ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ, ಲೈಂಗಿಕ ಆಸೆಗಳನ್ನು ಪೂರೈಸಿ, ಸಾವಿನಿಂದ ಪಾರಾಗಿ; ನಿರ್ಮಾಪಕನಿಂದ ವಿಕೃತ ಸಲಹೆ

ಮಹಿಳೆಯರು ಅತ್ಯಾಚಾರಿಯ ಲೈಂಗಿಕ ಬಯಕೆಯನ್ನು ಪೂರೈಸಬೇಕು. ಅತ್ಯಾಚಾರದ ವೇಳೆ ಮಹಿಳೆಯರು ಕೂಗು ಹಾಕಿದರೆ ಮಾತ್ರ ಆಕೆಯನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಅತ್ಯಾಚಾರದ ನಂತರ ನಡೆಯಬಹುದಾದ ಕೊಲೆಯಂತಹ ಘಟನೆಯನ್ನು ತಪ್ಪಿಸಲು ಮಹಿಳೆಯರು ಅತ್ಯಾಚಾರಕ್ಕೆ ಸಹಕರಿಸುವುದು ಸೂಕ್ತ ಎಂದು ತೆಲುಗು ಚಿತ್ರ ನಿರ್ಮಾಪಕ ಡ್ಯಾನಿಯಲ್ ಶ್ರವಣ್ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:December 4, 2019, 4:25 PM IST
ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ, ಲೈಂಗಿಕ ಆಸೆಗಳನ್ನು ಪೂರೈಸಿ, ಸಾವಿನಿಂದ ಪಾರಾಗಿ; ನಿರ್ಮಾಪಕನಿಂದ ವಿಕೃತ ಸಲಹೆ
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ದೆಹಲಿಯ ಜಂತರ್​ ಮಂತರ್​ ನಲ್ಲಿ ಪ್ರತಿಭಟಿಸುತ್ತಿರುವ ಮಹಿಳೆ.
  • Share this:
ಅತ್ಯಾಚಾರದ ನಂತರ ಕೊಲೆಯಂತಹ ಘಟನೆಯನ್ನು ತಡೆಯುವ ಸಲುವಾಗಿ ಹೆಣ್ಣು ಮಕ್ಕಳು ಅತ್ಯಾಚಾರಿಗಳಿಗೆ ಇನ್ನು ಮುಂದೆ ಕಾಂಡೋಮ್ ನೀಡಿ ಸಹಕರಿಸಬೇಕು. ಈ ಮೂಲಕ ಹೆಣ್ಣು ಮಕ್ಕಳು ತಮ್ಮ ಪ್ರಾಣವನ್ನಾದರೂ ಉಳಿಸಿಕೊಳ್ಳಬಹುದು ಎಂಬಂತಹ ನೂತನ ಹಾಗೂ ಅಸಂಬದ್ಧ ವಾದಗಳು ತೆಲಂಗಾಣ ಅತ್ಯಾಚಾರ-ಕೊಲೆ ಪ್ರಕರಣದ ನಂತರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ  ಸದ್ದು ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತೆಲಂಗಾಣ ಪಶು ವೈದ್ಯೆಯ ಮೇಲೆ ನಾಲ್ವರು ಕಾಮುಕರು ಇತ್ತೀಚೆಗೆ ಅತ್ಯಾಚಾರ ಎಸಗಿ ಜೀವತವಾಗಿ ಬೆಂಕಿ ಹಚ್ಚಿ ಸುಟ್ಟು ಕೊಂದಿದ್ದರು. ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಈ ಘಟನೆಯ ವಿರುದ್ಧ ಇಡೀ ದೇಶ ಒಕ್ಕೊರಲಿನಿಂದ ಕೂಗು ಹಾಕಿತ್ತು. ಆದರೆ, ಈ ಘಟನೆಯ ಹಿನ್ನೆಲೆಯಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ಚಿತ್ರ ನಿರ್ಮಾಪಕ ಡ್ಯಾನಿಯಲ್ ಶ್ರವಣ್ ಅತ್ಯಾಚಾರದ ಕುರಿತು ಹೊಸದೊಂದು ಸಲಹೆ ಹಾಗೂ ತಮ್ಮ ಆಲೋಚನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇದೀಗ ಪೇಚಿಗೆ ಸಿಲುಕಿದ್ದಾರೆ.

ಈ ಕುರಿತು ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಚಿತ್ರ ನಿರ್ಮಾಪಕ ಶ್ರವಣ್, "ಅತ್ಯಾಚಾರ ಎಂಬುದು ಪ್ರಸ್ತುತ ಗಂಭೀರವಾದ ವಿಷಯವಲ್ಲ. ನಿರ್ಭಯಾ ಕಾಯ್ದೆಯ ಮೂಲಕ ಅತ್ಯಾಚಾರದಂತಹ ಘಟನೆಯನ್ನು ತಡೆಯುವುದು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಅತ್ಯಾಚಾರಿಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಆದರೆ, ಅತ್ಯಾಚಾರಕ್ಕೆ ಒಳಗಾಗುವಂತಹ ಸಂದರ್ಭ ಎದುರಾದಾಗ ಜಗಳ ಮುಕ್ತ ಅನುಭವಕ್ಕಾಗಿ ಮಹಿಳೆಯರು ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ ಸಹಕರಿಸುವುದು ಸೂಕ್ತ.

ಇದನ್ನೂ ಓದಿ : ನನ್ನ ಮಗನ ಗಲ್ಲಿಗೇರಿಸಿ, ಬೆಂಕಿ ಹಚ್ಚಿ ಸಾಯಿಸಿ; ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವನ ತಾಯಿಯ ಆಕ್ರೋಶದ ನುಡಿ

ಮಹಿಳೆಯರು ಅತ್ಯಾಚಾರಿಯ ಲೈಂಗಿಕ ಬಯಕೆಯನ್ನು ಪೂರೈಸಬೇಕು. ಅತ್ಯಾಚಾರದ ವೇಳೆ ಮಹಿಳೆಯರು ಕೂಗು ಹಾಕಿದರೆ ಮಾತ್ರ ಆಕೆಯನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಅತ್ಯಾಚಾರದ ನಂತರ ನಡೆಯಬಹುದಾದ ಕೊಲೆಯಂತಹ ಘಟನೆಯನ್ನು ತಪ್ಪಿಸಲು ಮಹಿಳೆಯರು ಅತ್ಯಾಚಾರಕ್ಕೆ ಸಹಕರಿಸುವುದು ಸೂಕ್ತ. ಮಹಿಳೆಯರನ್ನು ಕೊಲೆಯಿಂದ ತಪ್ಪಿಸಬಹುದಾದ ಏಕೈಕ ಮಾರ್ಗ ಇದೊಂದೆ" ಆಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಮತ್ತೊಂದು ಫೇಸ್ ಬುಕ್ ಪೋಸ್ಟ್ ನಲ್ಲಿ, “ಅತ್ಯಾಚಾರಕ್ಕೊಳಗಾದವರ ಕ್ರೂರ ಸಾವಿನ ಹಿಂದೆ ಸಮಾಜ ಮತ್ತು ಮಹಿಳಾ ಸಂಘಟನೆಗಳು ಮುಖ್ಯ ಅಪರಾಧಿಗಳು. ಕೊಲೆಗಿಂತ ಅತ್ಯಾಚಾರ ಉತ್ತಮ. ಕೊಲೆ ಪಾಪದ ಕೃತ್ಯ. ಆದರೆ, ಅತ್ಯಾಚಾರವನ್ನು ಶಿಕ್ಷೆಯ ಮೂಲಕ ಸರಿಪಡಿಸಬಹುದು. ಹೀಗಾಗಿ 18 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರಿಗೆ ಅತ್ಯಾಚಾರದ ಬಗ್ಗೆ ಸೂಕ್ತ ಶಿಕ್ಷಣ ನೀಡಬೇಕು. ಅಂದರೆ, ಪುರುಷರ ಲೈಂಗಿಕ ಆಸೆಗಳನ್ನು ನಿರಾಕರಿಸದಂತೆ ಕಲಿಸಬೇಕು. ಹಿಂಸಾಚಾರವಿಲ್ಲದ ಅತ್ಯಾಚಾರವನ್ನು ಕಾನೂನು ಬದ್ಧಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ.ಅಸಲಿಗೆ ಹೈದರಾಬಾದ್​ನಲ್ಲಿ 26 ವರ್ಷದ ಪಶುವೈದ್ಯೆ ಅತ್ಯಾಚಾರಕ್ಕೆ ಬಲಿಯಾದ ನಂತರ ಅತ್ಯಾಚಾರ ಪ್ರಕರಣವನ್ನು ನಿಯಂತ್ರಿಸುವ ಸಲುವಾಗಿ ದೇಶದಾದ್ಯಂತ ಅನೇಕರು ಹತ್ತಾರು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಪೈಕಿ ಬಿಜೆಪಿ, ಸಮಾಜವಾದಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದರೆ, ತೆಲಂಗಾಣದ ಕಾನೂನು ಸಚಿವರು ಸಂತ್ರಸ್ತೆ ಅತ್ಯಾಚಾರದಂತಹ ಸಂದಿಗ್ಧ ಸಂದರ್ಭದಲ್ಲಿ ತನ್ನ ತಂಗಿಗೆ ಕರೆ ಮಾಡುವ ಬದಲು ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದರು. ಈ ನಡುವೆ ಚಿತ್ರ ನಿರ್ದೇಶಕ ಡ್ಯಾನಿಯಲ್ ಶ್ರವಣ್ ಅಭಿಪ್ರಾಯ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗುರಿಯಾಗಿದೆ.

ಶ್ರವಣ್ ಮಾತ್ರವಲ್ಲ ದೇಶದಲ್ಲಿ ಹಲವಾರು ಪುರುಷರು ಅತ್ಯಾಚಾರದ ಕುರಿತು ಇಂತಹದ್ದೇ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಮುಂದಿಡುತ್ತಿರುವುದು ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ. ‘ಸುಪ್ರೀಂ ಸ್ಟಾರ್’ ಎಂಬ ಹೆಸರಿನ ಫೇಸ್ಬುಕ್ ಬಳಕೆದಾರರೊಬ್ಬರು, “ತಮ್ಮ ಪರಿಚಿತರೊಬ್ಬರು ಹಲವಾರು ಬಾರಿ ಮಹಿಳಾ ಅತ್ಯಾಚಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದ. ಆದರೆ, ಇಂತಹ ಸಂದರ್ಭದಲ್ಲಿ ಆತ ಕಿರುಚಾಡಲಿಲ್ಲ.

rape and murder
ಅತ್ಯಾಚಾರದ ಕುರಿತು ಪೇಸ್​ಬುಕ್​ನಲ್ಲಿ ಬರೆಯಲಾಗಿರುವ ಹಲವರ ಅಭಿಪ್ರಾಯ.


ಬದಲಿಗೆ ಮಹಿಳಾ ಅತ್ಯಾಚಾರಿಗೆ ಸಹಕರಿಸಿದ ಪರಿಣಾಮ ಜೀವಂತವಾಗಿ ಬದುಕುಳಿದಿದ್ದಾನೆ. ಇದರ ಅರ್ಥ ಅತ್ಯಾಚಾರಕ್ಕೆ ಒಳಗಾಗುವಾಗ ಕೂಗಾಡಬೇಡಿ, ಕಿರುಚಬೇಡಿ. ನೀವು ಹೀಗೆ ಮಾಡಿದಲ್ಲಿ ಅದು ಅತ್ಯಾಚಾರಿಯನ್ನು ಕೊಲೆಗೆ ಪ್ರೇರೇಪಿಸುತ್ತದೆ. ಹೀಗಾಗಿ ಮಹಿಳೆಯರು ಅತ್ಯಾಚಾರಿಗಳನ್ನು ಕಾಂಡೋಮ್​ನೊಂದಿಗೆ ಆಶ್ಚರ್ಯಕ್ಕೆ ದೂಡಬೇಕು” ಎಂದು ಬರೆದುಕೊಂಡಿದ್ದಾರೆ.

ಈ ಬರವಣಿಗೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಆಕ್ರೋಶ ಎದುರಾದ ನಂತರ ನಿರ್ದೇಶಕ ಡ್ಯಾನಿಯಲ್ ಶ್ರವಣ್ ತನ್ನ ಬರಹವನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಈ ಬರವಣಿಗೆಯನ್ನು ದೇಶದ ಅಧಿಕ ಸಂಖ್ಯೆಯ ಪುರುಷರು ಬೆಂಬಲಿಸಿದ್ದಾರೆ ಎಂಬುದು ಆಘಾತಕಾರಿ ಮತ್ತು ಆತಂಕಕಾರಿ ವಿಚಾರ. ಇದನ್ನು ಗಮನಿಸಿದರೆ ಅತ್ಯಾಚಾರ ಎಂದರೇನು? ಅತ್ಯಾಚಾರ ಅಪರಾಧ ಎಂದರೇನು? ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಎಂದರೇನು? ಎಂಬ ಕುರಿತು ದೇಶದ ಬಹುಸಂಖ್ಯಾತರಿಗೆ ಮಾಹಿತಿ ಕೊರತೆ ಇರುವುದು ಸ್ಪಷ್ಟವಾಗುತ್ತದೆ.

ದೇಶ ಇಂತಹ ಮನಸ್ಥಿತಿಯಲ್ಲಿ ಇರುವವರೆಗೆ, ಅತ್ಯಾಚಾರ ಮತ್ತು ಮಹಿಳೆಯರ ಘನತೆಯ ಕುರಿತು ಜನರಲ್ಲಿ ಸ್ಪಷ್ಟ ಅರಿವು ಮೂಡಿಸುವವರೆಗೆ ಅತ್ಯಾಚಾರ ಆರೋಪಿಗಳಿಗೆ ಎಷ್ಟೇ ಕಠಿಣ ಶಿಕ್ಷೆ ನೀಡಿದರೂ ಸಹ ಮಹಿಳೆಯರು ಮನೆಯಲ್ಲೇ ಇರಲಿ ಅಥವಾ ಹೊರಗೇ ಇರಲಿ  ಸುರಕ್ಷಿತವಾಗಿಯಂತೂ ಇರಲು ಸಾಧ್ಯವೇ ಇಲ್ಲ.

ಇದನ್ನೂ ಓದಿ : ಹೈದರಾಬಾದ್​​ನಲ್ಲಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ: ಉಗ್ರ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ, ಅನುಷ್ಕಾ, ಕೀರ್ತಿ ಸುರೇಶ್​..!
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading