Viral Video: ಗಿನ್ನಿಸ್​ ದಾಖಲೆಗಾಗಿ ದೇಹದಲ್ಲಿ ಈತ ಮಾಡಿಕೊಂಡ ಬದಲಾವಣೆ ಅಷ್ಟಿಷ್ಟಲ್ಲ

ರೋಲ್ಫ್​ ಬುಚೋಲ್ಜ್

ರೋಲ್ಫ್​ ಬುಚೋಲ್ಜ್

20 ವರ್ಷದಲ್ಲಿ ಅಚ್ಚರಿ ಪಡುವಂತೆ ದೇಹದ ಅಂಗಾಗಳ ಚುಚ್ಚುವಿಕೆ ನಡೆಸಿದ್ದಾನೆ. ಅಷ್ಟೇ ಅಲ್ಲ ಈತನ ಹಣೆಯ ಮೇಲೆ ಚಿಕ್ಕ ಎರಡು ಕೊಂಬುಗಳನ್ನು ಕೂಡ ಈತ ನಿರ್ಮಾಣ ಮಾಡಿಕೊಂಡಿದ್ದಾನೆ

  • Share this:

    ಗಿನ್ನಿಸ್​ ದಾಖಲೆ ಎಂಬುದು ಸಾಮಾನ್ಯವಲ್ಲ. ಹಲವು ಜನರು ಈ ದಾಖಲೆ ಪುಸ್ತಕಕ್ಕೆ ಸೇರಲು ಸಾಹಸ ಮಾಡುವುದು ಸರಿಯೇ . ಅಚ್ಚರಿ ಎಂಬ ಘಟನೆಗಳ ಜೊತೆಗೆ ವ್ಯಕ್ತಿಗಳ ಅಪ್ರತಿಮ ಪ್ರತಿಭೆ ಕೂಡ ಗಿನ್ನಿಸ್​ ಪುಟ ಸೇರುತ್ತವೆ. ಇಲ್ಲೊಬ್ಬ ವ್ಯಕ್ತಿ ಕೂಡ ತನ್ನ ದೇಹಕ್ಕೆ ಹಲವಾರು  ಮಾರ್ಪಾಡುಗೊಳಿಸುವ ಮೂಲಕ ಗಿನ್ನಿಸ್​ ಪುಟ ಸೇರಿದ್ದಾನೆ. ಅಂದವಾಗಿದ್ದ ಈತನ ದೇಹಕ್ಕೆ ಅದೆಷ್ಟು ರೂಪಾಂತರ ಮಾಡಿದ್ದಾನೆ ಎಂದರೆ ನೋಡಿದವರಿಗೆ ಈತನ ಗುರುತೆ ಸಿಗದಷ್ಟು ಬದಲಾವಣೆ ಈತನಲ್ಲಿ ಆಗಿದೆ. ಜರ್ಮನಿಯ ರೋಲ್ಫ್​ ಬುಚೋಲ್ಜ್​ ತನ್ನ ದೇಹಕ್ಕೆ ವಿಭಿನ್ನ ರೂಪ ನೀಡುವ ಮೂಲಕ ಈಗ ಗಿನ್ನಿಸ್​ ದಾಖಲೆ ನಿರ್ಮಿಸಿದಾತ. ಈತನ ದೇಹಕ್ಕೆ ಇದುವರೆಗೂ 516 ಬದಲಾವಣೆಯನ್ನು ಮಾಡಿದ್ದಾನೆ. ಇಷ್ಟೇ ಅಲ್ಲದೇ , ಮತ್ತಷ್ಟು ಮಾರ್ಪಾಡುಗಳನ್ನು ತನ್ನ ದೇಹಕ್ಕೆ ಮಾಡಬೇಕು ಎಂಬುದು ಈತನ ಹಂಬಲವಂತೆ ಈ ಕುರಿತು ಯುಪಿಐ ವರದಿ ಮಾಡಿದೆ.


    ಟೆಲಿಕಾಂ ಕಂಪನಿಯಲ್ಲಿ ಮಾಹಿತಿ ತಂತ್ರಜ್ಞಾನನಾಗಿ ಕೆಲಸಮಾಡುತ್ತಿದ್ದ ರೋಲ್ಫ್​ 40 ವರ್ಷವಿದ್ದಾಗ ಈ ರೀತಿ ದೇಹದಲ್ಲಿ ಬದಲಾವಣೆ ಮೂಲಕ ಅಚ್ಚರಿ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಿದ್ದನಂತೆ. ಇದರ ಅಂಗವಾಗಿ ಮೊದಲಬಾರಿಗೆ ದೇಹಕ್ಕೆ ಟ್ಯಾಟೂ ಮತ್ತು ಚುಚ್ಚುವಿಕೆ ಶುರುಮಾಡಿದನಂತೆ. 20 ವರ್ಷದಲ್ಲಿ ಅಚ್ಚರಿ ಪಡುವಂತೆ ದೇಹದ ಅಂಗಾಗಳ ಚುಚ್ಚುವಿಕೆ ನಡೆಸಿದ್ದಾನೆ. ಅಷ್ಟೇ ಅಲ್ಲ ಈತನ ಹಣೆಯ ಮೇಲೆ ಚಿಕ್ಕ ಎರಡು ಕೊಂಬುಗಳನ್ನು ಕೂಡ ಈತ ನಿರ್ಮಾಣ ಮಾಡಿಕೊಂಡಿದ್ದಾನೆ. ತುಟಿ, ಹುಬ್ಬು, ಮೂಗುಗಳೆಲ್ಲಾ ಚುಚ್ಚಿದ ರಿಂಗ್​ಗಳಿಂದ ತುಂಬಿ ಹೋಗಿದೆ.


    ಇನ್ನು ಈ ರೀತಿ ದೇಹ ಬದಲಾವಣೆ ಮಾಡಿಕೊಂಡಿರುವ ಕುರಿತು ಮಾತನಾಡಿರುವ ಈತ, ಈ ಬದಲಾವಣೆಗಳು ಹೊರಗಿನ ದೇಹಕ್ಕೆ ಮಾತ್ರ, ಒಳಗೆ ನಾನು ಮೊದಲಿದ್ದಂತೆ ಮಾಮೂಲಿ ಮನುಷ್ಯ ಎಂದಿದ್ದಾನೆ.


    https://youtu.be/qxs6mlL-1Ho


    ದೇಹದ ಬದಲಾವಣೆ ಸೇರಿದಂತೆ 453 ಬಾರಿ ಈತ ಚುಚ್ಚಿಸಿಕೊಂಡಿದ್ದಾನೆ. ಅಲ್ಲದೇ ದೇಹದ ತುಂಬೆಲ್ಲಾ ಟ್ಯಾಟೂಮಯವಾಗಿದೆ. 2010ರಲ್ಲಿಯೇ ಈತ ದೇಹಕ್ಕೆ ಅತಿ ಹೆಚ್ಚು ಬಾರಿ ಚುಚ್ಚಿಸಿಕೊಂಡ ಹಿನ್ನಲೆ ಗಿನ್ನಿಸ್​ ದಾಖಲೆ ಬುಕ್​ ಸೇರಿದ್ದ.


    ಇದನ್ನು ಓದಿ: ಯಾವ ವಯಸ್ಸಿನಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆಗೆ ಮುಂದಾಗಬಹುದು?; ಈ ಬಗ್ಗೆ ಪೋಷಕರಿಗೆ ಇರಲಿ ಗಮನ


    ಮುಖಕ್ಕೆ ಈ ಮಟ್ಟಿಗೆ ಚುಚ್ಚಿಸಿಕೊಂಡ ಈತನನ್ನು 2014ರಲ್ಲಿ ಎಮಿರೇಟ್ಸ್​ ವಿಮಾನ ಹತ್ತಲು ಬಿಡಲಿಲ್ಲ. ಕಾರಣ ಈತನ ಬದಲಾವಣೆ. ಪಾಸ್​ಪೋರ್ಟ್​ನಲ್ಲಿದ್ದ ವ್ಯಕ್ತಿ ಹಾಗೂ ಈತನ ಮುಖಚಹರೆ ಹೋಲಿಕೆ ಜೊತೆ ರಕ್ಷಣಾ ದೃಷ್ಟಿಯಿಂದ ವಿಮಾನ ಹತ್ತಲು ದುಬೈನಲ್ಲಿ ತಡೆ ನೀಡಲಾಗಿತ್ತು.


    ಇಷ್ಟಲ್ಲಾ ದೇಹಕ್ಕೆ ಚುಚ್ಚಿಸಿಕೊಂಡ ರೋಲ್ಫ್​ ಐದು ವರ್ಷದ ಹಿಂದೆ ಕೊಂಬುಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಗಿನ್ನಿಸ್​ ಬುಕ್​ ಸೇರಿದ ಈತನ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    Published by:Seema R
    First published: