Ghulam Nabi Azad: ಮಾಜಿ ಕಾಂಗ್ರೆಸ್ಸಿಗನ ಹೊಸ ಪಕ್ಷ ಘೋಷಣೆ; ಹೆಸರಿಡುವ ಜವಾಬ್ದಾರಿ ಜನರಿಗೆ ನೀಡಿದ ಆಜಾದ್

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಗುಲಾಂ ನಬಿ ಆಜಾದ್, "ಪಕ್ಷವನ್ನು ನಾವು ನಮ್ಮ ರಕ್ತದಿಂದ ನಿರ್ಮಿಸಿದ್ದೇವೆ. ಕಂಪ್ಯೂಟರ್‌ಗಳಿಂದ ಅಲ್ಲ, ಟ್ವಿಟರ್‌ನಿಂದ ಅಲ್ಲ" ಎಂದು ವ್ಯಂಗ್ಯ ಮಾಡಿದರು.

ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್

 • Share this:
  ಕಾಶ್ಮೀರ: ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಹೊಸ ರಾಜಕೀಯ ಪಕ್ಷ ಘೋಷಣೆ (Ghulam Nabi Azad New Political Party) ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ತಮ್ಮ ಬಹು ನಿರೀಕ್ಷಿತ ರಾಜಕೀಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ (Congress)ಜೊತೆಗಿನ 5 ದಶಕಗಳ ಕಾಲದ ಒಡನಾಟ ತೊರೆದು ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ನನ್ನ ಪಕ್ಷದ ಹೆಸರನ್ನು ನಾನು ಇನ್ನೂ ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ  ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ. ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ಇಡುತ್ತೇನೆ. ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಆಜಾದ್ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

  ತಮ್ಮ ಪಕ್ಷವು ಸಂಪೂರ್ಣ ಭೂಮಿಯ ಹಕ್ಕು ಮತ್ತು ಸ್ಥಳೀಯರಿಗೆ ಉದ್ಯೋಗವನ್ನು ಮರುಸ್ಥಾಪಿಸುವತ್ತ ಗಮನ ಹರಿಸುತ್ತದೆ ಎಂದು ಅವರು ಹೇಳಿದರು. ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಗುಲಾಂ ನಬಿ ಆಜಾದ್, "ಪಕ್ಷವನ್ನು ನಾವು ನಮ್ಮ ರಕ್ತದಿಂದ ನಿರ್ಮಿಸಿದ್ದೇವೆ. ಕಂಪ್ಯೂಟರ್‌ಗಳಿಂದ ಅಲ್ಲ, ಟ್ವಿಟರ್‌ನಿಂದ ಅಲ್ಲ" ಎಂದು ವ್ಯಂಗ್ಯ ಮಾಡಿದರು.

  ಕಾಂಗ್ರೆಸ್ ನೆಲದ ಮೇಲೂ ಎಲ್ಲೂ ಕಾಣಿಸುತ್ತಿಲ್ಲ
  “ಕಾಂಗ್ರೆಸ್​ ನಾಯಕರು ನಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ವ್ಯಾಪ್ತಿಯು ಕಂಪ್ಯೂಟರ್‌ಗಳು ಮತ್ತು ಟ್ವೀಟ್‌ಗಳಿಗೆ ಸೀಮಿತವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನೆಲದ ಮೇಲೆ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

  ಇದನ್ನೂ ಓದಿ: Weight Gain Talaq: ಹೆಂಡತಿ ದಪ್ಪ ಆಗಿದ್ದಕ್ಕೆ ತಲಾಖ್! ಡಿವೋರ್ಸ್​ಗೆ ಕಾರಣ ಹೀಗೂ ಇರುತ್ತಾ?

  ಜಮ್ಮು ವಿಮಾನ ನಿಲ್ದಾಣದಲ್ಲಿ ಗುಲಾಂ ನಬಿ ಆಜಾದ್​ಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಈ ಸಂದರ್ಭಕ್ಕೆ ತಕ್ಕಂತೆ ಡೋಗ್ರಾ ಪೇಟವನ್ನು ಧರಿಸಿದ್ದರು.

  ಕಾಂಗ್ರೆಸ್​ಗೆ ರಾಜೀನಾಮೆ ನೀಡಿದವರಿಗೆ ಧನ್ಯವಾದ
  ನಾನು ಯಾವಾಗಲೂ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಇರುತ್ತೇನೆ. ಸದ್ಯ ನಾನು ಮುಖ್ಯಮಂತ್ರಿ ಅಥವಾ ಯಾವುದೇ ಸಚಿವ ಅಲ್ಲ. ನಾನು ಕೇವಲ ಸಾಮಾನ್ಯ ಮನುಷ್ಯ. ಕಳೆದ ಒಂದು ವಾರದಲ್ಲಿ ಅನೇಕ ಜನರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅವರೆಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ ಎಂದು ಆಜಾದ್ ತಮ್ಮ ಭಾಷಣದಲ್ಲಿ ಹೇಳಿದರು. ಆಜಾದ್ ತನ್ನೊಂದಿಗೆ ಸೇರಿಕೊಂಡ ಐವರು ಸಚಿವರಿಗೆ ಧನ್ಯವಾದ ಹೇಳಿದರು. 

  ಪ್ರಧಾನಿ ನರೇಂದ್ರ ಮೋದಿಯ ಗುಣಗಾನ
  ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರಗುಣಗಾನ ಮಾಡಿದ್ದಾರೆ. “ನರೇಂದ್ರ ಮೋದಿಯವರ ಬಗ್ಗೆ ನನಗೆ ತಪ್ಪು ಗ್ರಹಿಕೆ ಇತ್ತು. ಅವರೊಬ್ಬ ಒರಟು ಮನುಷ್ಯ ಅಂತ ತಿಳಿದಿದ್ದೆ. ಆದರೆ ಅವರು ಮಾನವೀಯತೆ ಉಳ್ಳ ವ್ಯಕ್ತಿ ಎನ್ನುವುದು ಆ ಬಳಿಕವಷ್ಟೇ ನನಗೆ ಮನವರಿಕೆಯಾಯಿತು” ಅಂತ ಗುಲಾಂ ನಬಿ ಆಜಾದ್ ಅವರರು ‘ನಮೋ’ ಗುಣಗಾನ ಮಾಡಿದ್ದಾರೆ.

  ಇದನ್ನೂ ಓದಿ: ಕಾಂಗ್ರೆಸ್​ ಕೈ ಬಿಟ್ಟಿದ್ದೇಕೆ ಆಜಾದ್? ಬಯಲಾಯ್ತು ಒಳಗಿನ ಗುಟ್ಟು, ಇಲ್ಲಿದೆ Exclusive ಇನ್​ಸೈಡ್​ ಸ್ಟೋರಿ!

  ಹಿಂದೆ ಸಂಸತ್‌ನಲ್ಲಿ ಕಣ್ಣೀರು ಹಾಕಿದ್ದ ಮೋದಿ
  ಕಳೆದ ವರ್ಷ ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆಯ ಅಧಿಕಾರಾವಧಿ ಮುಗಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದಾಯ ಭಾಷಣದಲ್ಲಿ ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ಗರು. ಈ ಘಟನೆ ಬಗ್ಗೆ ಮಾತನಾಡಿದ ಗುಲಾಂ ನಬಿ ಆಜಾದ್, ಪ್ರಧಾನಿ ಮೋದಿ ಅಂದು ಕಣ್ಣೀರು ಹಾಕಿದ್ದು ಯಾಕೆ ಅಂತ ಇಂದು ವಿವರಿಸಿದ್ದಾರೆ.

  “ಮೋದಿ ಒರಟು ಮನುಷ್ಯ ಅಂತ ನಾನು ಭಾವಿಸಿದ್ದೆ”
  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸಾರವಿಲ್ಲ, ಮಕ್ಕಳಿಲ್ಲ, ಹೀಗಾಗಿ ಅವರು ಒರಟು ಮನಸ್ಸಿನ ವ್ಯಕ್ತಿ ಅಂತ ನಾನು ತಿಳಿದುಕೊಂಡಿದ್ದೆ. ಆದರೆ ಅವರು ಮಾನವೀಯತೆ ಉಳ್ಳವರು ಎನ್ನುವುದು ನನ್ನ ಗಮನಕ್ಕೆ ಬಂತು ಅಂತ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
  Published by:guruganesh bhat
  First published: