General Atlantic-Reliance Deal: ರಿಲಯನ್ಸ್​ ರಿಟೇಲ್​ ಮೇಲೆ ಈ ಮೊದಲು ಹೂಡಿಕೆ ಮಾಡಿದ ಸಂಸ್ಥೆಗಳಾವವು ಗೊತ್ತೇ?

ರಿಟೇಲ್​ ಮೇಲೆ​ ಮತ್ತಷ್ಟು ಹೂಡಿಕೆ ಪಡೆಯುವ ನಿರೀಕ್ಷೆಯಲ್ಲಿ ರಿಲಯನ್ಸ್ ಇದೆ. ಈ ಮೂಲಕ ರಿಟೇಲ್​ ಉದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡಿ ಅಮೆಜಾನ್​ಗೆ ನೇರ ಪೈಪೋಟಿ ನೀಡುವ ಆಲೋಚನೆಯಲ್ಲಿ ರಿಲಯ್ಸ್​ ಇದೆ.

news18-kannada
Updated:September 30, 2020, 2:26 PM IST
General Atlantic-Reliance Deal: ರಿಲಯನ್ಸ್​ ರಿಟೇಲ್​ ಮೇಲೆ ಈ ಮೊದಲು ಹೂಡಿಕೆ ಮಾಡಿದ ಸಂಸ್ಥೆಗಳಾವವು ಗೊತ್ತೇ?
ರಿಲಯನ್ಸ್
  • Share this:
ನವದೆಹಲಿ(ಸೆಪ್ಟೆಂಬರ್ 30): ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗವಾದ ರಿಲಾಯನ್ಸ್ ರೀಟೇಲ್​ಗೆ ಮೂರನೇ ಹೂಡಿಕೆಯಾಗಿ 3,675 ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ​ ರಿಲಯನ್ಸ್ ರೀಟೇಲ್​ನ  ಶೇ. 0.84  ಪಾಲನ್ನು ಜನರಲ್​ ಅಟ್ಲಾಂಟಿಕ್ ಸಂಸ್ಥೆ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.  ಕೆಲ ದಿನಗಳ ಹಿಂದಷ್ಟೇ ಫ್ಯೂಚರ್ ರೀಟೇಲ್ ಎಂಬ ಎದುರಾಳಿ ಸಂಸ್ಥೆಯನ್ನು ಖರೀದಿಸಿದ್ದ ರಿಲಾಯನ್ಸ್ ರೀಟೇಲ್​ಗೆ ಜನರಲ್​ ಅಟ್ಲಾಂಟಿಕ್​ ಜೊತೆಗಿನ ಒಪ್ಪಂದ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿದೆ.  ಈ ಮೊದಲು ಜಿಯೋ ಪ್ಲಾಟ್​ಫಾರ್ಮ್​ ಮೇಲೆ ಹೂಡಿಕೆ ಮಾಡಿದ್ದ ವಿಶ್ವದ ಅತ್ಯಂತ ದೊಡ್ಡ ಟೆಕ್​ ಇನ್ವೆಸ್ಟರ್​ ಸಿಲ್ವರ್​ ಲೇಕ್​ ರಿಲಯನ್ಸ್​ ರಿಟೇಲ್​ ಕ್ಷೇತ್ರದ ಶೇ. 1.75 ಷೇರನ್ನು 7,500 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು. ಇದಾದ ಬೆನ್ನಲ್ಲೇ ಕೆಕೆಆರ್​ ಕೂಡ  5,550 ಕೋಟಿ ರೂ. ಹೂಡಿಕೆ ಮಾಡಿತ್ತು. ಈಗ ಜನರಲ್​ ಅಟ್ಲಾಂಟಿಕ್  ಹೂಡಿಕೆ ಮಾಡಿದ್ದು, ಇದರಿಂದ ರಿಲಯನ್ಸ್​ ರಿಟೇಲ್​ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ರಿಟೇಲ್​ ಮೇಲೆ​ ಮತ್ತಷ್ಟು ಹೂಡಿಕೆ ಪಡೆಯುವ ನಿರೀಕ್ಷೆಯಲ್ಲಿ ರಿಲಯನ್ಸ್ ಇದೆ. ಈ ಮೂಲಕ ರಿಟೇಲ್​ ಉದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡಿ ಅಮೆಜಾನ್​ಗೆ ನೇರ ಪೈಪೋಟಿ ನೀಡುವ ಆಲೋಚನೆಯಲ್ಲಿ ರಿಲಯ್ಸ್​ ಇದೆ.

ಅಂದಹಾಗೆ ಜನರಲ್​ ಅಟ್ಲಾಂಟಿಕ್ ಇದು ರಿಲಯನ್ಸ್​ ಮೇಲೆ ಎರಡನೇ ಹೂಡಿಕೆ ಆಗಿದೆ. ಮೇ ತಿಂಗಳಲ್ಲಿ ಜನರಲ್​ ಅಟ್ಲಾಂಟಿಕ್ 6,598 ಕೋಟಿ ರೂಪಾಯಿಯನ್ನು ರಿಲಯನ್ಸ್​ ಜಿಯೋ ಮೇಲೆ ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ರಿಟೇಲ್​ ಉದ್ಯಮಕ್ಕೂ ಜನರಲ್​ ಅಟ್ಲಾಂಟಿಕ್​ ಹೂಡಿಕೆ ಮಾಡುವ ಮೂಲಕ ರಿಲಯನ್ಸ್​ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್​ನ ಹಲವು ವ್ಯವಹಾರಗಳನ್ನ ಖರೀದಿ ಮಾಡಿತ್ತು. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್​ನ ರೀಟೇಲ್, ವೋಲ್​ಸೇಲ್, ಲಾಜಿಸ್ಟಿಕ್ಸ್, ವೇರ್​ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್​ ಘೋಷಿಸಿತ್ತು.

ಫ್ಯೂಚರ್ ಗ್ರೂಪ್​ನ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಬೆಲೆ ನಿಗದಿ ಮಾಡದೇ ಒಟ್ಟಿಗೆ ಲಂಪ್​ಸಮ್ ಆಗಿ ಎಲ್ಲಾ ವ್ಯವಹಾರಗಳನ್ನ ರಿಲಾಯನ್ಸ್ ಖರೀದಿಸಿ ವಹಿಸಿಕೊಂಡಿದೆ. ಮೇಲೆ ತಿಳಿಸಿದ ವ್ಯವಹಾರಗಳನ್ನ ಹೊಂದಿರುವ ಫ್ಯೂಚರ್ ಗ್ರೂಪ್​ನ ಕಂಪನಿಗಳು ಫ್ಯೂಚರ್ ಎಂಟರ್​ಪ್ರೈಸಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ವಿಲೀನಗೊಳ್ಳಲಿವೆ.
Published by: Rajesh Duggumane
First published: September 30, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading