• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಆಶ್ವಾಸನೆಯಂತೆ 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ; ಬಿಹಾರ ಸಿಎಂ ನಿತೀಶ್​ಗೆ ತೇಜಸ್ವಿ ಎಚ್ಚರಿಕೆ

ಆಶ್ವಾಸನೆಯಂತೆ 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ; ಬಿಹಾರ ಸಿಎಂ ನಿತೀಶ್​ಗೆ ತೇಜಸ್ವಿ ಎಚ್ಚರಿಕೆ

ತೇಜಸ್ವಿ ಯಾದವ್.

ತೇಜಸ್ವಿ ಯಾದವ್.

ಬಿಹಾರ ರಾಜ್ಯವು ದೇಶದ ನಿರುದ್ಯೋಗದ ರಾಜಧಾನಿಯಾಗಿದೆ. ಸಾರ್ವಜನಿಕರು ಇನ್ನೂ ಕಾಯಲು ಸಾಧ್ಯವಿಲ್ಲ. ಅವರು ಮೊದಲ ತಿಂಗಳಿನಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಸಲು ವಿಫಲವಾದರೆ, ರಾಜ್ಯದಾದ್ಯಂತ ತೀವ್ರವಾದ ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಆಡಳಿತರೂಢ ಸರ್ಕಾರಕ್ಕೆ ತೇಜಸ್ವಿ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

    ಪಾಟ್ನಾ (ನವೆಂಬರ್​ 23); ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಚುನಾವಣಾ ಪ್ರಚಾರದ ವೇಳೆ ತಾವು ನೀಡಿದ ಆಶ್ವಾಸನೆಯಂತೆ ಬಿಹಾರದ ಯುವಕರಿಗೆ 19 ಲಕ್ಷ ಉದ್ಯೋಗಗಳನ್ನು ಸೃಷ್ಟಿಸದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಹಾಗೂ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಹಾರದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿತ್ತು. ನಿತೀಶ್​ ಕುಮಾರ್​ ಮತ್ತೊಂದು ಅವಧಿಗೆ ಇದೀದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ್ದಾರೆ. ಆದರೆ, ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಎನ್​ಡಿಎ ಮೈತ್ರಿಕೂಟ ತಾನು ಗೆದ್ದರೆ ಮೊದಲ ತಿಂಗಳಿನಲ್ಲೇ 19 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಇದೀಗ ಆ ಭರವಸೆ ಈಡೇರಿಕೆಯಾಗಿ ಯುವ ನಾಯಕ ತೇಜಸ್ವಿ ಯಾದವ್​ ಒತ್ತಾಯಿಸಿದ್ದಾರೆ. 


    ಈ ಕುರಿತು ಇಂದು ಮಾತನಾಡಿರುವ ತೇಜಸ್ವಿ ಯಾದವ್, "ಚುನಾವಣಾ ಸಂದರ್ಭದಲ್ಲಿ ತಾವು ಗೆದ್ದರೆ ಮೊದಲ ತಿಂಗಳಲ್ಲೇ 19 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಎನ್​ಡಿಎ ಮೈತ್ರಿಕೂಟ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್​ ಸಹ ಎಲ್ಲೆಡೆ ಇದನ್ನೇ ಪುನರುಚ್ಚರಿಸಿದ್ದರು. ಹೀಗಾಗಿ ಈ ಭರವಸೆಯನ್ನು ನಾನು ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.




    ಬಿಹಾರ ರಾಜ್ಯವು ದೇಶದ ನಿರುದ್ಯೋಗದ ರಾಜಧಾನಿಯಾಗಿದೆ. ಸಾರ್ವಜನಿಕರು ಇನ್ನೂ ಕಾಯಲು ಸಾಧ್ಯವಿಲ್ಲ. ಅವರು ಮೊದಲ ತಿಂಗಳಿನಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಸಲು ವಿಫಲವಾದರೆ, ರಾಜ್ಯದಾದ್ಯಂತ ತೀವ್ರವಾದ ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆ" ಎಂದು ಆಡಳಿತರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


    ಇದನ್ನೂ ಓದಿ : ಬಹುಕಾಲದ ಅನಾರೋಗ್ಯದಿಂದಾಗಿ ಅಸ್ಸಾಂ ರಾಜ್ಯದ ಮಾಜಿ ಸಿಎಂ ತರುಣ್ ಗೊಗೋಯ್​ ನಿಧನ


    ಕೊರೋನಾ ಸಾಂಕ್ರಾಮಿಕ ಖಾಯಿಲೆಯ ನಡುವೆಯೂ ಬಿಹಾರದಲ್ಲಿ ನಡೆದ ಬಹುನಿರೀಕ್ಷಿತ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸುವಲ್ಲಿ ಸಫಲವಾಗಿತ್ತು. ಆದರೆ, ಮೊದಲ ಬಾರಿಗೆ ಗೆಲ್ಲುವ ವಿಶ್ವಾಸದಲ್ಲಿದ್ದ ಆರ್​ಜೆಡಿ-ಕಾಂಗ್ರೆಸ್​ ಮೈತ್ರಿಯ ಮಹಾಘಟಬಂಧನ್ ಗೆಲ್ಲುವ ಸನಿಹದಲ್ಲಿ ಸೋಲಿಗೆ ಶರಣಾಗಿತ್ತು. ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳೂ ಮಹಾಘಟಬಂಧನ್​ ಗೆಲುವು ನಿಶ್ಚಿತ ಎಂದು ತೀರ್ಪು ನೀಡಿದ್ದರೂ ಸಹ ಸಮೀಕ್ಷೆಗಳೆಲ್ಲವೂ ಸುಳ್ಳಾಗಿತ್ತು.


    ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷವು 75 ಸ್ಥಾನಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಬಿಜೆಪಿಯು 74 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಕೇವಲ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನೂ ಕಾಂಗ್ರೆಸ್​ ಮತ್ತೊಮ್ಮೆ ಹೀನಾಯ ಪ್ರದರ್ಶನ ತೋರಿತ್ತು. ಆದರೆ ಎನ್‌ಡಿಎ ಮೈತ್ರಿ ಪಕ್ಷವು 125 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತವನ್ನು ಪಡೆದುಕೊಂಡ ಕಾರಣ ಸರ್ಕಾರ ರಚಿಸಿದೆ.

    Published by:MAshok Kumar
    First published: