ಹೈದರಾಬಾದ್​ ಮಾದರಿಯಲ್ಲೇ ಬಿಹಾರದ ಬಕ್ಸಾರ್​ನಲ್ಲೂ ಯುವತಿ ಮೇಲೆ ಅತ್ಯಾಚಾರ; ಗುಂಡಿಕ್ಕಿದ ಬಳಿಕ ಬೆಂಕಿ ಹಚ್ಚಿದ ಕಾಮುಕರು

ಸೋಮವಾರ ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಯುವತಿ ಬಾಲಕಿಯೋ ಅಥವಾ ಪ್ರಾಪ್ತ ವಯಸ್ಕಳೊ ಎಂಬುದು ಮರಣೋತ್ತರ ಪರೀಕ್ಷಾ ವರದಿ ಬಳಿಕ ತಿಳಿಯಲಿದೆ. ಯುವತಿಗೆ ತಲೆಗೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಸ್ಥಳದಲ್ಲಿ ಖಾಲಿ ಸಿಡಿಮದ್ದು ದೊರಕಿದೆ. ಯುವತಿ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

news18-kannada
Updated:December 3, 2019, 9:47 PM IST
ಹೈದರಾಬಾದ್​ ಮಾದರಿಯಲ್ಲೇ ಬಿಹಾರದ ಬಕ್ಸಾರ್​ನಲ್ಲೂ ಯುವತಿ ಮೇಲೆ ಅತ್ಯಾಚಾರ; ಗುಂಡಿಕ್ಕಿದ ಬಳಿಕ ಬೆಂಕಿ ಹಚ್ಚಿದ ಕಾಮುಕರು
ಪ್ರಾತಿನಿಧಿಕ ಚಿತ್ರ
  • Share this:
ಬಕ್ಸಾರ್: ಹೈದರಾಬಾದ್ ಪಶುವೈದ್ಯೆ ಮೇಲೆ ನಡೆದಂತಹ ಪೈಶಾಚಿಕ ಕೃತ್ಯ ಬಿಹಾರದ ಬಕ್ಸಾರ್​ ಜಿಲ್ಲೆಯಲ್ಲೂ ನಡೆದಿದೆ. ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕೊಂದು, ಮೃತದೇಹವನ್ನು ದಹಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಯಲು ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ಸುಟ್ಟು ಕರಕಲಾದ ಯುವತಿಯ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬಕ್ಸಾರ್ ಉಪವರಿಷ್ಠಾಧಿಕಾರಿ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಯುವತಿ ಬಾಲಕಿಯೋ ಅಥವಾ ಪ್ರಾಪ್ತ ವಯಸ್ಕಳೊ ಎಂಬುದು ಮರಣೋತ್ತರ ಪರೀಕ್ಷಾ ವರದಿ ಬಳಿಕ ತಿಳಿಯಲಿದೆ. ಯುವತಿಗೆ ತಲೆಗೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಸ್ಥಳದಲ್ಲಿ ಖಾಲಿ ಸಿಡಿಮದ್ದು ದೊರಕಿದೆ. ಯುವತಿ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ನಿದ್ರಿಸುತ್ತಿದ್ದ ಗಂಡ, ಹೆಂಡತಿ, ಮಗುವಿನ ಬರ್ಬರ ಹತ್ಯೆ; ಶವದ ಜೊತೆ 3 ಗಂಟೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನ ಬಂಧನ

First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading