ಭೋಪಾಲ್: ವಿವಾದಿತ ಚಿತ್ರ 'ದಿ ಕೇರಳ ಸ್ಟೋರಿ'ಯ (The Kerala Story) ಬಗ್ಗೆ ಬಹುಶಃ ನಮೆಗಲ್ಲರಿಗೂ ತಿಳಿದೇ ಇದೆ. ಬಲವಂತದ ಮತಾಂತರ (Convertion) , ಭಯೋತ್ಪಾದನಾ ಚಟುವಟಿಕೆಗಳಿಗೆ ಹೆಣ್ಣುಮಕ್ಕಳನ್ನು (Women) ಬಳಸಿಕೊಳ್ಳುವುದು ಮೊದಲಾದ ಕಥಾ ಹಂದರವನ್ನು ಸಿನಿಮಾ ಒಳಗೊಂಡಿತ್ತು ಅಂತೆಯೇ ಕೇರಳದಲ್ಲಿ (Kerala) ನಡೆದ ನೈಜ ಘಟನೆಯನ್ನು ಸಿನಿಮಾ ಆಧರಿಸಿದೆ ಎಂಬ ಹೇಳಿಕೆ ಚಿತ್ರವನ್ನು ಬಹಿಷ್ಕರಿಸಬೇಕೆಂಬ ಒತ್ತಾಯಕ್ಕೆ ಮುನ್ನುಡಿಯಾಯಿತು. ಇದೆಲ್ಲದರ ನಡುವೆ ದಿ ಕೇರಳ ಸ್ಟೋರಿ ಬಿಡುಗಡೆಗೊಂಡು ಉತ್ತಮ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಅಂತೆಯೇ ಬಾಕ್ಸ್‌ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಇದೀಗ ಸಿನಿಮಾವನ್ನಾಧರಿಸಿದ ಮತ್ತೊಂದು ಘಟನೆ ಭೋಪಾಲ್‌ನಲ್ಲಿ (Bhopal) ಸಂಭವಿಸಿದೆ.
ಮುಸ್ಲಿಂ ವ್ಯಕ್ತಿಯ ಪ್ರೇಮಪಾಶದಲ್ಲಿ ಸಿಲುಕಿದ್ದ ಭೋಪಾಲ್‌ನ 19 ರ ಹರೆಯದ ಯುವತಿಯನ್ನು ದಿ ಕೇರಳ ಸ್ಟೋರಿ ಚಲನಚಿತ್ರಕ್ಕೆ ಕರೆದೊಯ್ದಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ಗೆ ತೀವ್ರ ಮುಖಂಭಂಗ ಉಂಟಾಗಿದ್ದು ಇದಕ್ಕೆ ಕಾರಣ ಆ ಯುವತಿ ತನ್ನ ಅದೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂಬುದು ಸುದ್ದಿಯಾಗಿದೆ.
ಪ್ರೇಮಿಯೊಂದಿಗೆ ಪರಾರಿಯಾದ ನರ್ಸಿಂಗ್ ವಿದ್ಯಾರ್ಥಿನಿ
ನರ್ಸಿಂಗ್ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮಧ್ಯಪ್ರದೇಶದ ಭೋಪಾಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಜ್ಞಾ ಠಾಕೂರ್ ಚಲನಚಿತ್ರಕ್ಕೆ ಕರೆದುಕೊಂಡು ಹೋಗಿದ್ದರು. ಚಲನಚಿತ್ರ ವೀಕ್ಷಿಸಿಯಾದರೂ ಆಕೆ ತನ್ನ ಗೆಳೆಯ ಯೂಸುಫ್‌ನಿಂದ ದೂರಾಗಿ ಸ್ನೇಹವನ್ನು ಕೊನೆಗೊಳಿಸಲಿ ಎಂದು ಬಯಸಿದ್ದರು.
ಆದರೆ ಘಟನೆಯ ಕೆಲವು ದಿನಗಳ ನಂತರ ಯುವತಿಯ ತಾಯಿ ಯುವತಿ ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮಗಳು ಆ ಯುವಕನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿದ್ದಾರೆ.
ಯುವತಿಯ ವಿವಾಹ ನಿಶ್ಚಯವಾಗಿತ್ತು
ಯುವತಿ ಮೇ 15 ರಂದು ತನ್ನ ಪ್ರೇಮಿಯೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು ತರುಣಿಯ ವಿವಾಹವನ್ನು ಮೇ 30 ರಂದು ನಿಶ್ಚಯಿಸಿದ್ದರು. ಆದರೆ ಅದಕ್ಕೆ ಮುನ್ನವೇ ಹುಡುಗಿ ಪರಾರಿಯಾಗಿದ್ದಾಳೆ.
ಚಿನ್ನಾಭರಣಗಳೊಂದಿಗೆ ಯುವತಿ ಎಸ್ಕೇಪ್
ತರುಣಿಯ ಕುಟುಂಬದವರು ನೀಡಿರುವ ಹೇಳಿಕೆಯ ಪ್ರಕಾರ ಆಕೆ ಯೂಸುಫ್‌ನೊಂದಿಗೆ ಪರಾರಿಯಾಗಿದ್ದು ಮಾತ್ರವಲ್ಲದೆ ಆಕೆಯ ವಿವಾಹಕ್ಕೆಂದು ಖರೀದಿಸಿದ್ದ ಚಿನ್ನ, ಬೆಳ್ಳಿ ಆಭರಣಗಳು, ನಗದು, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದಿರುವುದಾಗಿ ತಿಳಿದುಬಂದಿದೆ.
ಕೇರಳ ಸ್ಟೋರಿ ಚಿತ್ರದ ಕಥೆ ಏನು?
ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ಮಸಿರುವ ದಿ ಕೇರಳ ಸ್ಟೋರಿ ಚಲನಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಬಣ್ಣ ಹಚ್ಚಿದ್ದಾರೆ.
ಬಲವಂತದ ಧಾರ್ಮಿಕ ಮತಾಂತರದ ಬಗ್ಗೆ ಚಲನಚಿತ್ರದಲ್ಲಿ ಉಲ್ಲೇಖಿಸಲಾಗಿದ್ದು ಕೇರಳದಲ್ಲಿ ಸುಮಾರು 32,000 ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಹಾಗೂ ಅನೇಕರನ್ನು ಭಯೋತ್ಪಾದಕ ಗುಂಪಾದ ಐಸಿಸ್ ಆಳ್ವಿಕೆಯ ಸಿರಿಯಾಕ್ಕೆ ರವಾನಿಸಲಾದ ನೈಜಘಟನೆಯನ್ನು ಚಿತ್ರ ಒಳಗೊಂಡಿದೆ.
ಸುಪ್ರೀಂ ಕೋರ್ಟ್‌ಗೆ ಅರ್ಜಿ
ಚಿತ್ರ ಬಿಡುಗಡೆಗೂ ಮುನ್ನ ವಿವಾದಗಳಿಗೆ ಆಹಾರವಾಗಿತ್ತು ಅಂತೆಯೇ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಚಿತ್ರವು ದ್ವೇಷದ ಕಿಡಿಯನ್ನು ಹತ್ತಿಸುತ್ತದೆ ಹಾಗೂ ಶ್ರಾವ್ಯ-ದೃಶ್ಯ ಪ್ರಚಾರದ ಆಧಾರದ ಮೇಲೆ ಚಿತ್ರದ ಬಿಡುಗಡೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು.
ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ದ್ವೇಷದ ಮಾತುಗಳಲ್ಲಿ ವೈವಿಧ್ಯಗಳಿವೆ. ಈ ಚಿತ್ರವು ಪ್ರಮಾಣೀಕರಣವನ್ನು ಪಡೆದುಕೊಂಡಿದೆ ಮತ್ತು ಮಂಡಳಿಯಿಂದ ಅನುಮತಿ ಪಡೆದಿದೆ ಎಂದು ತಿಳಿಸಿತ್ತು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರದ ನಿರ್ಮಾಪಕರ ವಿರುದ್ಧ ಸಿಡಿದೆದ್ದರು ಹಾಗೂ ಇದು ಸಂಘ ಪರಿವಾರದ ಕೆಲಸ ಎಂದು ಹರಿಹಾಯ್ದರು.
ಇದನ್ನೂ ಓದಿ: The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!
ಮೂವರು ಯುವತಿಯರ ನೈಜ ಕಥೆಗಳು
ವಿವಾದಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಲ್ಲಿ ಚಿತ್ರದ ಪ್ರೋಮೋವಾದ ಕೇರಳದ 32,000 ಹೆಣ್ಣುಮಕ್ಕಳ ಹೃದಯವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು ಎಂಬ ಶೀರ್ಷಿಕೆಯಿಂದ ಕೇರಳದ ಮೂವರು ಯುವತಿಯರ ನೈಜ ಕಥೆಗಳು ಎಂದು ಬದಲಾಯಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ