Ghulam Nabi Azad: ಮೋದಿ ಒರಟಲ್ಲ, ಮಾನವೀಯತೆ ಉಳ್ಳವರು! ಗುಲಾಂ ನಬಿ ಆಜಾದ್‌ರಿಂದ ನಮೋ ಗುಣಗಾನ

ಕಳೆದ ವರ್ಷ ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆಯಿಂದ ನಿವೃತ್ತರಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದಾಯ ಭಾಷಣದಲ್ಲಿ ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ಗರು. ಈ ಘಟನೆ ಬಗ್ಗೆ ಮಾತನಾಡಿದ ಗುಲಾಂ ನಬಿ ಆಜಾದ್, ಪ್ರಧಾನಿ ಮೋದಿ ಅಂದು ಕಣ್ಣೀರು ಹಾಕಿದ್ದು ಯಾಕೆ ಅಂತ ಇಂದು ವಿವರಿಸಿದ್ದಾರೆ. 

ಗುಲಾಂ ನಬಿ ಆಜಾದ್-ನರೇಂದ್ರ ಮೋದಿ ಸಂಗ್ರಹ ಚಿತ್ರ

ಗುಲಾಂ ನಬಿ ಆಜಾದ್-ನರೇಂದ್ರ ಮೋದಿ ಸಂಗ್ರಹ ಚಿತ್ರ

  • Share this:
ನವದೆಹಲಿ: ಕಳೆದ ಶುಕ್ರವಾರವಷ್ಟೇ (Friday) ಕಾಂಗ್ರೆಸ್ (Congress) ತೊರೆದಿರುವ ಹಿರಿಯ ನಾಯಕ (Senior Leader), ಮಾಜಿ ಕೇಂದ್ರ ಸಚಿವ (Ex Central Minister) ಹಾಗೂ ಜಮ್ಮು ಕಾಶ್ಮೀರದ (Jammu and Kashmir) ಮಾಜಿ ಮುಖ್ಯಮಂತ್ರಿ (Ex CM) ಗುಲಾಂ ನಬಿ ಆಜಾದ್ (Ghulam Nabi Azad) ಅವರು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಗುಣಗಾನ ಮಾಡಿದ್ದಾರೆ. “ನರೇಂದ್ರ ಮೋದಿಯವರ ಬಗ್ಗೆ ನನಗೆ ತಪ್ಪು ಗ್ರಹಿಕೆ ಇತ್ತು. ಅವರೊಬ್ಬ ಒರಟು ಮನುಷ್ಯ ಅಂತ ತಿಳಿದಿದ್ದೆ. ಆದರೆ ಅವರು ಮಾನವೀಯತೆ ಉಳ್ಳ ವ್ಯಕ್ತಿ ಎನ್ನುವುದು ಆ ಬಳಿಕವಷ್ಟೇ ನನಗೆ ಮನವರಿಕೆಯಾಯಿತು” ಅಂತ ಗುಲಾಂ ನಬಿ ಆಜಾದ್ ಅವರರು ‘ನಮೋ’ ಗುಣಗಾನ ಮಾಡಿದ್ದಾರೆ.

ಹಿಂದೆ ಸಂಸತ್‌ನಲ್ಲಿ ಕಣ್ಣೀರು ಹಾಕಿದ್ದ ಮೋದಿ

ಕಳೆದ ವರ್ಷ ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆಯ ಅಧಿಕಾರಾವಧಿ ಮುಗಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದಾಯ ಭಾಷಣದಲ್ಲಿ ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ಗರು. ಈ ಘಟನೆ ಬಗ್ಗೆ ಮಾತನಾಡಿದ ಗುಲಾಂ ನಬಿ ಆಜಾದ್, ಪ್ರಧಾನಿ ಮೋದಿ ಅಂದು ಕಣ್ಣೀರು ಹಾಕಿದ್ದು ಯಾಕೆ ಅಂತ ಇಂದು ವಿವರಿಸಿದ್ದಾರೆ.

“ಮೋದಿ ಒರಟು ಮನುಷ್ಯ ಅಂತ ನಾನು ಭಾವಿಸಿದ್ದೆ”

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸಾರವಿಲ್ಲ, ಮಕ್ಕಳಿಲ್ಲ, ಹೀಗಾಗಿ ಅವರು ಒರಟು ಮನಸ್ಸಿನ ವ್ಯಕ್ತಿ ಅಂತ ನಾನು ತಿಳಿದುಕೊಂಡಿದ್ದೆ. ಆದರೆ ಅವರು ಮಾನವೀಯತೆ ಉಳ್ಳವರು ಎನ್ನುವುದು ನನ್ನ ಗಮನಕ್ಕೆ ಬಂತು ಅಂತ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಇದನ್ನೂ ಓದಿ: Congress President: ಕೌನ್ ಬನೇಗಾ ಕಾಂಗ್ರೆಸ್ ಪ್ರೆಸಿಡೆಂಟ್? ಅಕ್ಟೋಬರ್ 17ಕ್ಕೆ ಎಲೆಕ್ಷನ್

“ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದರು”

ಹಿಂದೆ ಮೋದಿ ಸಾಹೇಬ್ ಅವರು ಗುಜರಾತ್ ಸಿಎಂ ಆಗಿದ್ದಾಗ, ಅತ್ತ ನಾನು ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿದ್ದೆ. ಆಗ ಒಮ್ಮೆ 2006, ಮೇ 25ರಂದು ಶ್ರೀನಗರದಲ್ಲಿ ಬಸ್ಸಿನೊಳಗೆ ಗ್ರೆನೇಡ್ ಸ್ಫೋಟವಾಗಿ ಸಾವುನೋವು ಸಂಭವಿಸಿತ್ತು. ಆ ಘಟನೆಯಲ್ಲಿ ಮೃತಪಟ್ಟವರ  ದೇಹಗಳು ಛಿದ್ರವಾಗಿದ್ದವು. ಆಗ ಮೋದಿ ಅವರು ನನಗೆ ಕರೆ ಮಾಡಿ, ಸಾಂತ್ವನ ಹೇಳಿದ್ದರು.

 “ಮೋದಿ ಮತ್ತೆ ಕರೆ ಮಾಡಿದ್ದರು”

ಮೋದಿ ಕಾಲ್ ಮಾಡಿದ್ದಾಗ ನಾನು ಅಕ್ಷರಶಃ ಅಳುತ್ತಿದ್ದೆ. ಹೀಗಾಗಿ ಈಗ ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅವರು ಕೇಳಿಸಿಕೊಂಡಿದ್ದಾರೆ ಎಂದು ನನಗನಿಸುತ್ತಿದೆ. ನಂತರ, ನಾನು ಗಾಯಗೊಂಡವರನ್ನು ನೋಡಲು ಹೋದಾಗ ಸಂತ್ರಸ್ತರನ್ನು ಭೇಟಿಯಾದಾಗ, ಅವರು ತಮ್ಮ ನೋವನ್ನು ನನ್ನೊಂದಿಗೆ ಹಂಚಿಕೊಂಡರು, ನಾನು ಆಗಲೂ ಅಳುತ್ತಿದ್ದೆ. ಆಗ ನರೇಂದ್ರ ಮೋದಿ ಅವರು ಮತ್ತೆ ನನಗೆ ಕರೆ ಮಾಡಿ, ಸಾಂತ್ವನ ಹೇಳಿದ್ದರು ಅಂತ ಗುಲಾಂ ನಬಿ ಆಜಾದ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್​ಗೆ ಅಗ್ನಿಪರೀಕ್ಷೆ! ಆಮ್​ಆದ್ಮಿ ಶಾಸಕರಿಂದ ಬಿಜೆಪಿ ಬೆಂಬಲ?

“ಚೌಕಿದಾರ್ ಹಿ ಚೋರ್ ಹೈ ಅಂತ ನಾನು ಹೇಳಿರಲಿಲ್ಲ”

2019 ರ ಚುನಾವಣೆಯ ಮೊದಲು ರಾಹುಲ್ ಗಾಂಧಿ ಅವರು ತಂದಿದ್ದ "ಚೌಕಿದಾರ್ ಹಿ ಚೋರ್ ಹೈ" ಎಂಬ ಘೋಷಣೆಯನ್ನು ಪ್ರಧಾನಿ ಮೋದಿ ವಿರುದ್ಧ ಬಳಸಲು ಒಪ್ಪದ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ತಾನೂ ಸೇರಿದ್ದೇನೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ತಮ್ಮನ್ನು "ಚೌಕಿದಾರ್" ಅಥವಾ ದೇಶದ ಕಾವಲುಗಾರ ಎಂದು ಕರೆದುಕೊಳ್ಳುವ ಪಿಎಂ ಮೋದಿಗೆ ನೀತಿ ಆಧಾರಿತ ವಿರೋಧಕ್ಕಾಗಿ ವರಿಷ್ಠರು ಎಲ್ಲರೂ ಇದ್ದಾರೆ - ಆದರೆ ಅವರು ಪ್ರಧಾನಿಯ ವಿರುದ್ಧ "ಚೋರ್" ಎಂಬ  ಪದಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅದು ನಮ್ಮ ಸಂಸ್ಕೃತಿಯಲ್ಲ ಅಂತ ಅವರು ಹೇಳಿದ್ರು.
Published by:Annappa Achari
First published: