ನಿಮ್ಮ ಬಳಿ ಹಳೆಯ 5, 10 ರೂಪಾಯಿ ಮೌಲ್ಯದ ನಾಣ್ಯ, ನೋಟುಗಳು ಇವೆಯೇ? ಹಾಗಿದ್ದರೆ ಲಕ್ಷ ರೂ. ನಿಮ್ಮದಾಗಿಸಿಕೊಳ್ಳಬಹುದು!

ನಿಮ್ಮ ಬಳಿಕ ಅಂತಹ ನೋಟು ಅಥವಾ ನಾಣ್ಯಗಳು ಇದ್ದರೆ ನೀವು coinbazzar.com (ಕಾಯಿನ್​ಬಜಾರ್​.ಕಾಮ್​) ಗೆ ಭೇಟಿ ನೀಡಿ ಅದರ ಮೌಲ್ಯ ಎಷ್ಟು ಎಂದು ಪರಿಶೀಲಿಸಬಹುದು.

ಮಾತಾ ವೈಷ್ಣವಿದೇವಿ ಚಿತ್ರವಿರುವ 5 ರೂಪಾಯಿ ನಾಣ್ಯ.

ಮಾತಾ ವೈಷ್ಣವಿದೇವಿ ಚಿತ್ರವಿರುವ 5 ರೂಪಾಯಿ ನಾಣ್ಯ.

  • Share this:
ಹಲವು ವೆಬ್‌ಸೈಟ್‌ಗಳಲ್ಲಿ ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ ಜನರ ಬಗ್ಗೆ ನೀವು ಆಗಾಗ್ಗೆ ಓದಿದ್ದೀರಿ ಅಥವಾ ಕೇಳಿದ್ದೀರಿ. ವಿಷಯ ಹಾಗೂ ವಸ್ತುಗಳು ಹಳೆಯದಾದಷ್ಟು ಅವುಗಳು ಪುರಾತನ ವರ್ಗಕ್ಕೆ (ಆ್ಯಂಟಿಕ್​) ಸೇರುತ್ತವೆ ಮತ್ತು ಹಳೆಯ ವಸ್ತುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ಆ್ಯಂಟಿಕ್ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನೀವು ನಾಣ್ಯಶಾಸ್ತ್ರಜ್ಞರಾಗಿದ್ದರೆ ಅಥವಾ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದರೆ, ಈ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ನೀವು ಸಹ ಲಕ್ಷಾಧೀಶ್ವರರು ಆಗಬಹುದು.

ಮಾಧ್ಯಮಗಳ ವರದಿ ಪ್ರಕಾರ, ಒಂದು ವೇಳೆ ನೀವು ಮಾತಾ ವೈಷ್ಣವಿ ದೇವಿ ಕೆತ್ತನೆ ಇರುವ ಐದು ಹಾಗೂ 10 ರೂಪಾಯಿಯ ಹಳೆಯ ನಾಣ್ಯವನ್ನು ಹೊಂದಿದ್ದರೆ ಅವುಗಳನ್ನು ಹರಾಜು ಹಾಕುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು. 2002ರಲ್ಲಿ ಸರ್ಕಾರ ಈ ನಾಣ್ಯಗಳನ್ನು ಚಲಾವಣೆಗೆ ತಂದಿತ್ತು.  ಈ ನಾಣ್ಯಕ್ಕೆ ಭಾರೀ ಬೇಡಿಕೆ ಇದೆ. ಏಕೆಂದರೆ, ಹಿಂದೂಗಳು ಮಾತಾ ವೈಷ್ಣೋ ದೇವಿಯನ್ನು ಬಹಳವಾಗಿ ಗೌರವಿಸುತ್ತಾರೆ. ಅಂತಹ ಒಂದು ನಾಣ್ಯವನ್ನು ಹೊಂದಲು ಲಕ್ಷಾಂತರ ರೂ ಖರ್ಚು ಮಾಡಲು ಅನೇಕ ಜನರು ಸಿದ್ಧರಿದ್ದಾರೆ.

ಮತ್ತೊಂದು ಸರಣಿಯ ನೋಟು ಮುಸ್ಲಿಂ ಸಮುದಾಯದಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ. 786 ಸರಣಿಯ ನೋಟುಗಳು ಬಹುಬೇಡಿಕೆ ಹೊಂದಿದೆ. '786' ಸರಣಿಯ ನೋಟುಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದನ್ನು ಹೊಂದಿರುವುದು ಸಮೃದ್ಧಿಯ ಸಂಕೇತವಾಗಿದೆ.

ಒಂದು ವೇಳೆ ನೀವು ಈ ನಾಣ್ಯಗಳನ್ನು ಹೊಂದಿದ್ದರೆ ಅವುಗಳನ್ನು ಆನ್​ಲೈನ್  ವೆಬ್​ಸೈಟ್​ ಮೂಲಕ ಹರಾಜು ಹಾಕಿ ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ.

ಅಷ್ಟೇ ಅಲ್ಲದೇ ನೀವು 5 ರೂಪಾಯಿಯ ಹಳೆಯ ನೋಟುಗಳ ವಿನಿಮಯಕ್ಕೆ 30 ಸಾವಿರ ರೂಪಾಯಿ ಗಳಿಸಬಹುದಾಗಿದೆ. ನಿಮ್ಮ ಬಳಿ ಹಳೆಯ ಹಾಗೂ ತುಂಬಾ ಅಪರೂಪದ 5 ರೂಪಾಯಿ ನೋಟು ಇದ್ದರೆ ಅವುಗಳ ಬೆಲೆಯನ್ನು ವೆಬ್​ಸೈಟ್​ನಲ್ಲಿ ಪರಿಶೀಲಿಸಬಹುದಾಗಿದೆ. ಆದಾಗ್ಯೂ ಈ ಪ್ರಕ್ರಿಯೆಯಲ್ಲಿ ಕೆಲವು ನಿಯಮಗಳಿವೆ.

ಒಂದು ಭಾಗದಲ್ಲಿ ಟ್ರ್ಯಾಕ್ಟರ್​ ಚಿತ್ರವಿರುವ 5 ರೂಪಾಯಿ ನೋಟಿನ ವಿನಿಮಯಕ್ಕೆ ನೀವು 30 ಸಾವಿರ ಗಳಿಸಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಈ ನೋಟುಗಳಲ್ಲಿ ಒಂದು ವೇಳೆ 786 ನಂಬರ್ ಇದ್ದರೆ ಅದು ತುಂಬಾ ಅಪರೂಪದಲ್ಲಿ ಅಪರೂಪದ ನೋಟಾಗಿದ್ದು, ಆ ನೋಟಿಗೆ ಭಾರೀ ಬೇಡಿಕೆ ಇದೆ.

ನಿಮ್ಮ ಬಳಿಕ ಅಂತಹ ನೋಟು ಅಥವಾ ನಾಣ್ಯಗಳು ಇದ್ದರೆ ನೀವು coinbazzar.com (ಕಾಯಿನ್​ಬಜಾರ್​.ಕಾಮ್​) ಗೆ ಭೇಟಿ ನೀಡಿ ಅದರ ಮೌಲ್ಯ ಎಷ್ಟು ಎಂದು ಪರಿಶೀಲಿಸಬಹುದು.

ಇದನ್ನು ಓದಿ: ಮುಂಬೈ ದಾಳಿ ಮಾಸ್ಟರ್​ ಮೈಂಡ್​ ಹಫೀಸ್​​ ಸಯೀದ್ ಲಾಹೋರ್​ ಮನೆ ಬಳಿ ಬಾಂಬ್​ ಸ್ಪೋಟ​

ಹಳೆಯ ಹಾಗೂ ಅಪರೂಪದ ನೋಟುಗಳನ್ನು ಕಾಯಿನ್ ಬಜಾರ್ ವೆಬ್​ಸೈಟ್​ನಲ್ಲಿ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ, ಈ ವೆಬ್‌ಸೈಟ್‌ನಲ್ಲಿ 1 ರೂಪಾಯಿ ನೋಟಿನೊಂದಿಗೆ ಜಾಹೀರಾತು ನೀಡಿತ್ತು. ಇದರ ಪ್ರಕಾರ, ನಿಮ್ಮ ಬಳಿ 1 ರೂಪಾಯಿ ನೋಟು ಇದ್ದರೆ ಮತ್ತು ಅದು ಅದರ ಮಾನದಂಡಗಳನ್ನು ಪೂರೈಸಿದರೆ, ಅದಕ್ಕೆ ಬದಲಾಗಿ ನೀವು 45,000 ರೂ. ಪಡೆಯಬಹುದು.

ನೀವು 25 ಪೈಸೆಯ ಯಾವುದೇ ಹಳೆಯ ನಾಣ್ಯವನ್ನು ಹೊಂದಿದ್ದರೆ ಅದಕ್ಕೆ 1.5 ಲಕ್ಷ ರೂಪಾಯಿ ಪಡೆಯಬಹುದು. ಈ ನಾಣ್ಯವನ್ನು 1985ರಲ್ಲಿ ಠಂಕಿಸಲಾಗಿದೆ. ಈ ನಾಣ್ಯಕ್ಕೆ ಆನ್​ಲೈನ್​ ವೆಬ್​ಸೈಟ್​ನಲ್ಲಿ ಭಾರೀ ಬೇಡಿಕೆ ಇದೆ. ಇದು ವಿಚಿತ್ರ ಹಾಗೂ ತಮಾಷೆಯಾಗಿ ಕಂಡುಬಂದರೂ ನಿಜ. ಹಳೆಯ ಮತ್ತು ಅಪರೂಪದ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸಿಟ್ಟಿದ್ದರೆ ಅದಕ್ಕೆ ಬದಲಾಗಿ ಲಕ್ಷಾಂತರ ಹಣವನ್ನು ಗಳಿಸಬಹುದಾಗಿದೆ. ಹಾಗಿದ್ದರೆ ನಿಮ್ಮ ಬಳಿ ಅಂತಹ ನಾಣ್ಯ ಹಾಗೂ ನೋಟುಗಳು ಇವೆಯೇ ಎಂದು ಪರಿಶೀಲಿಸಿ.
Published by:HR Ramesh
First published: