ನವದೆಹಲಿ: ಮುಖದ ಮೇಲೆ ಭಾರತೀಯ ಧ್ವಜವನ್ನು (Indian Flag) ಚಿತ್ರಿಸಲಾಗಿದೆ ಎಂಬ ಕಾರಣಕ್ಕಾಗಿ ಸಿಖ್ ದೇಗುಲಕ್ಕೆ (Temple) ಯುವತಿಯೋರ್ವಳಿಗೆ ಪ್ರವೇಶ ನಿರಾಕರಿಸಿದ ವೀಡಿಯೊ ಸದ್ಯ ವೈರಲ್ ಆಗಿದೆ. ಇತ್ತೀಚಿಗೆ ಈ ಘಟನೆ ನಡೆದಿದ್ದು, ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡಿದ್ದ ಯುವತಿಗೆ ಗೋಲ್ಡನ್ ಟೆಂಪಲ್ (Golden Temple) ಸಿಬ್ಬಂದಿ ಪ್ರವೇಶ ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೆಚ್ಚಿನ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
“ಇದು ಪಂಜಾಬ್... ಇದು ಭಾರತವಲ್ಲ!”
ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ನಲ್ಲಿ ಯುವತಿಯೊಬ್ಬರ ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಈ ಘಟನೆಯನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದ್ದು ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಇದು ಪಂಜಾಬ್, ಇದು ಭಾರತವಲ್ಲ ಎಂದು ಸಿಬ್ಬಂದಿ ಹೇಳುತ್ತಿರುವುದು ರೆಕಾರ್ಡ್ ಆಗಿದೆ. ಸಿಖ್ ದೇಗುಲಕ್ಕೆ ಯುವತಿ ಹಾಗೂ ಮತ್ತೊಬ್ಬ ಪುರುಷ ವ್ಯಕ್ತಿಗೆ ಪ್ರವೇಶವನ್ನು ನಿರಾಕರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಇದು ಭಾರತದ ಧ್ವಜ ಎಂದು ಮಹಿಳೆ ಹೇಳಿದರೂ ಅವರನ್ನು ತಡೆದ ಸಿಬ್ಬಂದಿ "ಇದು ಪಂಜಾಬ್, ಭಾರತವಲ್ಲ" ಎಂದು ಉತ್ತರಿಸಿದ್ದಾರೆ. ಈ ಬಗ್ಗೆ ವಿವರಣೆ ಕೇಳಿದಾಗ, ಮಹಿಳೆಯ ಮುಖದ ಮೇಲೆ ಧ್ವಜವಿದ್ದ ಕಾರಣ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ವ್ಯಕ್ತಿ ತಿಳಿಸಿದ್ದಾರೆ.
ಇನ್ನು, ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಂತೆ, ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (SGPC) ಪ್ರಧಾನ ಕಾರ್ಯದರ್ಶಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಿಂದ ಕ್ಷಮೆಯಾಚನೆ
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಸಿಬ್ಬಂದಿಯ ದುರ್ವರ್ತನೆಗಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಆ ಯುವತಿಯ ಮುಖದ ಮೇಲೆ ಚಿತ್ರಿಸಲಾದ ಧ್ವಜವು ತ್ರಿವರ್ಣ ಧ್ವಜವಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Madhya Pradesh: ದುಬಾರಿ ಕಾಲೇಜಿಗೆ ಸೇರಿಸಲಿಲ್ಲ ಎಂದು ಪಟಾಕಿ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
"ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ನೀತಿ ನಿಯಮಗಳನ್ನು ಹೊಂದಿದೆ. ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ. ಸಿಬ್ಬಂದಿಯೊಬ್ಬರ ಅನುಚಿತ ವರ್ತನೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಗ್ರೆವಾಲ್ ಹೇಳಿದ್ದಾರೆ.
“ಯುವತಿಯ ಮುಖದ ಮೇಲಿದ್ದದ್ದು ನಮ್ಮ ರಾಷ್ಟ್ರಧ್ವಜವಲ್ಲ!”
ಆದರೆ ಆ ಯುವತಿಯ ಮುಖದಲ್ಲಿದ್ದದ್ದು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ ಎಂದು ಗುರ್ಚರಣ್ ಸಿಂಗ್ ಗ್ರೆವಾಲ್ ಹೇಳಿದ್ದಾರೆ. ಏಕೆಂದರೆ ಆ ಧ್ವಜದ ಚಿತ್ರವು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು" ಎಂದು ಗ್ರೆವಾಲ್ ಹೇಳಿದ್ದಾರೆ.
ಇನ್ನು, ಜನರು ಈ ಬಗ್ಗೆ ಟ್ವೀಟ್ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಗುರ್ಚರಣ್ ಸಿಂಗ್ ಗ್ರೆವಾಲ್ ಹೇಳಿದ್ದಾರೆ. ಶ್ರೀ ಹರಮಂದಿರ ಸಾಹಿಬ್‌ಗೆ ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬರುವ ಎಲ್ಲಾ ಭಕ್ತರನ್ನೂ ನಾವು ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ "ದೇಶದ ಸ್ವಾತಂತ್ರ್ಯದಲ್ಲಿ ಸಿಖ್ಖರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಪ್ರತಿ ಬಾರಿಯೂ ಸಿಖ್ಖರು ಗುರಿಯಾಗುತ್ತಾರೆ" ಎಂದು ಗ್ರೆವಾಲ್ ಹೇಳಿದ್ದಾರೆ.
ಇನ್ನು ಟ್ವಿಟ್ಟರ್‌ನಲ್ಲಿ ಮಾಡಲಾಗಿರುವ ಈ ಪೋಸ್ಟ್ ನೂರಾರು ಕಾಮೆಂಟ್‌ಗಳು ಬಂದಿವೆ. ಬಹಳಷ್ಟು ಜನರು ಧರ್ಮ ಹಾಗೂ ರಾಷ್ಟ್ರೀಯತೆಯತೆ ಎರಡೂ ಬೆರೆಸಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಗೋಲ್ಡನ್ ಟೆಂಪಲ್ ಒಳಗೆ ಹೋಗಲು ತನ್ನೊಬ್ಬ ಸ್ನೇಹಿತ ಕೂಡ ಭಾರತ ಧ್ವಜದ ಟ್ಯಾಟೂವನ್ನು ಒರೆಸಿಕೊಳ್ಳಬೇಕಾಯ್ತು ಎಂದು ಬರೆದಿದ್ದಾರೆ.
ಇದನ್ನೂ ಓದಿ:Wrestlers Protest: ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಮತ್ತೆ ಬೀದಿಗಳಿದು ಪ್ರತಿಭಟಿಸಿದ ಭಾರತದ ಕುಸ್ತಿಪಟುಗಳು!
ಅಂದಹಾಗೆ ಬೀಟಿಂಗ್ ರಿಟ್ರೀಟ್ ಸಮಾರಂಭಕ್ಕಾಗಿ ಅಟ್ಟಾರಿ-ವಾಘಾ ಗಡಿಗೆ ಭೇಟಿ ನೀಡುವ ಅನೇಕ ಜನರು ತಮ್ಮ ಮುಖವನ್ನು ತ್ರಿವರ್ಣದಲ್ಲಿ ಚಿತ್ರಿಸಿಕೊಳ್ಳುತ್ತಾರೆ. ನಂತರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ