Video | ಗಂಗಾ ನದಿಯಲ್ಲಿ ಡಾಲ್ಫಿನ್ ಮೀನಿಗೆ ದೊಣ್ಣೆ, ಕೊಡಲಿಯಿಂದ ಹೊಡೆದ ಕೊಂದ ಸ್ಥಳೀಯರು!

ಈ ಡಾಲ್ಪಿನ್ ಮೀನಿಗೆ ಮೂವರು ಬಡಿಗೆ ಹಾಗೂ ಕೊಡಲಿಯಿಂದ ಹೊಡೆದ ಪರಿಣಾಮ ಮೀನಿನ ಅಪಾರದ ಪ್ರಮಾಣದ ರಕ್ತದಿಂದ ಗಂಗಾದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿತ್ತು.

ಡಾಲ್ಫಿನ್ ಮೀನಿಗೆ ದೊಣ್ಣೆ, ಕೊಡಲಿಯಿಂದ ಹೊಡೆಯುತ್ತಿರುವುದು.

ಡಾಲ್ಫಿನ್ ಮೀನಿಗೆ ದೊಣ್ಣೆ, ಕೊಡಲಿಯಿಂದ ಹೊಡೆಯುತ್ತಿರುವುದು.

 • Share this:


  ಲಕ್ನೋ; ಉತ್ತರಪ್ರದೇಶದ ಪ್ರತಾಪ್​ಘರ್ ನಗರದ ಗಂಗಾ ನದಿಯಲ್ಲಿ ಮೂರ್ನಾಲ್ಕು ಮಂದಿ ಸೇರಿ ಡಾಲ್ಫಿನ್ ಮೀನನ್ನು ದೊಣ್ಣೆ ಹಾಗೂ ಕೊಡಲಿಯಿಂದ ಹೊಡೆದು ಸಾಯಿಸಿದ ಘಟನೆ ಕಳೆದ ತಿಂಗಳು ನಡೆದಿದೆ. ಡಾಲ್ಫಿನ್ ಮೀನಿಗೆ ಮೂರು ಜನ ದೊಣ್ಣೆ ಹಾಗೂ ಕೊಡಲಿಯಿಂದ ಮೂರು ಜನರು ಅಮಾನವೀಯವಾಗಿ ಹೊಡೆದು ಸಾಯಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

  ಬಡಿಗೆ ಹಾಗೂ ಕೊಡಲಿಯಿಂದ ರಕ್ತ ಬರುವ ಹಾಗೆ ಮೀನಿಗೆ ಹೊಡೆದು, ನೀರಿನಲ್ಲಿಯೇ ರಕ್ತಸ್ರಾವದಿಂದ ಸಾವನ್ನಪ್ಪಿದೆ. ಈ ವಿಡಿಯೋ ಆಧಾರದ ಮೇಲೆ ಮೂವರ ವಿರುದ್ಧ ಡಿಸೆಂಬರ್ 21ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

  ಇದನ್ನು ಓದಿ: ಹಕ್ಕಿ ಜ್ವರ ಭಯ ಇಲ್ಲ; ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಕೋಳಿ ‌ಮಾರಾಟ

  ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್‌ಗಳು ಒಂದಾಗಿವೆ. ಇವುಗಳ ಅತಿಯಾದ ಬೇಟಿಯಾಡುವಿಕೆಯಿಂದ ಭಾರತದಲ್ಲಿ ಈ ಸಂತತಿಯ ಡಾಲ್ಪಿನ್​ಗಳು ಅಳಿವಿನಂಚಿನಲ್ಲಿವೆ.


  ಈ ಡಾಲ್ಪಿನ್ ಮೀನಿಗೆ ಮೂವರು ಬಡಿಗೆ ಹಾಗೂ ಕೊಡಲಿಯಿಂದ ಹೊಡೆದ ಪರಿಣಾಮ ಮೀನಿನ ಅಪಾರದ ಪ್ರಮಾಣದ ರಕ್ತದಿಂದ ಗಂಗಾದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿತ್ತು.

  Published by:HR Ramesh
  First published: