• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Delhi: ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ, ಸಂತ್ರಸ್ತೆ ಸ್ಥಿತಿ ಚಿಂತಾಜನಕ, ಶಾಕಿಂಗ್ ವಿಡಿಯೋ ವೈರಲ್!

Delhi: ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ, ಸಂತ್ರಸ್ತೆ ಸ್ಥಿತಿ ಚಿಂತಾಜನಕ, ಶಾಕಿಂಗ್ ವಿಡಿಯೋ ವೈರಲ್!

ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಬೈಕ್ ಸವಾರ

ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಬೈಕ್ ಸವಾರ

ದುಷ್ಕರ್ಮಿಗಳು ವಿದ್ಯಾರ್ಥಿನಿಯೊಬ್ಬಳ ಮುಖಲ್ಲೆ ಆ್ಯಸಿಡ್‌ ಎರಚಿದ್ದು, ಸಂತ್ರಸ್ತೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಕೆಯ ತಂದೆ ತಿಳಿಸಿದ್ದಾರೆ. ಅಷ್ಟಕ್ಕೂ ಈ ದಾಳಿ ನಡೆಸಿದ ದುರುಳರು ಯಾರು? ಯಾಕಾಗಿ ದಾಳಿ ನಡೆಸಿದ್ದಾರೆ ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ.

  • News18 Kannada
  • 4-MIN READ
  • Last Updated :
  • Delhi, India
  • Share this:

ನವದೆಹಲಿ(ಡಿ.14): ನೈಋತ್ಯ ದೆಹಲಿಯ (Delhi) ದ್ವಾರಕಾ ಪ್ರದೇಶದಲ್ಲಿ ಇಂದು ಬೈಕ್‌ನಲ್ಲಿ ಬಂದ ಇಬ್ಬರು ಯುವಕರು 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯ ಮುಖ ಸುಟ್ಟುಹೋಗಿದೆ. ಅಲ್ಲದೇ ಕಣ್ಣಿಗೂ ಆ್ಯಸಿಡ್ (Accid Attack) ಹೋಗಿದೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಕಿ ಇಬ್ಬರು ಶಂಕಿತರನ್ನು ಗುರುತಿಸಿದ್ದು, ಒಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಆಘಾತಕಾರಿ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರು ಹುಡುಗಿಯರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ,. ಈ ವೇಳೆ ಬೈಕ್ ಒಂದು ಅವರ ಬಳಿಯಿಂದ ನಿಧಾನವಾಗಿ ಚಲಿಸಿದ್ದು, ಹಿಂಬದಿಯಲ್ಲಿ ಕುಳಿತಿದ್ದಾತ 17 ವರ್ಷದ ವಿದ್ಯಾರ್ಥಿಯ ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ. ಉರಿ ತಾಳಲಾರದ ವಿದ್ಯಾರ್ಥಿನಿ ತೀವ್ರ ನೋವಿನಿಂದ ತನ್ನ ಮುಖವನ್ನು ಹಿಡಿದುಕೊಂಡು ಇಲ್ಲಿಯೇ ಬಿದ್ದು ಒದ್ದಾಡಿದ್ದಾಳೆ.


Acid Attack: ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ; ಕತ್ತು ಸೀಳಿ ಭಯಾನಕ ವಿಕೃತಿ


ಮಾಸ್ಕ್ ಹಾಕಿ ಬಂದಿದ್ದ ದುಷ್ಕರ್ಮಿಗಳು


ಬಾಲಕಿಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, "ನನ್ನ ಇಬ್ಬರು ಹೆಣ್ಣುಮಕ್ಕಳು (ಒಬ್ಬ 17 ವರ್ಷ ಮತ್ತು ಇತರ 13 ವರ್ಷ) ಇಂದು ಬೆಳಿಗ್ಗೆ ಒಟ್ಟಿಗೆ ಹೋಗಿದ್ದರು, ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬಂದ ಇಬ್ಬರು ನನ್ನ ಹಿರಿಯ ಮಗಳ ಮೇಲೆ ಆ್ಯಸಿಡ್ ಎರಚಿ ಅಲ್ಲಿಂದ ಹೊರಟು ಹೋಗಿದ್ದಾರೆ. ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು" ಎಂದಿದ್ದಾರೆ.



ಮಗಳಿಗೆ ಯಾರಾದರೂ ಕಿರುಕುಳ ನೀಡುತ್ತಿದ್ದರೇ ಎಂದು ಕೇಳಿದಾಗ, ತಂದೆ ಇಲ್ಲ ಆಕೆ ಈ ಬಗ್ಗೆ ಯಾವುದೇ ದೂರು ಕೊಟ್ಟಿಲ್ಲ ಎಂದಿದ್ದಾರೆ. ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದರೆ, ನಾನೇ ಅವರೊಂದಿಗೆ ಹೋಗಿರುತ್ತಿದ್ದೆ. ಅಕ್ಕ ಹಾಗೂ ತ.ಗಿ ಇಬ್ಬರೂ ಮೆಟ್ರೋದಲ್ಲಿ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು ಎಂದಿದ್ದಾರೆ. ಬಾಲಕಿಯ ತಾಯಿ ಕೂಡಾಮಗಳು ಮನೆಯಲ್ಲಿ ಯಾರಿಂದಲೂ ಕಿರುಕುಳದ ಬಗ್ಗೆ ಈವರೆಗೆ ಏನೂ ಹೇಳಿಲ್ಲ ಎಂದಿದ್ದಾರೆ.


Acid: ಮಾನವನ ದೇಹದಲ್ಲಿ ಪ್ರತಿದಿನ 2 ಲೀಟರ್​ ಆಮ್ಲ ಉತ್ಪತ್ತಿಯಾಗುತ್ತದೆ!


ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಇಂತಹ ಘೋರ ಅಪರಾಧಗಳನ್ನು ತಡೆಯಲು ಆ್ಯಸಿಡ್ ಮಾರಾಟವನ್ನು ಏಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಇಬ್ಬರು ಗೂಂಡಾಗಳು ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಯಾರಿಗಾದರೂ ಕಾನೂನಿಗೆ ಭಯವಿದೆಯೇ? ಆ್ಯಸಿಡ್ ಮಾರಾಟವನ್ನು ಏಕೆ ನಿಷೇಧಿಸಬಾರದು? ಇದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಆ್ಯಸಿಡ್ ತರಕಾರಿಗಳಂತೆ ಸುಲಭವಾಗಿ ಸಿಗುತ್ತದೆ ಎಂದು ಹೇಳಿದ ಅವರು ಅದರ ಚಿಲ್ಲರೆ ಮಾರಾಟವನ್ನು ಸರ್ಕಾರ ಏಕೆ ನಿಷೇಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ದೆಹಲಿ ಮಹಿಳಾ ಆಯೋಗವು ಈ ನಿಷೇಧಕ್ಕೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ ಎಂದ ಅವರು, ಸರ್ಕಾರಗಳು ಯಾವಾಗ ಎಚ್ಚೆತ್ತುಕೊಳ್ಳುತ್ತವೆ? ಎಂದು ಪ್ರಶ್ನಿಸಿದ್ದಾರೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು