Viral News : ಬಾಯ್​ಫ್ರೆಂಡ್​ ಫೋನ್​​ ತೆಗೆಯದಿದ್ದಕ್ಕೆ 100ಗೆ ಕಾಲ್​ ಮಾಡಿದ ಪ್ರಿಯತಮೆ, ಮದುವೆನೇ ಮಾಡಿಸ್ಬಿಟ್ಟ ಪೊಲೀಸರು!

Viral News : ಯುವತಿ ಎಷ್ಟೇ ಬಾರಿ ಕರೆ ಮಾಡಿದರು, ಪ್ರಿಯಕರ ರಿಸೀವ್​ ಮಾಡುತ್ತಿರಲಿಲ್ಲ. ಇದರಿಂದ ಬೇಸರಗೊಂಡ ನೇರ 100ಗೆ ಕರೆ ಮಾಡಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಪೊಲೀಸರು ಮೊದಲು ಕಕ್ಕಾಬಿಕ್ಕಿಯಾಗಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಪಂಚದಲ್ಲಿ ದಿನನಿತ್ಯ ಚಿತ್ರ, ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಪ್ರಕರಣಗಳನ್ನು ನೋಡಿದಾಗ ನಿಮಗೆ ಹಾಸ್ಯ(Funny) ಎನ್ನಿಸಬಹುದು. ಆದರೆ, ಅವರು ಹಾಗೇ ಮಾಡಲು ಒಂದು ಕಾರಣವಿರುತ್ತೆ. ಈಗಿನ ಫಾಸ್ಟ್​​(Fast) ಜಮಾನದಲ್ಲಿ ಬೆಳಗ್ಗೆ ಲವ್(Love)​, ಮಧ್ಯಾಹ್ನ ನೋವು(Pain)​, ಸಂಜೆ ಕಿವಿಗೆ ದಾಸವಾಳದ ಹೂ.  ಹೌದು, ಒಂದೇ ದಿನದಲ್ಲಿ ಪ್ರೀತಿ(Love) ಜನವಾಗಿ, ಒಂದೇ ದಿನದಲ್ಲಿ ಎಲ್ಲವೂ ಅಂತ್ಯವಾಗುವ ಕಾಲವಿದು. ಪ್ರೀತಿಸಿದವರು ನಮ್ಮನ್ನು ನಿರ್ಲಕ್ಷಿಸಿದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಮಾತು ಕೇಳದಿದ್ದಾಗ, ನಾವು ಬೇಡ ಎಂದಿದ್ದನ್ನು ಮಾಡಿದಾಗ ಆಗುವ ನೋವು ಹೇಳತೀರದು. ಯಾರ ಬಳಿಯೂ ಹೇಳಿಕೊಳ್ಳಲಾಗದ ನೋವು ಅದು. ಆದರೆ ಇಲ್ಲೊಬ್ಬ ಯುವತಿ(Girl) ತನ್ನ ಬಾಯ್​ಫ್ರೆಂಡ್(Boyfriend) ಫೋನ್​ ತೆಗೆಯದಿದ್ದಕ್ಕೆ ಏನ್​ ಮಾಡಿದ್ದಾಳೆ ಗೊತ್ತಾ? ಆಕೆ ಮಾಡಿರುವುದನ್ನು ಕೇಳಿದರೆ ಮೊದಲಿಗೆ ನಿಮಗೆ ತಿಳಿಯದ ಹಾಗೇ ನಿಮ್ಮ ಮುಖದಲ್ಲಿ ನಗು  ಮೂಡಿರುತ್ತೆ. ನಂತರ ಆಕೆ ಹಾಗೇ ಮಾಡಲು ಏನು ಕಾರಣ ಅಂತ ಹುಡುಕುತ್ತಿರ. ಹೌದು, ಪ್ರಿಯತಮ ಫೋನ್(Phone)​ ತೆಗೆಯದಿದ್ದಕ್ಕೆ ಪ್ರೇಯಸಿಯೊಬ್ಬಳು ಪೊಲೀಸರಿಗೆ ಕರೆ ಮಾಡಿದ್ದಾಳೆ. 

‘ಸರ್​.. ನಮ್​ ಹುಡ್ಗ ಫೋನ್​ ರಿಸೀವ್​ ಮಾಡ್ತಿಲ್ಲ’

ಇಂಥದ್ದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದೆ. ಪ್ರಿಯಕರ ತನ್ನೊಂದಿಗೆ ಮಾತನಾಡುತ್ತಿಲ್ಲ ಎಂದು  ಪೊಲೀಸರನ್ನು ಸಂಪರ್ಕಿಸಿರುವ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ಯುವಕನನ್ನು ತುಂಬಾ ವರ್ಷಗಳಿಂದ ಪ್ರೀತಿ ಮಾಡಿದ್ದಳು. ಇಬ್ಬರು ಅನೋನ್ಯವಾಗಿದ್ದರು. ಆದರೆ ಯುವಕನ ಹುಟ್ಟುಹಬ್ಬದ ವೇಳೆ ಸ್ವಲ್ಪ ಜಗಳ ವಾಗಿತ್ತು. ಮಾತನಾಡುವುದನ್ನು ಬಿಟ್ಟಿದ್ದರು. ಯುವತಿ ಎಷ್ಟೇ ಬಾರಿ ಕರೆ ಮಾಡಿದರು, ಪ್ರಿಯಕರ ರಿಸೀವ್​ ಮಾಡುತ್ತಿರಲಿಲ್ಲ. ಇದರಿಂದ ಬೇಸರಗೊಂಡ ನೇರ 100ಗೆ ಕರೆ ಮಾಡಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಪೊಲೀಸರು ಮೊದಲು ಕಕ್ಕಾಬಿಕ್ಕಿಯಾಗಿದ್ದರು. ಬಳಿಕ ಪೊಲೀಸರು ಮಾಡಿದ ಈ ಕೆಲಸ ನಿಮಗೆ ತಿಳಿದರೆ ಶಾಕ್​ ಆಗ್ತೀರಾ.

ಇದನ್ನು ಓದಿ : ಪೋರ್ನ್ ಸಿನಿಮಾ ಚಿತ್ರೀಕರಣಕ್ಕೆ ಈ ಮನೆಯೇ ಬೇಕಂತೆ! ಸಾವಿರಾರು ಚಿತ್ರಗಳು ಇಲ್ಲಿ ಶೂಟ್ ಆಗಿದೆಯಂತೆ!

ರಾಜಿಗೆ ಕರೆದು ಮದುವೆನೇ ಮಾಡಿಸ್ಬಿಟ್ರು!

ಪ್ರಿಯಕರ ಫೋನ್​ ರಿಸೀವ್ ಮಾಡುತ್ತಿಲ್ಲ ಅಂತ ಪೊಲೀಸರಿಗೆ ಯುವತಿ ಕರೆ ಮಾಡಿದ್ದಾಳೆ. ಕೂಡಲೇ ಆಕೆಯನ್ನು ಪೊಲೀಸ್​ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಠಾಣೆಗೆ ಬಂದ ಯುವತಿ ನಡೆದಿದ್ದೆಲ್ಲ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸರೆ ಆ ಯುವಕನಿಗೆ ಕರೆ ಮಾಡಿದ್ದಾರೆ. ಮೊದಲಿಗೆ ಪೊಲೀಸರ ಕರೆಯನ್ನು ಯುವಕ ರಿಸೀವ್​ ಮಾಡಿಲ್ಲ. ಮತ್ತೆ ಮತ್ತೆ ಕಾಲ್​ ಮಾಡಿದ ಬಳಿಕ ರಿಸೀವ್​ ಮಾಡಿದ್ದಾನೆ. ರಾಜಿ ಮಾಡಿಸಲು ಪೊಲೀಸ್​ ಠಾಣೆಗೆ ಕರೆಸಿದ್ದಾರೆ. ಬಳಿಕ ಯುವತಿಯ ಕುಟುಂಬಸ್ಥರ ಒಪ್ಪಿಗೆ ಪಡೆದು ಅವರಿಗೆ ಮದುವೆ ಮಾಡಿಸಿದ್ದಾರೆ.

ಇದನ್ನು ಓದಿ : ಟೀ ಮಾರಿ ಬಂದ ಹಣದಿಂದ ಹೆಂಡತಿ ಜೊತೆಗೆ 25ಕ್ಕೂ ಹೆಚ್ಚು ದೇಶ ಸುತ್ತಿದ್ದ ಕೇರಳದ ವಿಜಯನ್ ನಿಧನಬರ್ತ್​ಡೇಗೆ ಫೋನ್​ ಮಾಡಿಲ್ಲ ಅಂತ ಮುನಿಸಿಕೊಂಡಿದ್ದ ಯುವಕ

ಹೌದು, ತಮ್ಮ ಹುಟ್ಟುಹಬ್ಬಕ್ಕೆ ನಾವು  ಪ್ರೀತಿಸಿದವರು ವಿಶ್​ ಮಾಡಲಿಲ್ಲ ಅಂದರೆ ಯಾರಿಗೆ ಬೇಸರ ಆಗಲ್ಲ ಹೇಳಿ.ಇಲ್ಲೂ ಅಷ್ಟೇ ಯುವಕನ ಹುಟ್ಟುಹಬ್ಬಕ್ಕೆ ಯುವತಿ ಫೋನ್​ ಮಾಡಿರಲಿಲ್ಲ. ಆಕೆಯದ್ದು ತಪ್ಪಿಲ್ಲ. ಯಾವುದೋ ಕಾರಣಾಂತರಗಳಿಂದ ಅಂದು ಫೋನ್​ ಮಾಡಲು ಆಗಿರಲ್ಲಿಲ್ಲ. ಇಷ್ಟಕ್ಕೆ ಕೋಪಗೊಂಡ ಯುವಕ, ಇನ್ನುಮುಂದೆ ನನ್ನ ನಿನ್ನ ನಡುವೆ ಏನಿಲ್ಲ ಎಂದು ಹೇಳಿದ್ದನಂತೆ. ಇದರಿಂದ ಗಾಬರಿಗೊಂಡ ಯುವತಿ ಪದೇ ಪದೇ ಫೋನ್​ ಮಾಡಿದ್ದಾಳೆ. ಫೋನ್​ ರಿಸೀವ್​ ಮಾಡದೇ ಇದ್ದಾಗ ಪೊಲೀಸರಿಗೆ ಕರೆ ಮಾಡಿದ್ದಾಳೆ. ಇತ್ತ ಪೊಲೀಸರು ರಾಜಿ ಮಾಡಿಸುತ್ತೆವೆ ಎಂದು ಕರೆದು ಮದುವೆಯನ್ನೇ ಮಾಡಿಸಿದ್ದಾರೆ.
Published by:Vasudeva M
First published: