HOME » NEWS » National-international » GIC RELIANCE RETAIL DEAL SINGAPORE INVESTMENT COMPANY GIC TO INVEST RS 5512 CRORE IN RELIANCE RETAIL SCT

GIC-Reliance Retail deal: ಸಿಂಗಾಪುರದ ಜಿಐಸಿಯಿಂದ ರಿಲಯನ್ಸ್​ ರೀಟೇಲ್​ನಲ್ಲಿ 5,512 ಕೋಟಿ ರೂ. ಹೂಡಿಕೆ

ಸಿಂಗಾಪುರ ಮೂಲದ ಜಿಐಸಿ ಕಂಪನಿ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಭಾಗವಾಗಿರುವ ರಿಲಯನ್ಸ್​ ರೀಟೇಲ್ ಯುನಿಟ್​ನಲ್ಲಿ 5,512.5 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಒಂದು ವಾರದಿಂದ ರಿಲಯನ್ಸ್​ನಲ್ಲಿ ಹೂಡಿಕೆ ಮಾಡುತ್ತಿರುವ 6ನೇ ಕಂಪನಿ ಇದಾಗಿದೆ. 

Sushma Chakre | news18-kannada
Updated:October 3, 2020, 10:09 AM IST
GIC-Reliance Retail deal: ಸಿಂಗಾಪುರದ ಜಿಐಸಿಯಿಂದ ರಿಲಯನ್ಸ್​ ರೀಟೇಲ್​ನಲ್ಲಿ 5,512 ಕೋಟಿ ರೂ. ಹೂಡಿಕೆ
ರಿಲಯನ್ಸ್
  • Share this:
ಮುಂಬೈ (ಅ. 3): ಕಳೆದ ಮೂರ್ನಾಲ್ಕು ದಿನಗಳಿಂದ ರಿಲಯನ್ಸ್​ ಸಂಸ್ಥೆಗೆ ವಿಶ್ವಾದ್ಯಂತ ಹೂಡಿಕೆ ಹರಿದುಬರುತ್ತಿದೆ. ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ಮುಬಾದಲ ಕಂಪನಿಯ ಬೆನ್ನಲ್ಲೇ ಮತ್ತೊಂದು ಕಂಪನಿ ಭಾರೀ ಮೊತ್ತ ಹೂಡಿಕೆ ಮಾಡಿದೆ. ಸಿಂಗಾಪುರ ಮೂಲದ ಜಿಐಸಿ ಕಂಪನಿ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಭಾಗವಾಗಿರುವ ರಿಲಯನ್ಸ್​ ರೀಟೇಲ್ ಯುನಿಟ್​ನಲ್ಲಿ 5,512.5 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಒಂದು ವಾರದಿಂದ ರಿಲಯನ್ಸ್​ನಲ್ಲಿ ಹೂಡಿಕೆ ಮಾಡುತ್ತಿರುವ 6ನೇ ಕಂಪನಿ ಇದಾಗಿದೆ. ರಿಲಯನ್ಸ್ ರೀಟೇಲ್ ವೆಂಚರ್​ನ 4.285 ಲಕ್ಷ ಕೋಟಿ ಈಕ್ವಿಟಿ ಮೊತ್ತದ​ ಶೇ. 1.22 ಪಾಲು ಪಡೆದಿರುವ ಸಿಂಗಾಪುರದ ಜಿಐಸಿ ಒಟ್ಟು 5,512 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್​ನ ಹಲವು ವ್ಯವಹಾರಗಳನ್ನ ಖರೀದಿ ಮಾಡಿತ್ತು. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್​ನ ರೀಟೇಲ್, ಹೋಲ್​ಸೇಲ್, ಲಾಜಿಸ್ಟಿಕ್ಸ್, ವೇರ್​ಹೌಸಿಂಗ್ ವ್ಯವಹಾರಗಳನ್ನು ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್​ ಘೋಷಿಸಿತ್ತು. 3 ದಿನಗಳ ಹಿಂದೆ ಅಮೆರಿಕಾ ಮೂಲದ ಸಿಲ್ವರ್​ ಲೇಕ್​ ಎಂಬ ಸಂಸ್ಥೆ 1,875 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿತ್ತು.

ಇದನ್ನೂ ಓದಿ: Mubadala-Reliance Retail Deal – ಅಬುಧಾಬಿಯ ಮುಬಾದಲದಿಂದ ರಿಲಾಯನ್ಸ್ ರೀಟೇಲ್​ನಲ್ಲಿ 6,247 ಕೋಟಿ ಹೂಡಿಕೆ

ಎರಡು ದಿನಗಳ ಹಿಂದೆ ಅಬುಧಾಬಿ ಮೂಲದ ಮುಬದಾಲ ಇನ್ವೆಸ್ಟ್​ಮೆಂಟ್ ಕಂಪನಿ ರಿಲಯನ್ಸ್​ ರೀಟೇಲ್ ವೆಂಚರ್ಸ್​ನಲ್ಲಿ 6,247.50 ಕೋಟಿ ರೂ ಹೂಡಿಕೆ ಮಾಡಿತ್ತು. ಈ ಹೂಡಿಕೆಯೊಂದಿಗೆ ಮುಬಾದಲಾ ರಿಲಯನ್ಸ್ ರೀಟೇಲ್​ನ ಶೇ. 1.4ರಷ್ಟು ಪಾಲನ್ನು ಖರೀದಿಸಿತ್ತು. ವಿಶ್ವದ ಅನೇಕ ಪ್ರಮುಖ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಆಕರ್ಷಿಸುತ್ತಿರುವ ರಿಲಯನ್ಸ್ ರೀಟೇಲ್​ನ ವ್ಯವಹಾರ ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ದೇಶಾದ್ಯಂತ 12 ಸಾವಿರ ಮಳಿಗೆಗಳೊಂದಿಗೆ ರಿಲಯನ್ಸ್ ರೀಟೇಲ್ ವ್ಯವಹಾರ ಹೊಂದಿದೆ.

ರಿಲಯನ್ಸ್​ ರೀಟೇಲ್ಸ್​ ಇದುವರೆಗೂ ಶೇ. 6.87 ಪಾಲಿನ ಮೂಲಕ 30,360 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದೆ. ರಿಲಯನ್ಸ್​ ರೀಟೇಲ್​ನಲ್ಲಿ ಹೂಡಿಕೆ ಮಾಡಿರುವ ಜಿಐಸಿ ಇದುವರೆಗೂ 40 ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಿದೆ. 2 ದಶಕಗಳಿಗೂ ಹೆಚ್ಚು ಕಾಲದಿಂದ ಜಿಐಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದೆ. ಸಿಂಗಾಪುರದಲ್ಲಿ ಇದರ ಕೇಂದ್ರ ಕಚೇರಿಯಿದ್ದು, 1,700 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಜಗತ್ತಿನ 10ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಇದರ ಕಚೇರಿಗಳಿವೆ.
Published by: Sushma Chakre
First published: October 3, 2020, 10:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories