Crime News: ರೇಜರ್​ನಿಂದ ಗಂಟಲು ಕತ್ತರಿಸಿದ ರೊಚ್ಚಿಗೆದ್ದ ಮಹಿಳೆ; ಮದುವೆಯಾಗಲ್ಲ ಅಂದಿದ್ದೇ ಕಾರಣ!

ಸುಮಾರು ನಾಲ್ಕು ವರ್ಷಗಳ ಕಾಲ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಉಳಿದುಕೊಂಡ ನಂತರ ತನ್ನನ್ನು ಮದುವೆಯಾಗಲು ಪ್ರೀತಿ ಒತ್ತಡ ಹೇರುತ್ತಿದ್ದಳು. ಆದರೆ ಕೊಲೆಯಾದ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಗಾಜಿಯಾಬಾದ್: ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ಇದ್ದ ಮಹಿಳೆಯೋರ್ವಳು ತನ್ನ ಪ್ರಿಯಕರ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನನ್ನು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ. ಗಾಜಿಯಾಬಾದ್‌ನಲ್ಲಿ 35 ವರ್ಷದ ಮಹಿಳೆಯೊಬ್ಬರು ದೊಡ್ಡ ಸೂಟ್‌ಕೇಸ್​ ಒಂದನ್ನು ಲಗುಬಗೆಯಿಂದ  ಕೊಂಡೊಯ್ಯುತ್ತಿದ್ದಳು. ಆಕೆಯ ವರ್ತನೆ ಕೊಂಚ ಅನುಮಾನಾಸ್ಪದವಾಗಿತ್ತು. ಇದನ್ನು ಗಮನಿಸಿದ  ಗಾಜಿಯಾಬಾದ್ (Ghaziabad) ಪೊಲೀಸರು  ಆ ಮಹಿಳೆ ಕೊಂಡೊಯ್ಯುತ್ತಿದ್ದ  ಸೂಟ್​ಕೇಸ್​ನ್ನು ಪರಿಶೀಲನೆ ನಡೆಸಿದರು. ಸೂಟ್​ಕೇಸ್ ತೆಗೆದಾಗ ಪೊಲೀಸರೇ (Police)  ದಂಗಾದರು! ಅದರಲ್ಲಿ ಪುರುಷನೋರ್ವನ ರುಂಡವಿತ್ತು! ಪ್ರೀತಿ ಶರ್ಮಾ ಎಂಬ ಆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದಾಗ ಬಯಲಾಗಿದ್ದೇ ಬೆಚ್ಚಿಬೀಳಿಸುವ ಸಂಗತಿಯಾಗಿತ್ತು.

  ಆರೋಪಿತ ಮಹಿಳೆ ರೇಜರ್​ನಿಂದ ತನ್ನ ಜೊತೆಗೇ ಇದ್ದ ಪುರುಷನ ಗಂಟಲನ್ನು ಕತ್ತರಿಸಿ ಸೂಟ್​ಕೇಸ್​ನ್ನು ರೈಲು ನಿಲ್ದಾಣದಲ್ಲಿ ಇಟ್ಟು ಪರಾರಿಯಾಗಲು ಉದ್ದೇಶಿಸಿದ್ದಳು ಎಂದು ಪೊಲೀಸರಿಗೆ ತಿಳಿದುಬಂತು.  ನಾಲ್ಕು ವರ್ಷಗಳ ಸಂಬಂಧ
  ಟ್ರಾಲಿ ಬ್ಯಾಗ್‌ನೊಳಗೆ ಮೃತ ವ್ಯಕ್ತಿ ಮೊಹಮ್ಮದ್ ಫಿರೋಜ್ (22) ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರೀತಿ ಶರ್ಮಾ ಅವರೊಂದಿಗೆ ಸುಮಾರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು. ದೆಹಲಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

  ಮದುವೆಯಾಗಲು ನಿರಾಕರಣೆ, ರೊಚ್ಚಿಗೆದ್ದ ಮಹಿಳೆ
  ಶನಿವಾರ ತಡರಾತ್ರಿ ಇಬ್ಬರ ನಡುವೆ ಮದುವೆ ವಿಚಾರವಾಗಿ ಜಗಳವಾಗಿದೆ ಎಂದು ಸಾಹಿಬಾಬಾದ್​ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಜೀತ್ ಆರ್ ಶಂಕರ್ ಹೇಳಿದ್ದಾರೆ. "ಸುಮಾರು ನಾಲ್ಕು ವರ್ಷಗಳ ಕಾಲ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಉಳಿದುಕೊಂಡ ನಂತರ ತನ್ನನ್ನು ಮದುವೆಯಾಗಲು ಪ್ರೀತಿ ಒತ್ತಡ ಹೇರುತ್ತಿದ್ದಳು. ಆದರೆ ಕೊಲೆಯಾದ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ರೊಚ್ಚಿಗೆದ್ದ ಪ್ರೀತಿ ತನ್ನ ಜೊತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದ ವ್ಯಕ್ತಿಯ ಗಂಟಲನ್ನು ರೇಜರ್​ನಿಂದ ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  ಅಬ್ಬಬ್ಬಾ! ಈ ಮಹಿಳೆ ಹೀಗೂ ಮಾಡಿದ್ದಳಂತೆ
  ಅಲ್ಲದೇ ಶವವನ್ನು ಕೋಣೆಯಲ್ಲಿ ಬಚ್ಚಿಟ್ಟು ಭಾನುವಾರ ದೊಡ್ಡ ಟ್ರಾಲಿ ಬ್ಯಾಗ್‌ಗಾಗಿ ದೆಹಲಿಯ ಸೀಲಂಪುರಕ್ಕೆ ಶಾಪಿಂಗ್‌ಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಅವಳು ಮೊಹಮ್ಮದ್ ಫಿರೋಜ್‌ನ ದೇಹವನ್ನು ಕಟ್ಟಿ ಮೂರು ಅಡಿ ಉದ್ದದ ಚೀಲಕ್ಕೆ ತುಂಬಿದ್ದಳು.

  ಇದನ್ನೂ ಓದಿ: Crime Against Women: ಅತ್ಯಾಚಾರ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ, ದಿನಕ್ಕೆ ಕನಿಷ್ಠ 6 ಕೇಸ್!

  ಭಾನುವಾರ ಮಧ್ಯರಾತ್ರಿ, ಅವಳು ತುಳಸಿ ನಿಕೇತನದ ಮನೆಯಿಂದ ಸುಮಾರು 15 ಕಿಮೀ ದೂರದ ಗಾಜಿಯಾಬಾದ್ ರೈಲು ನಿಲ್ದಾಣಕ್ಕೆ ಹೊರಟಿದ್ದಳು ಎಂದು ಪೊಲೀಸರು ಮಾಡಿರುವ ಆರೋಪದಲ್ಲಿ ಉಲ್ಲೇಖಿಸಲಾಗಿದೆ.

  ರಾತ್ರಿ 2  ಗಂಟೆಗೆ ಬ್ಯಾಗ್​ ಹಿಡಿದು ಪರಾರಿಯಾಗಲು ಯತ್ನ

  ಸೋಮವಾರ ಬೆಳಗಿನ ಜಾವ 2 ಗಂಟೆಯ ವೇಳೆಗೆ ಆಕೆ ತನ್ನ ಫ್ಲಾಟ್‌ನಿಂದ ಬ್ಯಾಗ್‌ನೊಂದಿಗೆ ಹೊರಬಂದು ಆಟೋವನ್ನು ಹುಡುಕಲು ಪ್ರಾರಂಭಿಸಿದಳು. ಆಗ ವಾಡಿಕೆಯ ತಪಾಸಣೆ ನಡೆಸುತ್ತಿದ್ದ ಪೋಲೀಸರು ಆಕೆಯನ್ನು ಗಮನಿಸಿದರು.

  ಇದನ್ನೂ ಓದಿ: IISc Bengaluru: ಹೊಸ ಸಂಶೋಧನೆ; ಮೀನಿನ ಕಿವಿ ಮೂಳೆಯಿಂದ ಸಮುದ್ರದ ನೀರಿನ ತಾಪಮಾನ ಪರೀಕ್ಷೆ!

  ಮಹಿಳೆ ಕೊನೆಗೂ ಪೊಲೀಸರ ವಶಕ್ಕೆ
  ಪೊಲೀಸರು ಚೀಲವನ್ನು ಹೊಂದಿದ್ದ ಮಹಿಳೆಯನ್ನು ಅನುಮಾನಾಸ್ಪದವಾಗಿ ಕಂಡು ಅದನ್ನು ತೆರೆಯಲು ಹೇಳಿದರು. ಚೀಲದಲ್ಲಿ ಶವ ಇತ್ತು. ಹೀಗಾಗಿ  ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

  ಕ್ಲಬ್​ನಲ್ಲಿ ಭಾರೀ ಜಗಳ! ಉದ್ಯಮಿ ಮೇಲೆ 6 ಬೌನ್ಸರ್ಸ್ ಹಲ್ಲೆ
  ಗುರ್ಗಾಂವ್‌ನ ಕ್ಲಬ್‌ನ ಬೌನ್ಸರ್‌ಗಳು  ಹಾಗೂ ಗ್ರಾಹಕರ ಮಧ್ಯೆ ಭಾರೀ ಜಗಳ ನಡೆದಿದೆ. ತಮ್ಮ ಗುಂಪಿನ ಮಹಿಳೆಯೊಂದಿಗೆ  ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಗ್ರಾಹಕರು ಬೌನ್ಸರ್ ವಿರುದ್ಧ ಪ್ರಶ್ನೆ ಮಾಡಿದ ನಂತರ ನಂತರ ಅವರನ್ನು ಮತ್ತು ಅವರ ಸ್ನೇಹಿತರ  ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಬಗ್ಗೆ ಆರೋಪಿಸಿ ಬಹುರಾಷ್ಟ್ರೀಯ ಕಂಪನಿಯ ವ್ಯವಸ್ಥಾಪಕರು ಪೊಲೀಸ್ ದೂರು ದಾಖಲಿಸಿದ್ದಾರೆ. 
  Published by:guruganesh bhat
  First published: