Mandrem ) ದೊಡ್ಡ ಕ್ಷೇತ್ರವಾಗಿತ್ತು. 8,551 ಮತದಾರರನ್ನು ಹೊಂದಿತ್ತು.

ದಿ ಫಸ್ಟ್ ಜನರಲ್ ಎಲೆಕ್ಷನ್ಸ್ ಇನ್ ಗೋವಾ 

ಎ ಕಾಂಪ್ರೆಹೆನ್ಸಿವ್ ಸ್ಟಡಿ & ಕ್ರಿಟಿಕಲ್ ಅನಾಲಿಸಿಸ್, 146 ಪುಟಗಳ ಪುಸ್ತಕವನ್ನು ಪ್ರೊ.ಜಿ.ಎಸ್.ಹಾಲಪ್ಪ, ಕೆ. ರಾಘವೇಂದ್ರ ರಾವ್ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜಶೇಖರಯ್ಯ ಅವರು ಬರೆದಿದ್ದಾರೆ. ಇದನ್ನು 1964ರಲ್ಲಿ ಪ್ರಕಟಿಸಲಾಗಿತ್ತು. ಈ ಪುಸ್ತಕವು ರಾಜಕೀಯ ವಿಕಾಸವನ್ನು ಪರಿಶೀಲಿಸುತ್ತದೆ. ಗೋವಾದ ಸಾಮಾಜಿಕ ರಚನೆ, ರಾಜಕೀಯ ಪಕ್ಷಗಳು ಅವುಗಳ ರಚನೆ, ಚುನಾವಣಾ ಪ್ರಚಾರಗಳು, ವಿಧಾನ ಕಾರ್ಯನಿರ್ವಹಣೆ ಬಗ್ಗೆ ತಿಳಿಸುತ್ತೆ.

ಹೇಗಿತ್ತು ಗೊತ್ತಾ ಗೋವಾದ ಮೊದಲ ಎಲೆಕ್ಷನ್​?

ಚುನಾವಣೆಯ ಹೊಸತದಿಂದ ಕೂಡಿತ್ತು. ದಮನ್ ಮತ್ತು ದಿಯು ಮತದಾರರಿಗೆ ಮತದಾನದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಗೋವಾದ ಮುಖ್ಯ ಚುನಾವಣಾ ಅಧಿಕಾರಿ ತಾವೇ ಸೂಚನೆಗಳನ್ನು ನೀಡಿದ್ರು. ಮತದಾರನು ಮತಗಟ್ಟೆಗೆ ಪ್ರವೇಶಿಸಿದ ತಕ್ಷಣ,  ಮತಗಟ್ಟೆ ಅಧಿಕಾರಿ ನಂ. 1 ಮತ್ತು ಅವನ ಗುರುತನ್ನು ಪ್ರಕಟಿಸಬೇಕು. ಅದರ ನಂತರ ಅದೇ ಟೇಬಲ್‌ನಲ್ಲಿ ಕುಳಿತಿರುವ ಮತಗಟ್ಟೆ ಅಧಿಕಾರಿ ನಂ.2 ಅವರ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಹಾಕುತ್ತಾರೆ. ಅದರ ನಂತರ ಮತದಾರರು ಎರಡನೇ ಟೇಬಲ್‌ಗೆ ಹೋಗುತ್ತಾರೆ ಅಲ್ಲಿ ಮತಗಟ್ಟೆ ಅಧಿಕಾರಿ ಸಂಖ್ಯೆ 3 ಮತ್ತು 4 ಬ್ಯಾಲೆಟ್ ಪೇಪರ್‌ಗಳು ಮತ್ತು ರಬ್ಬರ್ ಸ್ಟಾಂಪ್‌ನೊಂದಿಗೆ ಕುಳಿತುಕೊಳ್ಳುತ್ತಾರೆ.

ಇದನ್ನೂ ಓದಿ: Goa Election: ಇಂದು ಗೋವಾ ವಿಧಾನಸಭೆ ಚುನಾವಣೆ, 301 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಮಹಿಳಾ ಮತದಾರರೇ ಅಧಿಕ

ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆದಿದ್ದು, 427 ಮತಗಟ್ಟೆಗಳಲ್ಲಿ ಪುರುಷರಿಗಿಂತ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರಿದ್ರು. ಅಂದು ಗೋವಾದ ಮತದಾನದ ಪ್ರಮಾಣವು 75% ಕ್ಕಿಂತ ಹೆಚ್ಚಿತ್ತು. ಪಂಜಿಮ್, ಮರ್ಗೋವ್, ನವೇಲಿಮ್, ಪೊಂಡಾ, ಮರ್ಮಗೋವ್, ಕ್ವಿಪೆಂನಲ್ಲಿ ಭಾರೀ ಮತದಾನ ದಾಖಲಾಗಿದೆ. ಈ ಫೋಟೋವು ಸಾಂಟಾ ಕ್ರೂಜ್‌ನಲ್ಲಿರುವ ಮತಗಟ್ಟೆಯ ಹೊರಗೆ ಸರತಿ ಸಾಲನ್ನು ತೋರಿಸುತ್ತದೆ.

ಅಂದಿನ ಪತ್ತಿಕೆಯಲ್ಲಿ ಜಾಹಿರಾತು

ಗೋವಾ, ದಮನ್ ಮತ್ತು ದಿಯು ವಿಧಾನಸಭಾ ಚುನಾವಣೆಗಳಿಗೆ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಬಗ್ಗೆ ಅಂದಿನ ಪತ್ರಿಕೆಗಳಲ್ಲಿ ವಿವರವಾಗಿ ಬರೆಯಲಾಗಿತ್ತು. ಸಾಂಗುಯೆಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯುನೈಟೆಡ್ ಗೋವಾನ್ ಪಾರ್ಟಿಯ ಕ್ರಿಸ್ಟೋವಾವೊ ಫುರ್ಟಾಡೊಗೆ ಬೆಂಬಲ ಕೋರುವ ಜಾಹೀರಾತು ಕೂಡ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ಅವರು 1,683 ಮತಗಳನ್ನು ಪಡೆದು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಅಭ್ಯರ್ಥಿ ಎದುರು ಸೋತಿದ್ರು.

ಇದನ್ನೂ ಓದಿ: Holiday Plan: ಗೋವಾ ಅಂದ್ರೆ ಬೀಚ್ ಮಾತ್ರ ಅಲ್ಲ, ಅಲ್ಲಿ ನೀವು ನೋಡಲೇಬೇಕಾದ ಇಂಟರೆಸ್ಟಿಂಗ್ ಸ್ಥಳಗಳಿವೆ.. ಮುಂದಿನ ಟ್ರಿಪ್ ಗೆ ಪ್ಲಾನ್ ಮಾಡಿ!

ಅಂದೇ 75 ಪರ್ಸೆಂಟ್​ ಮತದಾನ

ಕಾಂಗ್ರೆಸ್ ಪಕ್ಷದಿಂದಲೂ ಸಹ ಜಾಹೀರಾತು ಪ್ರಕಟಗೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿರೋ ಜಾಹಿರಾತು ಪ್ರಕಟವಾಗಿತ್ತು. ಪೋರ್ಚುಗೀಸ್​ ಆಡಳಿತದ ಬಳಿಕ ಗೋವಾದಲ್ಲಿ ನಡೆದ ಮತದಾನದ ಬಗ್ಗೆ ಅಂದಿನ ಪತ್ರಿಕೆಗಳಲ್ಲಿ ಸವಿವರವಾಗಿ ವಿವರಿಸಲಾಗಿದೆ. ಭಯದ ವಾತಾವರಣದಲ್ಲೂ ಜನರು ಬಿರುಸಿನ ಮತದಾನ ಮಾಡಿದ್ರು. ಪುರುಷರಿಗಿಂತ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರಿದ್ದೇ ವಿಶೇಷ, ಅಂದು ಗೋವಾದ ಮತದಾನದ ಪ್ರಮಾಣವು 75% ಕ್ಕಿಂತ ಹೆಚ್ಚಿತ್ತು.
Published by:Pavana HS
First published: