ಪುಟ್ಟ ಹಕ್ಕಿಯಿಂದಾಗಿ 17 ಎಕರೆ ಗದ್ದೆ ಭಸ್ಮ!: ಬೆಂಕಿ ಆರಿಸಲು ಬಂತು ಹೆಲಿಕಾಪ್ಟರ್​


Updated:July 7, 2018, 4:50 PM IST
ಪುಟ್ಟ ಹಕ್ಕಿಯಿಂದಾಗಿ 17 ಎಕರೆ ಗದ್ದೆ ಭಸ್ಮ!: ಬೆಂಕಿ ಆರಿಸಲು ಬಂತು ಹೆಲಿಕಾಪ್ಟರ್​

Updated: July 7, 2018, 4:50 PM IST
ನ್ಯೂಸ್ 18 ಕನ್ನಡ

ಬರ್ಲಿನ್​(ಜು.07): ಪುಟ್ಟ ಹಕ್ಕಿಯಿಂದಾಗಿ 17 ಎಕರೆ ಗದ್ದೆಯು ಸುಟ್ಟು ಭಸ್ಮವಾಗಿರುವ ಘಟನೆ ಜರ್ಮನಿಯ ರೊಸ್ಟೋಕ್​ನಲ್ಲಿ ಸೋಮವಾರ ಸಂಭವಿಸಿದೆ. ಕರೆಂಟ್​ ತಂತಿಗೆ ತಗುಲಿದ ಹಕ್ಕಿಯೊಂದು ಗದ್ದೆಗೆ ಬಿದ್ದಿದ್ದು, ಇದರಿಂದಾಗ 17 ಎಕರೆ ಭೂಮಿಗೆ ಬೆಂಕಿ ವ್ಯಾಪಿಸಿ ಅಪಾರ ನಷ್ಟ ಸಂಭವಿಸಿದೆ.

ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಎಲ್ಲಕ್ಕಿಂತ ಮೊದಲು ಇಲ್ಲಿನ ಶುಷ್ಕ್​ ಕ್ಷೇತ್ರದಲ್ಲಿ ಬಂದು ಬಿದ್ದುದ್ದು, ಎಲ್ಲೆಡೆ ವ್ಯಾಪಿಸಿದೆ. ಗಾಳಿಯ ವೇಗ ಹೆಚ್ಚಿದ್ದುದ್ದರಿಂದ ಬೆಂಕಿಯು ಕಡಿಮೆ ಅವಧಿಯಲ್ಲಿ ಜನಪ್ರದೇಶವಾಗಿರುವ ರೀಕ್​ದೇಲ್​ ಹಾಗೂ ಕೋಸ್ಟರ್​ಬೇಕ್​ ಜಿಲ್ಲೆಗಳಿಗೂ ಹಬ್ಬಿದೆ. 50 ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೆಲ ಜನರು ಸೇರಿ ಬೆಂಕಿ ನಂದಿಸುವ ಕಾರ್ಯಕ್ಕಿಳಿದಿದ್ದರು. ಆದರೆ ಅಗ್ನಿ ವ್ಯಾಪಿಸುತ್ತಿದ್ದ ವೇಗವನ್ನು ತಡೆಯಲು ಹೆಲಿಕಾಪ್ಟರ್​ಗಳನ್ನು ಕರೆಸಿ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ತಯೆ ಎದುರಾಗಿತ್ತೆಂದು ತಿಳಿದು ಬಂದಿದೆ.

ಇಲ್ಲಿನ ಸ್ಥಳೀಯ ಫಯರ್​ ಡಿಪಾರ್ಟ್​ಮೆಂಟ್​ ಈ ಕುರಿತಾಗಿ ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಶೇರ್​ ಮಾಡಿದ್ದಾರೆ. ಘಟನೆಯ ಕುರಿತಾಗಿ ಬರೆದುಕೊಂಡಿರುವ ಅವರು 7 ಹೆಕ್ಟೇರ್​ನಷ್ಟು ಭೂಮಿಯು ಬೆಂಕಿಯಿಂದಾಗಿ ನಾಶವಾಗಿದೆ. ಇಲ್ಲಿನ ಎಲ್ಲಾ ನಿವಾಸಿಗಳು ಸುರಕ್ಷಿತವಾಗಿದ್ದಾಋಆದರೂ, ಬೆಂಕಿ ನಂದಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಈವರೆಗೂ ಎಷ್ಟು ಎಕರೆ ಭೂಮಿ ಬೆಂಕಿಗಾಹುತಿಯಅಗಿದೆ ಎಂಬ ನಿಖರ ಮಾಹಿತಿ ಇಲ್ಲ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂಬುವುದು ಖಚಿತ ಎಂದಿದ್ದಾರೆ.


ಈ ಹಿಂದೆಯೂ ಇಂತಹ ಘಟನೆ ನಡೆದಿದ್ದು, ಕಳೆದ ವರ್ಷ ಮಾರ್ಚ್​ನಲ್ಲಿ ಮೂವರು ಅಮೆರಿಕನ್​ ವಿದ್ಯಾರ್ಥಿಗಳು ಇಟಲಿಯಲ್ಲಿ ಪಾಸ್ತಾ ತಯಾರಿಸಿದ್ದರು. ಇದರಿಂದಾಗಿ ಅಪಾರ್ಟ್​ಮೆ.ಟ್​ ಒಂದಕ್ಕೆ ಬೆಂಕಿ ತಗುಲಿತ್ತು.
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ