• Home
  • »
  • News
  • »
  • national-international
  • »
  • Hijab Row: ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗ್ತಾಳೆ ಎಂದ ಓವೈಸಿ, ಬಿಜೆಪಿ ಮುಖಂಡರು ಕೊಟ್ಟ ಉತ್ತರವಿದು

Hijab Row: ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗ್ತಾಳೆ ಎಂದ ಓವೈಸಿ, ಬಿಜೆಪಿ ಮುಖಂಡರು ಕೊಟ್ಟ ಉತ್ತರವಿದು

ಅಸಾಸುದ್ದೀನ್ ಓವೈಸಿ

ಅಸಾಸುದ್ದೀನ್ ಓವೈಸಿ

ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗ್ತಾಳೆ ಎಂದಿರುವ ಓವೈಸಿ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ. ಏನಿದು ವಿಷಯ ?

  • Share this:

ರಾಜ್ಯದಲ್ಲಿ ಹಿಜಾಬ್ ವಿಚಾರ (Hijab Row) ಭಾರೀ ಚರ್ಚೆಯಾಗುತ್ತಿದೆ. ದಕ್ಱಇಣ ಕರ್ನಾಟಕದ ಕೆಲವೆಡೆ ಕಾಣಿಸಿಕೊಂಡ ಹಿಜಾಬ್ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಇದಕ್ಕೆ ತಾಲೀಬಾನ್ (Taliban) ಕುಮ್ಮಕ್ಕು ಇದೆ ಎನ್ನುವಷ್ಟರ ಮಟ್ಟಿಗೆ ಚರ್ಚಯಾಗುತ್ತಿದೆ. ಕಮಲ್ ಹಾಸನ್, ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಸೆಲೆಬ್ರಿಟಿ ಗಣ್ಯರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದೀಗ ಲೋಕಸಭಾ ಸಂಸದ (MP) ಅಸಾಸುದ್ದೀನ್ ಓವೈಸಿ (Asaduddin Owaisi) ಅವರು ಕೂಡಾ ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾದ ಹಿಜಾಬ್ ವಿವಾದದಿಂದ ಈಗಾಗಲೇ ರಾಜ್ಯದಲ್ಲಿ ಶಾಲಾ, ಕಾಲೇಜಿಗೂ ರಜೆ (Leave) ನೀಡಲಾಗಿದೆ. ಪ್ರತಿಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಓವೈಸಿ ಹಿಜಾಬ್ ವಿವಾದದ ಬಗ್ಗೆ ಏನೇನು ಹೇಳಿದ್ದಾರೆ ? ಶಾಲಾ ಸಮವಸ್ತ್ರ ಹಾಗೂ ಹಿಜಾಬ್ ವಿವಾದ ಬಗ್ಗೆ ಅವರ ಆಲೋಚನೆಗಳೇನೇನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.


ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಅವರು ಹಿಜಾಬ್ ಧರಿಸಿರುವ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಘೋಷಿಸಿದ್ದಾರೆ. ಹಿಜಾಬ್ ಧರಿಸಿದ ಕಾರಣಕ್ಕಾಗಿ ಮುಸ್ಲಿಂ (Muslims) ವಿದ್ಯಾರ್ಥಿಗಳ ಗುಂಪನ್ನು ಕಾಲೇಜಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ನಂತರ ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ಏನಿದು ಹಿಜಾಬ್-ಕೇಸರಿ ಶಾಲು ವಿವಾದ..? ಇಷ್ಟೊಂದು ಸದ್ದು ಮಾಡ್ತಾ ಇರೋದು ಯಾಕೆ..?


ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಓವೈಸಿ ಭಾನುವಾರ ವೀಡಿಯೊವನ್ನು(Video) ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಹಿಜಾಬ್ ಧರಿಸಿದ ಮಹಿಳೆಯರು (Ladies) ಕಾಲೇಜಿಗೆ ಹೋಗುತ್ತಾರೆ, ಜಿಲ್ಲಾಧಿಕಾರಿಗಳು, ಮ್ಯಾಜಿಸ್ಟ್ರೇಟ್‌ಗಳು, ವೈದ್ಯರು, ಉದ್ಯಮಿಗಳಾಗುತ್ತಾರೆ ಎಂದು ಹೇಳಿದ್ದಾರೆ.


ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗ್ತಾಳೆ..!


ಸಭಿಕರನ್ನುದ್ದೇಶಿಸಿ ಮಾತನಾಡಿದ ಓವೈಸಿ, ಇದನ್ನು ನೋಡಲು ನಾನು ಜೀವಂತವಾಗಿಲ್ಲದಿರಬಹುದು, ಆದರೆ ನನ್ನ ಮಾತುಗಳನ್ನು ನೋಟ್ ಮಾಡಿರಿ, ಮುಂದೊಂದು ದಿನ ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗುತ್ತಾಳೆ(Prime Minister) ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ನಿರ್ಧರಿಸಿ ಅವರ ಪೋಷಕರಿಗೆ ಹೇಳಿದರೆ, ಅವರ ಪೋಷಕರು ಅವರನ್ನು ಬೆಂಬಲಿಸುತ್ತಾರೆ, ಇದನ್ನು ಯಾರು ತಡೆಯುತ್ತಾರೆ ಎಂದು ನೋಡೋಣ ಎನ್ನುವುದನ್ನು ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ: Hijab ವಿಚಾರದಲ್ಲಿ ಗೊಂದಲ ಸೃಷ್ಟಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ: CM Bommai ಎಚ್ಚರಿಕೆ


ಬಿಜೆಪಿ ನಾಯಕರ ಪ್ರತಿಕ್ರಿಯೆಗಳು


ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯುಪಿ ಡಿಸಿಎಂ ಹಾಗೂ ಬಿಜೆಪಿ ನಾಯಕ ದಿನೇಶ್ ಶರ್ಮಾ, ಉತ್ತರ ಪ್ರದೇಶದಲ್ಲಿ ಕೋಮುವಾದ ಹರಡಲು ಪ್ರತಿಪಕ್ಷಗಳು ಷಡ್ಯಂತ್ರ ನಡೆಸುತ್ತಿವೆ. ಸಮಾಜವಾದಿ ಪಕ್ಷದ ಬಿ ಟೀಮ್ ಎಐಎಂಐಎಂ. ರಾಜ್ಯದಲ್ಲಿ ಅಭಿವೃದ್ಧಿಯ ಪರಿಮಳವಿದೆ, ಕೋಮುವಾದದ ದುರ್ವಾಸನೆಗೆ ಸ್ಥಳವಿಲ್ಲ ಎಂದಿದ್ದಾರೆ.


ನಿಮ್ಮ ಕನಸು ನನಸಾಗಲು ಬಿಡೆವು


ಬಿಜೆಪಿಯ() ತೆಲಂಗಾಣ ಶಾಸಕ ಟಿ.ರಾಜಾ ಸಿಂಗ್, ಬಿಜೆಪಿ ಇರುವವರೆಗೂ ಯಾವುದೇ 'ಬುರ್ಖಾ-ವಾಲಿ' ಪ್ರಧಾನಿಯಾಗುವುದಿಲ್ಲ, ನಿಮ್ಮ ಜನಸಂಖ್ಯೆಯನ್ನು ಎಷ್ಟೇ ಹೆಚ್ಚಿಸಿದರೂ ನಾವು ನಿಮ್ಮ ಈ ಕನಸು ನನಸಾಗಲು ಬಿಡುವುದಿಲ್ಲ. ನಿಜ. 'ಹಮ್ ದೋ ಹುಮಾರೆ ದೋ' ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ನಿಮ್ಮ ಜನಸಂಖ್ಯೆಗೆ ಹೇಗೆ ಬ್ರೇಕ್ ಹಾಕಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.


ಇದನ್ನೂ ಓದಿ: Hijab Controversy: ಹಿಜಾಬ್ ವಿವಾದ, ಪ್ರಿಯಾಂಕಾ ಗಾಂಧಿ ಟ್ವೀಟ್ ಬಗ್ಗೆ ಸಂಸದೆ Sumalatha Ambareesh ಹೇಳಿದ್ದೇನು?


ಕೆಲ ವಾರಗಳಿಂದ ಕರ್ನಾಟಕದ ಉಡುಪಿ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳ ಹಲವಾರು ಪಟ್ಟಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕಿನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.


ರಾಜ್ಯದೆಲ್ಲೆಡೆ ವ್ಯಾಪಿಸಿದ ಹಿಜಾಬ್ ವಿವಾದ


ಮಂಡ್ಯದಲ್ಲಿ ಯುವತಿಯೊಬ್ಬಳನ್ನು ಉದ್ರಿಕ್ತ ಪುರುಷರ ಗುಂಪು ಕೇಸರಿ ಸ್ಕಾರ್ಫ್ ಬೀಸುತ್ತಾ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ ವಿಡಿಯೋ ದೃಶ್ಯಗಳು ವೈರಲ್ ಆಗಿದ್ದವು. ದಾವಣಗೆರೆ ಜಿಲ್ಲೆಯ ಎರಡು ಪಟ್ಟಣಗಳಲ್ಲಿ ಹಿಜಾಬ್ ಧರಿಸಿದ ಪ್ರತಿಭಟನಾಕಾರರು ಮತ್ತು ಕೇಸರಿ ಶಾಲು ಧರಿಸಿದವರು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ಸಭೆ ಸೇರುವುದನ್ನು ನಿಷೇಧಿಸಲಾಯಿತು.

Published by:Divya D
First published: