Covid-19: ಭಾರತೀಯರು ಇನ್ನು ಜರ್ಮನಿಗೂ ಆರಾಮಾಗಿ ಪ್ರಯಾಣಿಸಬಹುದು

ಜರ್ಮನಿ 11 ದೇಶಗಳ ಪಟ್ಟಿಯನ್ನು ರಚಿಸಿದ್ದು, ಅದರಲ್ಲಿ ಬ್ರೆಜಿಲ್​, ಎಸ್ವಾಟಿನಿ, ಲೆಸೊಥೋ, ಮಲಾವಿ, ಮೊಜಾಂಬಿಕ್​, ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ, ದ. ಆಫ್ರಿಕ, ಉರುಗ್ವೆ ದೇಶಗಳು ವೈರಸ್​ ರೂಪಾಂತರ ಪ್ರದೇಶ ಪಟ್ಟಿಯಲ್ಲಿ ಉಳಿದಿದೆ ಎಂದು ತಿಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಜರ್ಮನಿ ದೇಶವು ಕೊರೊನಾ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಭಾರತ, ಇಂಗ್ಲೆಂಡ್​, ರಷ್ಯಾ, ಪೋರ್ಚುಗಲ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ​ನಿಷೇಧವನ್ನು ತೆಗೆದುಹಾಕಿದೆ.

  ಭಾರತ, ನೇಪಾಳ, ರಷ್ಯಾ, ಪೋರ್ಚುಗಲ್​ ಹಾಗೂ ಇಂಗ್ಲೆಂಡ್​ ದೇಶವನ್ನು ವೈರಸ್​ ರೂಪಾಂತರದ ದೇಶಗಳೆಂದು ಪಟ್ಟಿ ಮಾಡಲಾಗಿತ್ತು. ಹೆಚ್ಚಿನ ‘ಸಂಭವನೀಯ ಪ್ರದೇಶಗಳೆನ್ನುವ’ ಮೂಲಕ ಮರು ವರ್ಗಿಕರಿಲಾಗುವುದು ಎಂದು ಜರ್ಮನಿಯ ರಾಬರ್ಟ್​ ಕೋಚ್​ ಇನ್ಸ್ಟಿಟ್ಯೂಟ್​​ ತಿಳಿಸಿದೆ.

  ಇನ್ನು ಜರ್ಮನಿ 11 ದೇಶಗಳ ಪಟ್ಟಿಯನ್ನು ರಚಿಸಿದ್ದು, ಅದರಲ್ಲಿ ಬ್ರೆಜಿಲ್​, ಎಸ್ವಾಟಿನಿ, ಲೆಸೊಥೋ, ಮಲಾವಿ, ಮೊಜಾಂಬಿಕ್​, ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ, ದ. ಆಫ್ರಿಕ, ಉರುಗ್ವೆ ದೇಶಗಳು ವೈರಸ್​ ರೂಪಾಂತರ ಪ್ರದೇಶ ಪಟ್ಟಿಯಲ್ಲಿ ಉಳಿದಿದೆ ಎಂದು ತಿಳಿಸಿದೆ.

  ಇದನ್ನೂ ಓದಿ: ಸಿಂಹಗಳ ವಿರುದ್ಧ ಹೋರಾಟ ಮಾಡಿದ ಏಡಿ: ವಿಡಿಯೋ ವೈರಲ್‌

  ಜರ್ಮನಿ ಹೇರಲಾಗಿದ್ದ ಈ ಪ್ರಯಾಣಿಕ ನಿಷೇಧದಿಂದಾಗಿ ಆ ದೇಶದ ನಿವಾಸಿಗಳು ಮತ್ತು ನಾಗರಿಕರಲ್ಲದವರು ಮಾಹಿತಿ ಒದಗಿಸಿದಂತಾಗಿದೆ. ಜತೆಗೆ ಸಂಪರ್ಕತಡೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

  ಕೊರೊನಾ ವೈರಸ್​​ ತುತ್ತಾಗಿರುವ ದೇಶಗಳ ಪಟ್ಟಿಯಲ್ಲಿ ಬ್ರಿಟನ್​ ಅಗ್ರಸ್ಥಾನದಲ್ಲಿದೆ. ರಷ್ಯಾ ಮತ್ತು ಪೋರ್ಚುಗಲ್​ ಕೂಡ ಅದೇ ಪಟ್ಟಿಗೆ ಸೇರಿದೆ. ಹಾಗಾಗಿ ವಿಮಾನ ಸೇವೆಯನ್ನು ಮತ್ತು ಪ್ರವೇಶವನ್ನು ನಿರ್ಬಂಧಗೊಳಿಸಿದೆ. ಇನ್ನು ಜರ್ಮನಿಗೆ ಪ್ರಯಾಣಿಸುವವರು 14 ದಿನ ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಬೇಕಿದೆ.

  ಸದ್ಯ ಜರ್ಮನಿ ಭಾರತ ಸೇರಿದಂತೆ ಪಟ್ಟಿಯಲ್ಲಿರುವ ಇಂಗ್ಲೆಂಡ್​, ರಷ್ಯಾ, ಪೋರ್ಚುಗಲ್ ದೇಶದ ಪ್ರಜೆಗಳ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಹಿಂಪಡೆದಿದೆ. ಲಸಿಕೆ ಹಾಕಿಕೊಂಡವರಿಗೆ ಮತ್ತು ಸೂಕ್ರ ಕ್ರಮ ಅನುಸರಿಸಿ ಕೊರೊನಾದಿಂದ ಚೇತರಿಸಿಕೊಂಡವರಿಗೆ ವಿನಾಯಿತಿ ನೀಡಲಾಗಿದೆ.

  ಇದನ್ನೂ ಓದಿ: ಇವರೇನಾ ಅವರು… ನೀವಾದರು ಹೇಳ್ತಿರಾ ಈ ನಟಿ ಯಾರು ಅಂತ

  ಇನ್ನು ಪ್ರಯಾಣಿಕರು 5 ದಿನಗಳ ನೆಗೆಟಿವ್​ ವರದಿ ನೀಡಬೇಕಾಗುತ್ತದೆ. ಪ್ರಯಾಣಿಕರನ್ನು ಸರಿಯಾಗಿ ಪರಿಶೀಲಿಸಿ ಸ್ಪಷ್ಟಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  First published: