• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Online Dating App: ಏಕ ಕಾಲಕ್ಕೆ ಇಬ್ಬರ ಜತೆ ಡೇಟಿಂಗ್​, ವಿಷಯ ತಿಳಿದ ಬಾಯ್​ಫ್ರೆಂಡ್​ಗಳು ಏನು ಮಾಡಿದ್ರು ಗೊತ್ತಾ?

Online Dating App: ಏಕ ಕಾಲಕ್ಕೆ ಇಬ್ಬರ ಜತೆ ಡೇಟಿಂಗ್​, ವಿಷಯ ತಿಳಿದ ಬಾಯ್​ಫ್ರೆಂಡ್​ಗಳು ಏನು ಮಾಡಿದ್ರು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Online Dating Apps and Frauds: ಇತ್ತೀಚೆಗೆ ಮತ್ತೊಂದು ಸ್ನೇಹಿತನ ಮುಖಾಂತರ ಅರುಣ್​ ಮತ್ತು ಸತೀಶ್​ಗೆ ಸ್ನೇಹವಾಗಿತ್ತು. ಅದಾದ ನಂತರ ಆಕಸ್ಮಿಕವಾಗಿ ಸತೀಶ್​ ತಾನು ಪ್ರೀತಿಸುತ್ತಿರುವ ಹುಡುಗಿ ಇವಳೇ ಎಂದು ಫೋಟೊ ತೋರಿಸದ್ದ. ಇದರಿಂದ ಸಿಟ್ಟಿಗೆದ್ದ ಅರುಣ್​ ಇದು ನನ್ನ ಗರ್ಲ್​ಫ್ರೆಂಡ್​ ಎಂದು ಜಗಳಕ್ಕೆ ಬಿದ್ದ. ಆಮೇಲೇನಾಯ್ತು? ಮುಂದೆ ಓದಿ

ಮುಂದೆ ಓದಿ ...
  • Share this:

    ದಿಂಡಿಗಲ್​: ಯುವತಿಯ ಖಾಸಗಿ ಚಿತ್ರಗಳನ್ನು (Private pictures of girlfriend leaked in social media) ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಇಬ್ಬರು ಹುಡುಗರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಡುಗಿ ಇಬ್ಬರ ಜತೆಗೂ ಏಕ ಕಾಲಕ್ಕೆ ಡೇಟಿಂಗ್​ ಮಾಡುತ್ತಿದ್ದಳು, ಇದನ್ನು ಅರಿತ ಬಾಯ್​ಫ್ರೆಂಡ್​ಗಳು ಒಂದುಗೂಡಿ ಹುಡುಗಿಯ ಖಾಸಗಿ ಚಿತ್ರಗಳನ್ನು ಹರಿಬಿಟ್ಟಿದ್ದಾರೆ. ಇದಾದ ಬೆನ್ನಲ್ಲೇ ಹುಡುಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕರನ್ನು ಬಂಧಿಸಿದ್ದಾರೆ.


    ಯುವತಿ ದೂರಿನ ಅನ್ವಯ, ಆಕೆ ನಿಲಕ್ಕೊಟ್ಟಾಯ್​ ಮೂಲದವಳಾಗಿದ್ದು ದಿಂಡಿಗಲ್​ನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಮತ್ತು ಸತೀಶ್​ ಎಂಬ ಯುವಕ ಪ್ರೀತಿಯಲ್ಲಿದ್ದರು. ಕೊರೋನಾ ವೈರಸ್​ (Post Pandemic Lockdown) ಆರ್ಭಟದಿಂದ ಲಾಕ್​ಡೌನ್​ ಆದ ನಂತರ, ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಹುಡುಗಿ ಮತ್ತು ಹುಡುಗ ಇಬ್ಬರೂ ಅವರ ಖಾಸಗಿ ಚಿತ್ರಗಳನ್ನು ಒಬ್ಬರಿಗೊಬ್ಬರು ಕಳಿಸಿಕೊಂಡಿದ್ದರು. ಆದರೆ ಇದಾದ ನಂತರ, ಸಾಮಾಜಿಕ ಜಾಲತಾಣದಲ್ಲಿ ಅರುಣ್​ ಎಂಬಾತ ಹುಡುಗಿದೆ ಪರಿಚಯವಾಗಿದ್ದ. ಲಾಕ್​ಡೌನ್​ ವೇಳೆಯಲ್ಲೇ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ (Online Dating App)​ ಆರಂಭಿಸಿದ್ದರು. ಕೆಲ ದಿನಗಳಲ್ಲೇ ಹುಡುಗಿಗೆ ಅರುಣ್​ ಇಷ್ಟವಾಗಿದ್ದ. ಅದೇ ರೀತಿ ಅರುಣ್​ ಕೂಡ ಹುಡುಗಿಯನ್ನು ಇಷ್ಟಪಡಲು ಆರಂಭಿಸಿದ್ದ. ಆ ಹುಡುಗನಿಗೂ ಯುವತಿ ಖಾಸಗಿ ಚಿತ್ರಗಳನ್ನು ಕಳಿಸಿದ್ದಳು.


    ಇತ್ತೀಚೆಗೆ ಮತ್ತೊಂದು ಸ್ನೇಹಿತನ ಮುಖಾಂತರ ಅರುಣ್​ ಮತ್ತು ಸತೀಶ್​ಗೆ ಸ್ನೇಹವಾಗಿತ್ತು. ಅದಾದ ನಂತರ ಆಕಸ್ಮಿಕವಾಗಿ ಸತೀಶ್​ ತಾನು ಪ್ರೀತಿಸುತ್ತಿರುವ ಹುಡುಗಿ ಇವಳೇ ಎಂದು ಫೋಟೊ ತೋರಿಸದ್ದ. ಇದರಿಂದ ಸಿಟ್ಟಿಗೆದ್ದ ಅರುಣ್​ ಇದು ನನ್ನ ಗರ್ಲ್​ಫ್ರೆಂಡ್​ ಎಂದು ಜಗಳಕ್ಕೆ ಬಿದ್ದ. ಕಡೆಗೆ ಇಬ್ಬರ ಮೊಬೈಲ್​ನಲ್ಲೂ ಇದ್ದ ಖಾಸಗಿ ಚಿತ್ರಗಳನ್ನು ನೋಡಿದ ನಂತರ, ಇಬ್ಬರ ಜತೆಗೂ ಹುಡುಗಿ ಆಸಕ್ತಿ ಹೊಂದಿರುವುದು ತಿಳಿದಿದೆ. ಅದಾದ ನಂತರ, ಆಕೆಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಹುಡಗರು, ಆಕೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಸಿಟ್ಟು ಹೊರಹಾಕಿದ್ದಾರೆ.


    ಇದನ್ನೂ ಓದಿ: Crime News: ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ


    ಈ ವಿಚಾರ ತಿಳಿಯುತ್ತಲೇ ಹುಡುಗಿ ತಕ್ಷಣ ನಿಲಕ್ಕೊಟ್ಟಾಯ್​ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ. ಕಾರ್ಯಪ್ರವೃತ್ತರಾದ ಪೊಲೀಸರು, ಸತೀಶ್​ ಮತ್ತು ನೆಲ್ಸನ್​ ಎಂಬಾತನನ್ನು ಬಂಧಿಸಿದ್ದಾರೆ. ಅರುಣ್​ ಸದ್ಯ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.


    ಇದನ್ನೂ ಓದಿ: ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ ಶಾಸಕ; ಚೀರಿದ ಪ್ರಯಾಣಿಕರು!


    ಕೆಲ ದಿನಗಳ ಹಿಂದೆ ದೆಹಲಿಯ ದಿಲ್ಶದ್​ ಗಾರ್ಡನ್​ ಪೊಲೀಸರು 21 ವರ್ಷದ ಯುವಕನನ್ನು ಬಂಧಿಸಿದ್ದರು. ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯ ಮಾಡಿಕೊಂಡು ಯುವತಿಗೆ ಬ್ಲಾಕ್​ಮೇಲ್​ ಮಾಡುತ್ತಿದ್ದ ಯುವಕನ ವಿರುದ್ಧ ಯುವತಿ ದೂರು ನೀಡಿದ್ದಳು. ಇತ್ತೀಚೆಗೆ ಇದೇ ರೀತಿಯ ಪ್ರಕರಣಗಳು ಆಗಾಗ ಕೇಳಿ ಬರುತ್ತಿವೆ.


    ಯಾವುದಿದು ಆನ್​ಲೈನ್​ ಡೇಟಿಂಗ್​ ಆ್ಯಪ್ಸ್​ (Best Online Dating Apps):


    ಟಿಂಡರ್ (Tinder)​, ಗ್ಲೀಡನ್ (Gleeden)​, ಮ್ಯಾಚ್ (Match)​, ಅವರ್​ ಟೈಮ್ (Our Time)​, ಬಂಬಲ್ (Bumble)​, ಪ್ಲೆಂಟಿ ಆಫ್​ ಫಿಶ್​ (Plenty Of Fish), ಓಕೆ ಕ್ಯುಪಿಡ್ (OKCupid)​, ಝೂಸ್ಕ್ (Zoosk)​, ಹೀಗೇ ಹಲವು ಆನ್​ಲೈನ್​ ಡೇಟಿಂಗ್​ ಆ್ಯಪ್​ಗಳು (Online Dating Apps) ಆ್ಯಪ್​ಸ್ಟೋರ್​ನಲ್ಲಿ ಲಭ್ಯವಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಅದೆಷ್ಟೂ ಕಾಮುಕರು ಹೆಂಗಸರ ಶೋಷಣೆ ಮಾಡುತ್ತಿರುವ ಪ್ರಕರಣಗಳು ಆಗಾಗ ಮುನ್ನಲೆಗೆ ಬರುತ್ತಿವೆ.


    ಡೇಟಿಂಗ್​ ಆ್ಯಪ್​ ಬಳಸಿ ಬ್ಲಾಕ್​ಮೇಲ್​:


    ದೆಹಲಿಯ ದಿಲ್ಶಾದ್​ ಗಾರ್ಡನ್​ ಪ್ರಕರಣದಲ್ಲಿ ಜತಿನ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಮಾಹಿತಿ ನೀಡಿದ್ದ ಆರೋಪಿ, ವಿದೇಶಿ ಮಹಿಳೆಯರನ್ನು ಪುಸಲಾಯಿಸಿಕೊಂಡು ನಂತರ ಖಾಸಗಿ ಚಿತ್ರಗಳನ್ನು ಬಳಸಿ ಬೆದರಿಕೆ ಹಾಕುತ್ತಿದ್ದ. ಮತ್ತು ಅವರನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದ, ಹಣವನ್ನೂ ಪಡೆಯುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಹೊಸ ಹೊಸ ಆ್ಯಪ್​ಗಳು ಬರುತ್ತಲೇ ಇರುತ್ತವೆ. ಆದರೆ ಅದನ್ನು ಸುರಕ್ಷಿತವಾಗಿ ಬಳಕೆ ಮಾಡಬೇಕು ಮತ್ತು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾಮಾಜಿಕ ಅಭಿಪ್ರಾಯ.

    Published by:Sharath Sharma Kalagaru
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು