Ghulam Nabi Azad: ಕಾಂಗ್ರೆಸ್​ನಲ್ಲಿ ಮರಳಿ ಬರುತ್ತಾ 1996ರ ಸಮಯ? ಅಷ್ಟಕ್ಕೂ ಗುಲಾಂ ನಬಿ ಆಜಾದ್ ರಣತಂತ್ರವೇನು?

Ghulam Nabi Azad Congress: 1996 ರಲ್ಲಿ ನಾರಾಯಣ್ ದತ್ ತಿವಾರಿ ಮತ್ತು ಅರ್ಜುನ್ ಸಿಂಗ್ ಅವರಂತಹ ನಾಯಕರು ನರಸಿಂಹ ರಾವ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದರು. 1996 ರ ಚುನಾವಣೆಯಲ್ಲೂ ಸ್ಪರ್ಧಿಸಿದರು, ಆದರೆ ಹೆಚ್ಚಿನ ಯಶಸ್ಸು ಗಳಿಸಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಆ.30): 50 ವರ್ಷಗಳ ನಂತರ ಕಾಂಗ್ರೆಸ್ ಗೆ (Congress) ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಗುಲಾಂ ನಬಿ ಆಜಾದ್ (Ghulam Nabi Azad) ಕಾಂಗ್ರೆಸ್ ನಲ್ಲಿ ಬಿರುಕು ಮೂಡಿಸೋ ಯತ್ನ ಮಾಡ್ತಿದ್ದಾರಾ? 1996ರಲ್ಲಿ ತಿವಾರಿ ಕಾಂಗ್ರೆಸ್ಸಿನ ಮಾದರಿಯಲ್ಲಿ ಆಜಾದ್ ತನ್ನ ನಾಯಕತ್ವದಲ್ಲಿ ಹೊಸ ಕಾಂಗ್ರೆಸ್ ರಚಿಸುವ ಕನಸು ಕಾಣುತ್ತಿದ್ದಾರಾ? ಎಂಬಿತ್ಯಾದಿ ಸವಾಲುಗಳು ಎದ್ದಿವೆ. ಆಜಾದ್ ಅವರೊಂದಿಗೆ ಇತರ ಯಾವ ನಾಯಕರನ್ನು ತಮ್ಮೊಂದಿಗೊಯ್ಯುತ್ತಾರೆ ಎಂಬುವುದು ಸ್ಪಷ್ಟವಾಗಿಲ್ಲ. ಆದರೆ ಅವರು ಇಂತಹುದ್ದೊಂದು ಯತ್ನ ಮಾಡಬಹುದು ಎಂಬುವುದು ಕಾಂಗ್ರೆಸ್​ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್ ಈಗಾಗಲೇ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ.

1996ರಲ್ಲಿ ನಾರಾಯಣ್ ದತ್ ತಿವಾರಿ ಮತ್ತು ಅರ್ಜುನ್ ಸಿಂಗ್ ಅವರಂತಹ ನಾಯಕರು ನರಸಿಂಹ ರಾವ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದರು. ಅವರು 1996 ರ ಚುನಾವಣೆಗೆ ಸ್ಪರ್ಧಿಸಿದರು, ಆದರೆ ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ. ಆದರೆ ಇದಾದ ಬಳಿಕ ಯಾವಾಗ ಸೋನಿಯಾ ಗಾಂಧಿ ಕಾಂಗ್ರೆಸ್‌ ಚುಕ್ಕಾಣಿ ಹಿಡಿದರೋ ಅವರು ಮರಳಿ ಕಾಂಗ್ರೆಸ್​ ಸೇರಿದರು. ಇತ್ತೀಚೆಗಷ್ಟೇ ಪಕ್ಷ ತೊರೆದ ಗುಲಾಂ ನಬಿ ಆಜಾದ್ ಕೂಡ ಇದೇ ಹೆಜ್ಜೆ ಇಡಲು ಯತ್ನಿಸುತ್ತಿದ್ದಾರೆ ಎಂಬುವುದು ಕಾಂಗ್ರೆಸ್​ ವಾದವಾಗಿದೆ.

ಇದನ್ನೂ ಓದಿ: Ghulam Nabi Azad: ಇಂದಿರಾ- ರಾಜೀವ್ ಆಪ್ತರಾಗಿದ್ದ ಆಜಾದ್ ರಾಹುಲ್​ ಗಾಂಧಿಗೆ 'ಅಪರಿಚಿತ' ಆಗಿದ್ದು ಹೇಗೆ?

ಕಾಂಗ್ರೆಸ್​ ಬಿಡ್ತಾರಾ ಇನ್ನೂ ಹಲವು ನಾಯಕರು?

ಆನಂದ್ ಶರ್ಮಾ, ಶಶಿ ತರೂರ್, ಭೂಪೇಂದ್ರ ಹೂಡಾ, ಮನೀಶ್ ತಿವಾರಿ ಮತ್ತು ಬಿಹಾರದ ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಅವರೊಂದಿಗೆ ಆಜಾದ್ ಅವರು ಕಾಂಗ್ರೆಸ್‌ಗೆ ದೊಡ್ಡ ಹೊಡೆತವನ್ನು ನೀಡಲು ಯತ್ನಿಸುತ್ತಿದ್ದಾರೆ. ಆದಾಗ್ಯೂ, ಇದು ತಕ್ಷಣವೇ ಆಗುವುದಿಲ್ಲ. ಅಲ್ಲದೇ ಆಜಾದ್ ಅವರು ಮೊದಲು ಪ್ರಾದೇಶಿಕ ಪಕ್ಷವನ್ನು ರಚಿಸುವ ಮೂಲಕ ಪ್ರಾರಂಭಿಸಬೇಕಿದೆ. ಆದರೆ 2024 ರ ಲೋಕಸಭೆ ಚುನಾವಣೆಯ ಮೊದಲು ಆಜಾದ್ ಅವರು ಯಾವುದೇ ಕ್ಷಣದಲ್ಲಾದರೂ ಇಂತಹುದ್ದೊಂದು ಪ್ರಯತ್ನವನ್ನು ಮಾಡಬಹುದು ಎಂದು ಕಾಂಗ್ರೆಸ್ ತಜ್ಞರ ಮಾತಾಗಿದೆ. ಹಾಗಾಗಿ ಆಂತರಿಕವಾಗಿ ಈ ಕ್ಷಣ ಎದುರಿಸಲು ಕಾಂಗ್ರೆಸ್​ ಪಾಳಯದಲ್ಲಿ ಸಿದ್ಧತೆಯೂ ಆರಂಭವಾಗಿದೆ.

ಕಾಂಗ್ರೆಸ್​ ತಿರುಗೇಟಿಗೆ ಸಿದ್ಧ

ಈಗಾಗಲೇ ಹೊಸ ಅಧ್ಯಕ್ಷರ ಆಯ್ಕೆ ಮಾಡುವ ಸವಾಲು ಕಾಂಗ್ರೆಸ್ ಮುಂದಿದೆ. ಪಕ್ಷದ ನಾಯಕತ್ವ ವಹಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂದು ಕೊನೆಯ ಕ್ಷಣದವರೆಗೂ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಉನ್ನತ ನಾಯಕತ್ವ ಪ್ರಯತ್ನಿಸುತ್ತಿದೆ. ಗಾಂಧಿ ಕುಟುಂಬದ ಹೊರತಾಗಿ ಬೇರೆಯವರಿಗೆ ಅಧಿಕಾರ ನೀಡಿದರೆ ಪಕ್ಷದಲ್ಲಿ ಒಡಕು ಮೂಡಬಹುದು ಎಂಬುದು ಅವರ ತರ್ಕ. ಅಶೋಕ್ ಗೆಹ್ಲೋಟ್ ಅಥವಾ ವೇಣುಗೋಪಾಲ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಂತಹವರಿಗೆ ಅಧಿಕಾರವನ್ನು ನೀಡುವುದು ಇತರ ಸಮಕಾಲೀನ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು ಮತ್ತು ಇದೇ ಕಾರಣ ಪಕ್ಷವನ್ನು ತೊರೆಯಲು ಕಾರಣವಾಗಬಹುದು. ಇನ್ನು ಈಗಾಗಲೇ ಗಾಂಧಿ ಕುಟುಂಬ ತಮ್ಮ ‘ಕೈಗೊಂಬೆ’ಯನ್ನು ಅಧ್ಯಕ್ಷರನ್ನಾಗಿಸಲು ನಕಲಿ ಚುನಾವಣೆ ನಡೆಸುತ್ತಿದೆ ಎಂದು ಆಜಾದ್ ಆರೋಪಿಸಿದ್ದಾರೆ.

ಇದನ್ನೂ ಓದಿ: Ghulam Nabi Azad: ಮೋದಿ ಒರಟಲ್ಲ, ಮಾನವೀಯತೆ ಉಳ್ಳವರು! ಗುಲಾಂ ನಬಿ ಆಜಾದ್‌ರಿಂದ ನಮೋ ಗುಣಗಾನ

ಮುಂದಿನ ನಡೆ ಏನು?

ಗಾಂಧಿಯೇತರರನ್ನು ಅಧ್ಯಕ್ಷರನ್ನಾಗಿ ಮಾಡಿದರೂ ಆಜಾದ್ ಮತ್ತು ಬಿಜೆಪಿಯವರು ಅವರನ್ನು ಗಾಂಧಿ ಕುಟುಂಬದ ಕೈಗೊಂಬೆ ಎಂದು ಕರೆಯುತ್ತಾರೆ ಮತ್ತು ಪಕ್ಷದಲ್ಲಿ ಬಿರುಕು ಹೆಚ್ಚಾಗಬಹುದು ಎಂಬ ವಾದವನ್ನೂ ರಾಹುಲ್ ಗಾಂಧಿಗೆ ನೀಡಲಾಗುತ್ತಿದೆ. ಆದ್ದರಿಂದ, ಈ ಎಲ್ಲಾ ವಿಷಯಗಳು ಮತ್ತು ಅಪಾಯಗಳನ್ನು ತಪ್ಪಿಸಲು, ರಾಹುಲ್ ಗಾಂಧಿಯೇ ಮುನ್ನಡೆಸಬೇಕು. ಆದರೆ, ಆಜಾದ್ ಅವರನ್ನು ಹೊರತುಪಡಿಸಿ ಬೇರೆ ಯಾವ ನಾಯಕರು ಅವರೊಂದಿಗೆ ಸಂಪರ್ಕ ಸಾಧಿಸಬಹುದು ಎಂಬುದನ್ನು ಸಮಯ ನಿರ್ಧರಿಸುತ್ತದೆ. ಆದರೆ ಅದರ ಸಾಧ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ವ್ಯವಸ್ಥಾಪಕರು ಹೀಗೆ ಪಕ್ಷ ಬಿಡುವ ಸಾಧ್ಯತೆ ಇರುವ ನಾಯಕರಿಗೆ ಆದ್ಯತೆ ನೀಡಿ, ಅವರೊಂದಿಗೆ ಸಂವಹನ ನಡೆಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಉಯತ್ನದಲ್ಲಿದ್ದಾರೆ.
Published by:Precilla Olivia Dias
First published: