HOME » NEWS » National-international » GET FREE LPG CONNECTION USING PMUY SCHEME THAT ENDS ON SEPTEMBER 30TH SNVS

LPG Free Connection - ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಉಚಿತ ಪಡೆಯಲು ಕೆಲವೇ ದಿನ ಬಾಕಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಉಚಿತವಾಗಿ ಅನಿಲ ಸಂಪರ್ಕ ಪಡೆಯುವ ಅವಕಾಶ ಇದೇ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಕೆಲವೇ ದಿನ ಮಾತ್ರ ಬಾಕಿ ಇದೆ, ತ್ವರೆ ಮಾಡಿ.

news18
Updated:September 24, 2020, 12:31 PM IST
LPG Free Connection - ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಉಚಿತ ಪಡೆಯಲು ಕೆಲವೇ ದಿನ ಬಾಕಿ
ಎಲ್​ಪಿಜಿ ಗ್ಯಾಸ್
  • News18
  • Last Updated: September 24, 2020, 12:31 PM IST
  • Share this:
ಬೆಂಗಳೂರು: ನೀವು ಹೊಸ ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಲು ಯೋಜಿಸುತ್ತಿದ್ದೀರಾ? ಸಂಪೂರ್ಣವಾಗಿ ಉಚಿತವಾಗಿ ಅನಿಲ ಸಂಪರ್ಕ ಪಡೆಯುವ ಅವಕಾಶ ಇದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀವು ಹೊಸ ಗ್ಯಾಸ್ ಕನೆಕ್ಷನ್ ಹೊಂದಬಹುದು. ಆದರೆ, ಉಚಿತವಾಗಿ ಪಡೆಯಲು ಇದೇ ಸೆ. 30 ಅಂತಿಮ ದಿನವಾಗಿದೆ. ಏಪ್ರಿಲ್ 30ಕ್ಕೆ ಇದ್ದ ಅಂತಿಮ ಗಡುವನ್ನು ಈಗ ಸೆ. 30ಕ್ಕೆ ವಿಸ್ತರಿಸಲಾಗಿದೆ. ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ. ಮಹಿಳೆಯರು ಮತ್ತು ಬಡವರನ್ನ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಈ ಯೋಜನೆ ಮೂಲಕ ನೀವು ಉಚಿತ ಎಲ್​ಪಿಜಿ ಅನಿಲ ಸಂಪರ್ಕ ಪಡೆಯಲು ಈ ರೀತಿ ಮಾಡಬಹುದು:

ನಿಮ್ಮ ಮನೆಯ ಸಮೀಪದ ಯಾವುದಾದರೂ ಗ್ಯಾಸ್ ಏಜೆನ್ಸಿಗೆ ಹೋಗಿ ಅಲ್ಲಿ ಅರ್ಜಿ ಪಡೆಯಬೇಕು. ಅಥವಾ ಪ್ರಧಾನಮಂತ್ರಿ ಉಜ್ವಲ ಯೋಜನೆಯ ವೆಬ್​ಸೈಟ್ pmujwalayojana.com ನ ಹೋಮ್ ಪೇಜ್​ನಲ್ಲಿ ‘ಡೌನ್​ಲೋಡ್ ಫಾರ್ಮ್’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಅದರ ಪ್ರಿಂಟ್ ಪಡೆದು ಅರ್ಜಿ ತುಂಬಿಸಿ ಮನೆ ಸಮೀಪದ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ಅರ್ಜಿ ಸಲ್ಇಸಬಹುದು.

ಇದನ್ನೂ ಓದಿ: Gujarat Fire Blast: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ

ಅರ್ಜಿದಾರರು ತಮ್ಮ ಅರ್ಜಿಯ ಜೊತೆ ಅಗತ್ಯ ದಾಖಲೆಗಳನ್ನೂ ಸೇರಿಸಿ ಸಲ್ಲಿಸಬೇಕು. ಈ ದಾಖಲೆ ಪರಿಶೀಲನೆ ಬಳಿಕ ನಿಮಗೆ ಹೊಸ ಅನಿಲ ಸಂಪರ್ಕ ಸಿಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಯೋಜನೆ ಅಡಿ 8 ಕೋಟಿಗೂ ಅಧಿಕ ಗ್ಯಾಸ್ ಕನೆಕ್ಷನ್​ಗಳನ್ನ ನೀಡಲಾಗಿದೆ. ದೇಶಾದ್ಯಂತ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇದರ ಫಲಾನುಭವಿಗಳಿದ್ದಾರೆ.
Published by: Vijayasarthy SN
First published: September 24, 2020, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories