• Home
  • »
  • News
  • »
  • national-international
  • »
  • Crime News: ಲೈಬ್ರರಿಗೆ ಹೋಗ್ತೀನಿ ಅಂದೋಳು OYO ರೂಂನಲ್ಲಿ ಶವವಾಗಿ ಸಿಕ್ಕಿದಳು

Crime News: ಲೈಬ್ರರಿಗೆ ಹೋಗ್ತೀನಿ ಅಂದೋಳು OYO ರೂಂನಲ್ಲಿ ಶವವಾಗಿ ಸಿಕ್ಕಿದಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Crime News: ಓದಲು ಲೈಬ್ರರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ಮನೆಯಿಂದ ಸ್ವಲ್ಪ ದೂರದಲ್ಲಿರುವ ಓಯೋ ಹೋಟೆಲ್‌ನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾಳೆ.

  • Share this:

ಓದಲು ಲೈಬ್ರರಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿನಿ(Engineering student)ಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ. ಮನೆಯಿಂದ ಸ್ವಲ್ಪ ದೂರದಲ್ಲಿರುವ ಓಯೋ ಹೋಟೆಲ್‌ನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾಳೆ. ಓದಲು ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದೆ ಇದ್ದ ಕಾರಣ ಆಕೆಯ ಪೋಷಕರು ಆಕೆಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಯುವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಭಯಗೊಂಡ ಪೋಷಕರು ಪೊಲೀಸರಿ(Police)ಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ (Mobile) ಸ್ಥಳಗಳ ಆಧಾರದ ಮೇಲೆ ತನಿಖೆ ನಡೆಸಿದಾಗ, ಓಯೋ ಹೋಟೆಲ್‌ನಲ್ಲಿ ಫ್ಯಾನ್‌ಗೆ ನೇಣು (Hang) ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಪೊಲೀಸರು ಕಂಡುಕೊಂಡಿದ್ದಾರೆ.


ಘಟನಾ ಸ್ಥಳದಲ್ಲಿ ಪೊಲೀಸರಿಗೆ ಮೂರು ಪುಟಗಳ ಆತ್ಮಹತ್ಯೆ ಪತ್ರ ಸಿಕ್ಕಿದೆ. ಪೊಲೀಸರ ಪ್ರಕಾರ ಅದರಲ್ಲಿ ‘ಐ ಲವ್ ಯೂ ಮಮ್ಮಿ ಪಾಪಾ’ ಎಂದು ಬರೆದಿದ್ದಾಳೆ.


ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ


ಆತ್ಮಹತ್ಯೆ ಮಾಡಿಕೊಂಡ 22 ವರ್ಷದ ಯುವತಿಯ ಹೆಸರು ಶಿವಾನಿ ಗುಪ್ತಾ. ಆಕೆ ಉತ್ತರ ಪ್ರದೇಶದ ನೋಯ್ಡಾದ ರಜತ್ ವಿಹಾರ್ ಕಾಲೋನಿ ನಿವಾಸಿಯಾಗಿದ್ದಳು. ಜೆಪಿ ಇನ್‌ಸ್ಟಿಟ್ಯೂಟ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು.


ಲೈಬ್ರರಿಗೆ ಹೋಗ್ತೀನಿ ಅಂದೋಳು ಮರಳಿ ಬರಲಿಲ್ಲ


ಘಟನೆ ನಡೆದ ದಿನ ಗ್ರಂಥಾಲಯಕ್ಕೆ ಓದುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆದರೆ ಸಂಜೆಯಾದರೂ ಶಿವಾನಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಆಕೆಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಹಲವು ಬಾರಿ ಫೋನ್ ಮಾಡಿದರೂ ಶಿವಾನಿ ಪ್ರತಿಕ್ರಿಯಿಸಲಿಲ್ಲ.


ಇದನ್ನೂ ಓದಿ: ಧೈರ್ಯವಿದ್ದರೆ ದಾವೂದ್‌ ಇಬ್ರಾಹಿಂನನ್ನು ಕೊಲ್ಲುತ್ತೀರಾ?: ಕೇಂದ್ರದ ಬಿಜೆಪಿ ಸರ್ಕಾರಕ್ಕೆ Uddhav Thackeray ಸವಾಲು


ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು


ಅನುಮಾನಗೊಂಡ ಕುಟುಂಬಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಶಿವಾನಿ ಅವರ ಕೊನೆಯ ಸ್ಥಳವು ನೋಯ್ಡಾದ ಸೆಕ್ಟರ್ 56 ರ ಓಯೋ ಹೋಟೆಲ್‌ನಲ್ಲಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆಕೆಯ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಮೂರು ಪುಟಗಳ ಡೆತ್ ನೋಟ್


ಈ ವೇಳೆ ಪೊಲೀಸರಿಗೆ ಮೂರು ಪುಟಗಳ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ‘ಐ ಲವ್ ಯೂ ಡ್ಯಾಡಿ, ಐ ಲವ್ ಯೂ ಮಮ್ಮಿ’ ಎಂದು ಬರೆದಿದ್ದಾಳೆ. ಕುಟುಂಬದವರ ನಿರೀಕ್ಷೆಯನ್ನು ಈಡೇರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Accident Video: ಸಾವಿನ ಮನೆಗೆ ಹೋಗಿ ಬಂದ ಬಾಲಕ! ಬಸ್ Accidentನಿಂದ ಜಸ್ಟ್ ಮಿಸ್! ಭಯಾನಕ ವಿಡಿಯೋ ಇಲ್ಲಿದೆ


22ರ ಯುವತಿಯ ಆತ್ಮಹತ್ಯೆ ನಿರ್ಧಾರ


ಆತ್ಮಹತ್ಯೆಗೂ ಮುನ್ನ ಶಿವಾನಿ ಬರೆದಿದ್ದ ಪತ್ರವನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. 22ರ ಹರೆಯದ ಯುವತಿ ಈ ರೀತಿ ಜೀವನ ಮುಗಿಸಿಕೊಂಡಿದ್ದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಲವ್ ರಿಜೆಕ್ಟ್ ಮಾಡಿದ್ದಕ್ಕೆ ಕೊಲೆ:


ಇತ್ತೀಚೆಗೆ ನಡೆದ ಗುಜರಾತ್​​ನಲ್ಲಿ ಕೊಲೆಯೊಂದು ನಡೆದಿದ್ದು ಪ್ರೀತಿಸಿದವನೇ ಯುವತಿಯ ಪ್ರಾಣ ತೆಗೆದಿದ್ದಾನೆ. ಗುಜರಾತ್‌ನ ವಡೋದರಾ ನಗರದಲ್ಲಿ ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕಾಗಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಹಲವು ಬಾರಿ ಇರಿದು ಕೊಂದ 23 ವರ್ಷದ ಯುವಕನನ್ನು ಬುಧವಾರ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಕಲ್ಪೇಶ್ ಠಾಕೂರ್ ಎಂದು ಗುರುತಿಸಲಾದ ಆರೋಪಿ, ಕೊಲೆಯ ನಂತರ ಮಹಿಳೆಯ ಕೈಯನ್ನು ಸಹ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Divya D
First published: