• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mexican Turtle: ದಕ್ಷಿಣ ಅಮೆರಿಕಾದ ದೈತ್ಯ ಗಾತ್ರದ ಆಮೆ ಪಶ್ಚಿಮ ಬಂಗಾಳದಲ್ಲಿ ಪತ್ತೆ; ಪ್ರಾಣಿ ತಜ್ಞರಲ್ಲಿ ಅಚ್ಚರಿ!

Mexican Turtle: ದಕ್ಷಿಣ ಅಮೆರಿಕಾದ ದೈತ್ಯ ಗಾತ್ರದ ಆಮೆ ಪಶ್ಚಿಮ ಬಂಗಾಳದಲ್ಲಿ ಪತ್ತೆ; ಪ್ರಾಣಿ ತಜ್ಞರಲ್ಲಿ ಅಚ್ಚರಿ!

ಮೆಕ್ಸಿಕನ್ ಆಮೆ

ಮೆಕ್ಸಿಕನ್ ಆಮೆ

ಮೆಕ್ಸಿಕೋ ಮೂಲದ ಈ ದೈತ್ಯ ಆಮೆ ಪಶ್ಚಿಮ ಬಂಗಾಳದ ಹೌರಾದ ಶ್ಯಾಂಪುರದಲ್ಲಿ ಕಂಡು ಬಂದಿದ್ದು, ತನ್ನ ದೇಹದ ಮೇಲೆ ವರ್ಣರಂಜಿತ ಪಟ್ಟಿಯನ್ನು ಹೊಂದಿದೆ. ಅಲ್ಲದೇ ನೀರಿನಲ್ಲಿ ಸಂಚರಿಸುವಾಗ ಚಿನ್ನದ ಬಣ್ಣದಿಂದ ಹೊಳೆಯುತ್ತಾ ಮೋಡಿ ಮಾಡಿದೆ.

  • Local18
  • 5-MIN READ
  • Last Updated :
  • Share this:

ಹೌರಾ: ರೆಡ್‌ ಇಯರ್ಡ್‌ ಸ್ಲೈಡರ್‌ ಎಂದು ಕರೆಯಲ್ಪಡುವ ಬೃಹತ್ ಗಾತ್ರದ ಮೆಕ್ಸಿಕನ್ ಆಮೆ (Mexican Turtle) ಪಶ್ಚಿಮ ಬಂಗಾಳದ (West Bengal) ಹೌರಾ ಜಿಲ್ಲೆಯಲ್ಲಿ ಕಂಡು ಬರುವ ಮೂಲಕ ಪ್ರಾಣಿ ತಜ್ಞರಲ್ಲಿ ಅಚ್ಚರಿ ಮೂಡಿಸಿದೆ. ದಕ್ಷಿಣ ಅಮೆರಿಕಾ, ಮೆಕ್ಸಿಕೋ (Mexico) ಮತ್ತು ಮಿಸಿಪಿಪ್ಪಿ ಸರೋವರದಲ್ಲಿ (Mississippi River) ಸಾಮಾನ್ಯವಾಗಿ ಕಂಡು ಬರುವ ಈ ಅಪರೂಪದ ಆನೆ ಭಾರತದಲ್ಲಿ ಕಂಡು ಬಂದಿರೋದು ಆಶ್ಚರ್ಯ ತರಿಸಿದೆ.


ಮೆಕ್ಸಿಕೋ ಮೂಲದ ಈ ದೈತ್ಯ ಆಮೆ ಪಶ್ಚಿಮ ಬಂಗಾಳದ ಹೌರಾದ ಶ್ಯಾಂಪುರದಲ್ಲಿ ಕಂಡು ಬಂದಿದ್ದು, ತನ್ನ ದೇಹದ ಮೇಲೆ ವರ್ಣರಂಜಿತ ಪಟ್ಟಿಯನ್ನು ಹೊಂದಿದೆ. ಅಲ್ಲದೇ ನೀರಿನಲ್ಲಿ ಸಂಚರಿಸುವಾಗ ಚಿನ್ನದ ಬಣ್ಣದಿಂದ ಹೊಳೆಯುತ್ತಾ ಮೋಡಿ ಮಾಡುತ್ತಿದ್ದು, ವಿದೇಶದಲ್ಲಿ ಈ ಆಮೆ ಸಾಕುಪ್ರಾಣಿಯಾಗಿಯೂ ಬಹಳ ಜನಪ್ರಿಯವಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಈ ಆಮೆ ಕಂಡುಬರೋದಿಲ್ಲ. ಅದಾಗ್ಯೂ ಹೌರಾದಲ್ಲಿ ಕಂಡು ಬಂದಿರೋದು ತಜ್ಞರಲ್ಲಿ ಅಚ್ಚರಿ ಮೂಡಿಸಿದೆ.


ಈ ವಿದೇಶಿ ಆಮೆ ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದು, ಆಮೆ ಸಿಕ್ಕಿರುವ ಸ್ಥಳದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ತಜ್ಞರು ಹೇಳುವ ಪ್ರಕಾರ, ಈ ಆಮೆ ವಾಸಿಸುವ ಪ್ರದೇಶದಲ್ಲಿ ಮೀನು ಅಥವಾ ಇತರ ಜಲಚರಗಳು ವಾಸಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ದೈತ್ಯಾಕಾರದ ಆಮೆ ​​ಶ್ಯಾಮಪುರದ ಜಲಾಶಯಕ್ಕೆ ಹೇಗೆ ಬಂದಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗಿನ್ನೂ ಸಾಧ್ಯವಾಗಿಲ್ಲ. ಪತ್ತೆಯಾಗಿರುವ ಆಮೆಗೆ ಈಗ ಒಂದು ವರ್ಷ ವಯಸ್ಸಾಗಿದೆ. ಪರಿಸರ ಹಾನಿಯ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Cheetah Death: ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! ಒಂದೇ ತಿಂಗಳಲ್ಲಿ 2 ನಿಧನ; ಕಾರಣ ಏನು?


ಮೆಕ್ಸಿಕನ್ ಆಮೆ ಪರಿಸರಕ್ಕೆ ಹಾನಿಕಾರಕವೇ?


ಪರಿಸರವಾದಿಗಳು ಮತ್ತು ಪ್ರಾಣಿ ತಜ್ಞರ ಪ್ರಕಾರ, ಪ್ರಪಂಚದಲ್ಲಿ ಇರುವ ಏಳು ಜಾತಿಯ ಆಮೆಗಳಲ್ಲಿ ಇದು ಅತ್ಯಂತ ಹಾನಿಕಾರಕವಾಗಿದೆ. ಈ ದೈತ್ಯ ಆಮೆಯನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ರೆಡ್ ಇಯರ್ಡ್ ಸ್ಲೈಡರ್ ಎಂದು ಕರೆಯಲಾಗುತ್ತದೆ. ಈ ಆಮೆಯ ವೈಜ್ಞಾನಿಕ ಹೆಸರು ‘ಟ್ರಾಕೆಮಿಸ್ ಸ್ಕ್ರಿಪ್ಟಾ ಎಲೆಗಾನ್ಸ್’. ಇದರ ಕಿವಿಗಳ ಬದಿಗಳಲ್ಲಿ ಪ್ರಕಾಶಮಾನವಾದ ಕೆಂಪು ವೃತ್ತಾಕಾರ ಅಥವಾ ಉದ್ದವಾದ ಚುಕ್ಕೆಗಳಿಂದಾಗಿ ಈ ಜಾತಿಯ ಆಮೆಗಳನ್ನು 'ಕೆಂಪು ಇಯರ್ಡ್ ಸ್ಲೈಡರ್' ಎಂದು ಕರೆಯಲಾಗುತ್ತದೆ. ಮರಿ ಆಮೆಗಳು ವರ್ಣರಂಜಿತವಾಗಿರುವುದರಿಂದ ಸಾಕುಪ್ರಾಣಿಗಳಾಗಿ ಜನಪ್ರಿಯವಾಗಿವೆ. ಅಮೇರಿಕಾ ಅಥವಾ ಮೆಕ್ಸಿಕೋದಲ್ಲಿ ಅನೇಕ ಮಂದಿ ಈ ಆಮೆಗಳನ್ನು ಖರೀದಿಸಿ ಮನೆಯಲ್ಲಿ ಸಾಕುತ್ತಾರೆ ಎಂದು ತಜ್ಞರು ಹೇಳಿದ್ದಾರೆ.


ಈ ಆಮೆಗಳ ಹಿನ್ನೆಲೆ ಏನು?


ಪ್ರಾಣಿ ಶಾಸ್ತ್ರಜ್ಞರು ಹೇಳುವ ಪ್ರಕಾರ, ಈ ಮೆಕ್ಸಿಕನ್‌ ಜಾತಿಯ ಆಮೆಗಳು ಮಧ್ಯ ಜುರಾಸಿಕ್ ಅವಧಿಯಲ್ಲಿ ಹುಟ್ಟಿಕೊಂಡಿರಬಹುದು. ಸಾಮಾನ್ಯವಾಗಿ, ಈ ಜಾತಿಯ ಆಮೆಗಳು ಕೊಳಗಳು, ಸಣ್ಣ ಜಲಮೂಲಗಳು ಮತ್ತು ತಾಜಾ ನೀರಿನಲ್ಲಿ ಕಂಡುಬರುತ್ತವೆ. ಮತ್ತು ಅವುಗಳು ಯಾವುದೇ ಪರಿಸರಕ್ಕೆ ಬೇಗನೆ ಹೊಂದಿಕೊಳ್ಳುತ್ತವೆ. ಅವುಗಳ ದೈಹಿಕ ಬೆಳವಣಿಗೆಯೂ ತುಂಬಾ ವೇಗವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: Saint Von Colucci: ಸುಂದರವಾಗಿ ಕಾಣಲು 12 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಖ್ಯಾತ ನಟ ಸಾವು!


ಇನ್ನು ಈ ಆಮೆಯ ಉಪಜಾತಿಗಳಲ್ಲಿ ಸ್ನ್ಯಾಪಿಂಗ್ ಆಮೆ ಕೂಡ ಒಂದು. ಈ ಜಾತಿಯ ಆಮೆಗಳು ಸುಮಾರು 100 ಕೆಜಿ ವರೆಗೆ ಗಾತ್ರದಲ್ಲಿ ಬೆಳವಣಿಗೆ ಆಗುತ್ತವೆ. ಬ್ಯಾಕ್ಟೀರಿಯಾದ ವಾಹಕಗಳಲ್ಲಿ ಒಂದು ಸಾಲ್ಮೊನೆಲ್ಲಾ. ಈ ನಿರ್ದಿಷ್ಟ ಬ್ಯಾಕ್ಟೀರಿಯಾವು ಜಲಚರ ಪ್ರಾಣಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹಾನಿ ಮಾಡುತ್ತದೆ. ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಬೇಯಿಸದ ಮಾಂಸ, ಹಸಿ ಮೊಟ್ಟೆ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದು ದೇಹವನ್ನು ಪ್ರವೇಶಿಸಿದ 12 ರಿಂದ 72 ಗಂಟೆಗಳ ಒಳಗೆ ಸೋಂಕು ತಗುಲುತ್ತದೆ. ಇದರಿಂದ ಅತಿಸಾರ, ಹೊಟ್ಟೆ ನೋವು, ವಾಂತಿ ಮತ್ತು ಜ್ವರ ಮುಂತಾದ ರೋಗಲಕ್ಷಣಗಳು ಕಂಡು ಬರುತ್ತವೆ. ಈ ಬ್ಯಾಕ್ಟೀರಿಯಾ ದಾಳಿಯಿಂದಮಾನವ ದೇಹದಲ್ಲಿ ಜೀವಕೋಶಗಳು ಹಾನಿಯುಂಟಾಗಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದಾರೆ.ಇದೇ ಮೊದಲಲ್ಲ
ಇದಕ್ಕೂ ಮೊದಲು ಕೆಂಪು ಇಯರ್ಡ್ ಸ್ಲೈಡರ್ ಆಮೆಯನ್ನು 2015 ರಲ್ಲಿ ಬಂಗಾಳದ ರಾಜರ್ಹತ್‌ನ ಜಲಾಶಯದಲ್ಲಿ ಪತ್ತೆ ಮಾಡಲಾಗಿತ್ತು. ನಂತರ 2020 ರಲ್ಲಿ, ರವೀಂದ್ರ ಸರೋವರದಲ್ಲಿ ಕಾಣಿಸಿಕೊಂಡಿತು. ಇನ್ನು ಕೇರಳದ ಕೋಲ್ತೋಡ್ ಕಾಲುವೆಯಲ್ಲಿಯೂ ಕೂಡ  ಕಾಣಿಸಿಕೊಂಡಿತ್ತು. ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯು ಆಮೆಯನ್ನು ರಕ್ಷಿಸಿ ನಿಗಾದಲ್ಲಿ ಇರಿಸಿದೆ. ಪಶ್ಚಿಮ ಬಂಗಾಳದಲ್ಲಿ ರೆಡ್ ಇಯರ್ಡ್ ಸ್ಲೈಡರ್ ಕಾಣಿಸಿಕೊಂಡಿದ್ದು ಇದು ಮೂರನೇ ಬಾರಿ.

First published: