Glass Tumbler: ಟೀ ಜೊತೆ ಹೊಟ್ಟೆ ಸೇರಿದ ಗ್ಲಾಸ್; ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ಬಂತು
ತೀವ್ರ ಮಲಬದ್ಧತೆ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಬಿಹಾರದ ಮುಜಫ್ಫರ್ ಪುರದಲ್ಲಿ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ, ಕರುಳಿನಲ್ಲಿದ್ದ ಗಾಜಿನ ಟಂಬ್ಲರ್ ನ್ನು ಹೊರ ತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ಮೂಲಕ ಗಾಜಿನ ಟಂಬ್ಲರ್ ಹೊರ ತೆಗೆದ ವೈದ್ಯರು
ಮುಜಫ್ಫರ್ ಪುರ: ತೀವ್ರ ಮಲಬದ್ಧತೆ (Constipation) ಮತ್ತು ಹೊಟ್ಟೆ ನೋವಿನಿಂದ (Stomach Pain) ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ (Person) ಭಾನುವಾರ ಬಿಹಾರದ ಮುಜಫ್ಫರ್ ಪುರದಲ್ಲಿ (Bihar Mujaffarpur) ವೈದ್ಯರ ತಂಡ ಶಸ್ತ್ರಚಿಕಿತ್ಸೆ (Surgery) ನಡೆಸಿ, ಕರುಳಿನಲ್ಲಿದ್ದ ಗಾಜಿನ ಟೀ ಗ್ಲಾಸ್ ನ್ನು (Glass Tumbler) ಹೊರಗೆ ತೆಗೆದಿದ್ದಾರೆ. ಮುಜಫ್ಫರ್ ಪುರ ನಗರದ ಮಾದಿಪುರ ಪ್ರದೇಶದಲ್ಲಿರುವ ಆಸ್ಪತ್ರೆಯ (Hospital) ವೈದ್ಯರ ಈ ಕಾರ್ಯ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಜೊತೆಗೆ ವೈದ್ಯಕೀಯ ಲೋಕದಲ್ಲೇ ಅಚ್ಚರಿಗೆ ಕಾರಣವಾಗಿದೆ. ಶಸ್ತ್ರ ಚಿಕಿತ್ಸೆ ವೇಳೆ ಭಾಗಿಯಾಗಿದ್ದ ವೈದ್ಯರ ತಂಡದ ಸೂಕ್ಷ್ಮ ಮತ್ತು ಯಶಸ್ವಿ ಶಸ್ತ್ರ ಚಿಕಿತ್ಸೆ, ವೈದ್ಯಕೀಯ ತಜ್ಞರು ಮತ್ತು ಸಾಮಾನ್ಯ ಜನರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ವ್ಯಕ್ತಿಯ ದೇಹದೊಳಗೆ ಗಾಜಿನ ಟಂಬ್ಲರ್ ಸೇರಿದ್ದಾದರೂ ಹೇಗೆ..? ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ರೋಗಿಯ ಕರುಳಿನಲ್ಲಿದ್ದ (Colon) ಗಾಜಿನ ಟಂಬ್ಲರನ್ನು ಹೊರ ತೆಗೆದಿರುವ ವೈದ್ಯರ ಬಗ್ಗೆ ಎಲ್ಲೆಡೆ ಈಗ ಚರ್ಚೆ ನಡೆಯುತ್ತಿದೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ಮುಖ್ಯ ನೇತೃತ್ವ ವಹಿಸಿದ್ದ ಡಾ. ಮಖ್ದುಲುಲ್ ಹಕ್ ಅವರ ಪ್ರಕಾರ, ರೋಗಿಯು ಮುಜಫ್ಫರ್ ಪುರ ನಗರದ ಪಕ್ಕದ ವೈಶಾಲಿ ಜಿಲ್ಲೆಯ ಮಹುವಾದಿಂದ ನಮ್ಮ ಆಸ್ಪತ್ರೆಗೆ ಬಂದಿದ್ದರು. ತೀವ್ರ ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಚೆಕಪ್ ಮಾಡಿದಾಗ ಅವರ ದೇಹದೊಳಗೆ ಸಮಸ್ಯೆ ಇರುವುದು ಕಂಡು ಬಂದಿತ್ತು.
ಯಶಸ್ವಿ ಶಸ್ತ್ರಚಿಕಿತ್ಸೆ
ವ್ಯಕ್ತಿಯನ್ನು ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇಗೆ ಒಳಪಡಿಸಿದ ನಂತರ ಬಂದ ವರದಿಗಳು ಅವರ ಕರುಳಿನಲ್ಲಿ ಯಾವುದೋ ಗಂಭೀರ ದೋಷವಿದೆ ಎಂದು ವರದಿಯಿಂದ ತಿಳಿದು ಬಂದಿತ್ತು ಎಂದು ಹೇಳಿದ್ದಾರೆ. ವ್ಯಕ್ತಿಯ ಶಸ್ತ್ರಚಿಕಿತ್ಸೆಯ ವೀಡಿಯೊ ತುಣುಕನ್ನು ಮತ್ತು ಕಾರ್ಯಾಚರಣೆಯ ಮೊದಲು ತೆಗೆದ ಎಕ್ಸ್-ರೇ ಯನ್ನು ಮಾಧ್ಯಮಗಳೊಂದಿಗೆ ಡಾ. ಮಖ್ದುಲುಲ್ ಹಕ್ ಹಂಚಿಕೊಂಡಿದ್ದಾರೆ. ವ್ಯಕ್ತಿಯ ಹೊಟ್ಟೆಯೊಳಗೆ ಗಾಜಿನ ಟೀ ಗ್ಲಾಸ್ ಹೇಗೆ ಸೇರಿಕೊಂಡಿತು ಎಂಬುದೇ ನಿಗೂಢವಾಗಿದೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯ ಹೊಟ್ಟೆಯೊಳಗೆ ಗಾಜಿನ ಟೀ ಗ್ಲಾಸ್ ಸೇರಿದ್ದು ಹೇಗೆ..?
"ನಾವು ರೋಗಿಯನ್ನು ವಿಚಾರಿಸಿದಾಗ ಆತ ಚಹಾ ಕುಡಿಯುವಾಗ ಗಾಜಿನ ಟೀ ಗ್ಲಾಸ್ ನ್ನು ನುಂಗಿದ್ದಾನೆ ಎನ್ನಬಹುದು. ಆದರೆ ಇದು ಮನವರಿಕೆಯಾಗುವ ವಿವರಣೆಯಲ್ಲ. ಮನುಷ್ಯನ ಆಹಾರ ದೇಹದೊಳಕ್ಕೆ ಹೋಗುವ ಪೈಪ್ ತುಂಬಾ ಕಿರಿದಾಗಿರುತ್ತದೆ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದದ್ವಾರದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದ್ದರಿಂದ ನಾವು ಅವನ ಹೊಟ್ಟೆಯನ್ನು ಕೊಯ್ದು ಕರುಳಿನ ಗೋಡೆಯನ್ನು ಛೇದ ಮಾಡಿ, ನಂತರ ಗಾಜಿನ ಟಂಬ್ಲರ್ ನ್ನು ಹೊರಗೆ ತೆಗೆಯಬೇಕಾಯಿತು ಎಂದು ಡಾ. ಹಕ್ ಹೇಳಿದ್ದಾರೆ.
“ರೋಗಿಯು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು”
ಸಧ್ಯ ರೋಗಿಯ ಸ್ಥಿತಿ ಸ್ಥಿರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕರುಳಿಗೆ ಛೇದ ಮಾಡಿರುವ ಭಾಗಕ್ಕೆ ಹೊಲಿಗೆ ಹಾಕಲಾಗುತ್ತದೆ. ಮಲ ವಿಸರ್ಜನೆಗೆ ಫಿಸ್ಟುಲರ್ ತೆರೆಯುವಿಕೆಯ ರಚನೆಯನ್ನು ಮಾಡಲಾಗಿದೆ. ಇದು ರೋಗಿಯು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಾ. ಹಕ್ ಹೇಳಿದ್ದಾರೆ. ಅವನ ಕರುಳಿನ ಸ್ಥಿತಿ ಕೆಲವು ತಿಂಗಳುಗಳಲ್ಲಿ ಗುಣವಾಗುವ ನಿರೀಕ್ಷೆಯಿದೆ.
ನಂತರ ನಾವು ಫಿಸ್ಟುಲರನ್ನು ಮುಚ್ಚುತ್ತೇವೆ. ನಂತರ ಅವನ ಕರುಳುಗಳು ಸಾಮಾನ್ಯವಾಗಿ ಮೊದಲಿನಂತೆಯೇ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಪ್ರಜ್ಞೆ ಬಂದಿದೆ. ಆದರೆ ಮಾಧ್ಯಮದ ಎದುರು ರೋಗಿಯಾಗಲಿ, ಅವನ ಕುಟುಂಬ ಸದಸ್ಯರಾಗಲಿ ಮಾತನಾಡಲು ಸಿದ್ಧರಿಲ್ಲ ಎಂದು ಡಾ. ಹಕ್ ತಿಳಿಸಿದ್ದಾರೆ.
Published by:renukadariyannavar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ