ಎಲೆಕ್ಷನ್​ಗೆ ನಿಲ್ಲಲು ಟ್ವಿಟ್ಟರ್​, ಫೇಸ್​ಬುಕ್​ ಅಕೌಂಟ್​ ಕಡ್ಡಾಯ: ಮಧ್ಯಪ್ರದೇಶದಲ್ಲಿ ಹೊಸ ನಿಯಮ ಜಾರಿ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಚುನಾವಣೆಗೆ ಟಿಕೆಟ್​ ಪಡೆಯಬೇಕೆಂದರೆ ಅವರಿಗೆ ಟ್ವಿಟ್ಟರ್​ನಲ್ಲಿ 5 ಸಾವಿರಕ್ಕಿಂತ ಹೆಚ್ಚು ಫಾಲೋವರ್ಸ್​ ಇರಬೇಕು. ಫೇಸ್​ಬುಕ್​ ಪೇಜ್​ನಲ್ಲಿ 15 ಸಾವಿರಕ್ಕಿಂತ ಹೆಚ್ಚು ಲೈಕ್​ಗಳಿರಬೇಕು. ವಾಟ್ಸಾಪ್​ ಗ್ರೂಪ್​ನಲ್ಲಿ ಆ್ಯಕ್ಟಿವ್​ ಆಗಿರಬೇಕು. ಪಕ್ಷದ ಎಲ್ಲ ಪೋಸ್ಟ್​ಗಳನ್ನು ಲೈಕ್​ ಮಾಡಬೇಕು ಮತ್ತು ಶೇರ್​ ಮಾಡಬೇಕು. ಆನ್​ಲೈನ್​ ಮೂಲಕ ಅಭಿಯಾನ ನಡೆಸಲು ಇಲ್ಲಿನ ಐಟಿ ವಿಭಾಗ ಈ ನಿಯಮ ಜಾರಿಗೆ ತಂದಿದೆ.

news18
Updated:September 3, 2018, 6:48 PM IST

Updated: September 3, 2018, 6:48 PM IST
ನ್ಯೂಸ್​18 ಕನ್ನಡ
ಭೂಪಾಲ್​ (ಸೆ. 3): ದಿನನಿತ್ಯದ ಜೀವನದಲ್ಲಿ ಟ್ವಿಟ್ಟರ್​, ಫೇಸ್​ಬುಕ್​, ವಾಟ್ಸಾಪ್​ಗಳು ಹಾಸುಹೊಕ್ಕಾಗಿಬಿಟ್ಟಿವೆ. ಈಗ ರಾಜಕೀಯ ಪ್ರಚಾರಕ್ಕೂ ಸಾಮಾಜಿಕ ಜಾಲತಾಣ ಅನಿವಾರ್ಯ ಎನ್ನುವಂತಾಗಿದೆ. ಅದಕ್ಕೆ ಉದಾಹರಣೆಯೆಂಬಂತೆ ಮಧ್ಯಪ್ರದೇಶದ ಕಾಂಗ್ರೆಸ್​ ಪಕ್ಷ ಐಟಿ ವಿಭಾಗವನ್ನು ಪುನರ್​ ರಚನೆ ಮಾಡಲಾಗಿದ್ದು, ಲೋಕಸಭಾ ಚುನಾವಣೆಯ ಟಿಕೆಟ್​ ಆಕಾಂಕ್ಷಿಗಳು ವಾಟ್ಸಾಪ್​, ಫೇಸ್​ಬುಕ್​, ಟ್ವಿಟ್ಟರ್​ ಬಳಕೆ ಮಾಡುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತರಲಾಗಿದೆ.

ಅಷ್ಟೇ ಅಲ್ಲ.. ಮಧ್ಯಪ್ರದೇಶದ ಕಾಂಗ್ರೆಸ್​​ ಅಭ್ಯರ್ಥಿಗಳು ಫೇಸ್​ಬುಕ್​ನಲ್ಲಿ ಕನಿಷ್ಠ 15,000 ಲೈಕ್​ ಪಡೆಯುವಂತಿರಬೇಕು, ಟ್ವಿಟ್ಟರ್​ನಲ್ಲಿ 5 ಸಾವಿರಕ್ಕಿಂತ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವುದು ಕಡ್ಡಾಯ. ಇತ್ತೀಚೆಗಷ್ಟೆ ಕಾಂಗ್ರೆಸ್​ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಧರ್ಮೇಂದ್ರ ವಾಜಪೇಯಿ ಅವರ ಬದಲಾಗಿ ಅಭಯ್​ ತಿವಾರಿ ಅವರನ್ನು ನೇಮಕ ಮಾಡಿದ ನಂತರ ಪಕ್ಷದ ಆನ್​ಲೈನ್​ ಕ್ಯಾಂಪೇನ್​ ಜೋರಾಗೇ ನಡೆಯುತ್ತಿದೆ. ಕಳೆದ ವರ್ಷದ ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿಯೂ ಆನ್​ಲೈನ್​ ಅಭಿಯಾನ ಮಾಡಲಾಗಿತ್ತು.

ಕಾಂಗ್ರೆಸ್​ ಪಕ್ಷ ಈಗಾಗಲೇ ಆದೇಶ ಹೊರಡಿಸಿದ್ದು, ಟಿಕೆಟ್​ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಬೆಂಬಲಿಗರನ್ನು ಹೊಂದಿರಲೇಬೇಕು. ವಾಟ್ಸಾಪ್​ ಗ್ರೂಪ್​ನಲ್ಲಿ ಆ್ಯಕ್ಟಿವ್​ ಆಗಿರಬೇಕು. ಪ್ರತಿಯೊಬ್ಬರೂ ಕಾಂಗ್ರೆಸ್​ ಪಕ್ಷದ ಫೇಸ್​ಬುಕ್​ ಮತ್ತು ಟ್ವಿಟ್ಟರ್​ ಖಾತೆಯ ಎಲ್ಲ ಪೋಸ್ಟ್​ಗಳನ್ನು ಲೈಕ್​ ಮಾಡಿ ಶೇರ್​ ಮಾಡಬೇಕು. ಹಾಗೇ, ಸೆಪ್ಟೆಂಬರ್​ 15ರೊಳಗೆ ಮಧ್ಯಪ್ರದೇಶದ ಕಾಂಗ್ರೆಸ್​ ಪಕ್ಷದ ಸಿಬ್ಬಂದಿ, ಎಂಎಲ್​ಎಗಳು, ಎಂಎಲ್​ಸಿಗಳು ತಮ್ಮ ಟ್ವಿಟ್ಟರ್​, ಫೇಸ್​ಬುಕ್ ಪೇಜ್​ಗಳ ಖಾತೆಯ ದಾಖಲೆ ನೀಡುವಂತೆ ಆದೇಶ ಹೊರಡಿಸಲಾಗಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...