Gender Equality: ಈ ಶಾಲೆಯಲ್ಲಿ ಹುಡುಗ-ಹುಡುಗಿಯರಿಬ್ಬರಿಗೂ ಒಂದೇ ಥರದ ಯೂನಿಫಾರ್ಮ್!

ಎರ್ನಾಕುಲಂ ಜಿಲ್ಲೆಯ ವಲಯಂಚಿರಂಗರ ಶಾಲೆಯೊಂದರಲ್ಲಿ ಲಿಂಗ ತಟಸ್ಥ ಸಮವಸ್ತ್ರ ನೀತಿ ಅಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಸಮವಸ್ತ್ರ ಬಳಸುವುದು ಎಂಬ ಪದ್ಧತಿಯನ್ನು ಪರಿಚಯಿಸಿದೆ

ಶಾಲಾ ಮಕ್ಕಳು

ಶಾಲಾ ಮಕ್ಕಳು

  • Share this:
ಲಿಂಗ ಸಮಾನತೆ(Gender Equality) ಎಂಬುದು ಇಂದಿನ ದಿನಗಳಲ್ಲಿ ಹೆಚ್ಚು ಮೌಲ್ಯಯುತವಾದ ಅಂಶವಾಗಿ ಪರಿಗಣಿತವಾಗುತ್ತಿದೆ. ಸ್ತ್ರೀ- ಪುರುಷ(Female-Male) ಅಸಮಾನತೆ ತೊಡೆದು ಹಾಕಿ ಸಮಾನತೆಯ ಮೂಲ ಉದ್ದೇಶ ನೆಲೆಗೊಳಿಸುವ ನಿಟ್ಟಿನಲ್ಲಿ ಇಂದು ಎಲ್ಲಾ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳ ಭವಿಷ್ಯ(Children Future) ಬುನಾದಿ ನಿರ್ಮಿಸಿಕೊಡುವಲ್ಲಿ ಶಾಲೆಗಳ ಪಾತ್ರ ಹಿರಿದಾದುದು. ಮಕ್ಕಳಲ್ಲಿ ಲಿಂಗ ಅಸಮಾನತೆಯ ಕಟ್ಟುಪಾಡುಗಳನ್ನು ತೊಡೆದು ಹಾಕಿ ಸಮಾನತೆಯ ನೀತಿ ಪಾಠವನ್ನು ಮಕ್ಕಳಲ್ಲಿ ಹುಟ್ಟುಹಾಕುವಲ್ಲಿ ಶಾಲೆ(Schools)ಗಳ ಪಾತ್ರ ಹಿರಿದಾದುದು. ಮೊಳಕೆಯಲ್ಲಿಯೇ ಈ ಪರಿಕಲ್ಪನೆಗೆ ಇಂಬು ನೀಡಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ಲಿಂಗ ಅಸಮಾನತೆ ತೊಡೆದುಹಾಕಿ ಸಮಾನತೆಯ ಮೂಲ ತತ್ವಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕೇರಳದ ಪ್ರಾಥಮಿಕ ಶಾಲೆಯು ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಸಮವಸ್ತ್ರ(Uniform) ಪರಿಚಯಿಸುವ ಮೂಲಕ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ವಿನ್ಯಾಸದ ಸಮವಸ್ತ್ರ:

ಎರ್ನಾಕುಲಂ ಜಿಲ್ಲೆಯ ವಲಯಂಚಿರಂಗರ ಶಾಲೆಯೊಂದರಲ್ಲಿ ಲಿಂಗ ತಟಸ್ಥ ಸಮವಸ್ತ್ರ ನೀತಿ ಅಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಸಮವಸ್ತ್ರ ಬಳಸುವುದು ಎಂಬ ಪದ್ಧತಿಯನ್ನು ಪರಿಚಯಿಸಿದೆ. ಈ ನೀತಿಯನ್ನು ಶಾಲೆಯಲ್ಲಿ 2018ರಲ್ಲಿ ಶಾಲೆಯ ಆಗಿನ ಮುಖ್ಯೋಪಾಧ್ಯಾಯಿನಿ ಸಿ. ರಾಜಿ ಪರಿಚಯಿಸಿದರು.

ಶರ್ಟ್ ಹಾಗೂ ತ್ರಿ-ಫೋರ್ತ್ ಪ್ಯಾಂಟ್‌ ಅನ್ನು ಸಮವಸ್ತ್ರ ಹೊಂದಿದ್ದು, 90% ಪೋಷಕರು ಹಾಗೂ ಮಕ್ಕಳು ಈ ಸಮವಸ್ತ್ರ ನೀತಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರ ನೀತಿಯಂತೆ ಈ ಮೊದಲು ಹುಡುಗಿಯರಿಗೆ ಲಂಗವನ್ನು ಸೂಚಿಸಲಾಗಿತ್ತು. ಆದರೆ ಈ ಸಮವಸ್ತ್ರದಲ್ಲಿ ಅವರು ಆರಾಮದಾಯಕವಾಗಿರಲಿಲ್ಲ. ಹಾಗಾಗಿ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾನ ಸಮವಸ್ತ್ರವನ್ನು ಪರಿಚಯಿಸಲಾಯಿತು ಎಂಬುದು ರಾಜಿಯವರ ಹೇಳಿಕೆಯಾಗಿದೆ.

ಇದನ್ನೂ ಓದಿ: Earthquake: ಮ್ಯಾನ್ಮಾರ್-ಭಾರತದ ಗಡಿಭಾಗದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪನ; ಬೆಚ್ಚಿ ಬಿದ್ದ ಜನರು

ಕೇರಳದ ಇತರ ಮೂರು ಶಾಲೆಗಳಲ್ಲಿ ಸಮವಸ್ತ್ರದ ಜಾರಿಗೆ ಚಿಂತನೆ:

ಈ ರೀತಿಯ ಸಮವಸ್ತ್ರ ನೀತಿ ಪರಿಚಯಿಸಿದ ಕೇರಳದ ಶಾಲೆ ಇದೊಂದೇ ಇಲ್ಲ. ಇದೇ ಸಮವಸ್ತ್ರ ನೀತಿಯನ್ನು ಅಳವಡಿಸಿಕೊಂಡಿರುವ ಇತರ ಮೂರು ಶಾಲೆಗಳಿದ್ದು ಅದರಲ್ಲಿ ಒಂದು ಶಾಲೆ ಈ ನೀತಿಯನ್ನು ಜಾರಿಗೆ ತರಬೇಕಿದೆ. ಪತ್ತನಂತಿಟ್ಟ ಜಿಲ್ಲೆಯ ರಾನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು 2014ರಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಜಾರಿಗೆ ತಂದಿದೆ ಮತ್ತು 2018ರಿಂದ ವಯನಾಡಿನ ಕಾರ್ಯಂಬಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದೇ ನೀತಿ ಅನುಸರಿಸಲಾಗಿದೆ ಎಂದು ಮನೋರಮಾ ಸುದ್ದಿವಾಹಿನಿ ತಿಳಿಸಿದೆ. ಕಾಸರಗೋಡಿನ ಪಿಲಿಕೋಡ್ ಸರ್ಕಾರಿ ಶಾಲೆಯು ಇದೇ ರೀತಿಯ ನಿರ್ಧಾರವನ್ನು 2 ವರ್ಷಗಳ ಹಿಂದೆಯೇ ತೆಗೆದುಕೊಂಡಿದ್ದು ಕೋವಿಡ್-19 ಸಂಬಂಧಿತ ತೊಂದರೆಗಳಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ.

ಶಿಕ್ಷಕರಿಗೂ ವಸ್ತ್ರ ಸಂಹಿತೆ ಎಂಬುದು ಕಟ್ಟುಪಾಡಾಗಿರಬಾರದು:

ಇತ್ತೀಚೆಗೆ ತಾನೇ ಉನ್ನತ ಶಿಕ್ಷಣ ಸಚಿವರಾದ ಆರ್.ಬಿಂದು ಶಿಕ್ಷಕರಿಗೆ ಸೀರೆಯುಟ್ಟು ಶಾಲೆಗೆ ಬರಬೇಕೆಂದು ತಿಳಿಸುವುದು ರಾಜ್ಯದ ಪ್ರಗತಿಪರ ಧೋರಣೆಗೆ ಅನುಕೂಲಕರವಾಗಿಲ್ಲ ಎಂದು ತಿಳಿಸಿದಾಗ ಶಿಕ್ಷಕರ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಕುರಿತು ಚರ್ಚಿಸಲಾಯಿತು. ತಾವು ಯಾವ ರೀತಿಯ ಉಡುಪು ಧರಿಸಬೇಕೆಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ. ಈ ಕುರಿತು ಮತ್ತೊಬ್ಬರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದರು. ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಈ ರೀತಿಯ ಕಟ್ಟುಪಾಡುಗಳನ್ನು ಶಿಕ್ಷಕರ ಮೇಲೆ ಹೇರುತ್ತಿದೆ ಎಂಬುದಾಗಿ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಈ ಸಂಬಂಧಿತವಾಗಿ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ: RLDA Recruitment 2021: ತಿಂಗಳಿಗೆ ₹ 54,600 ಸಂಬಳ, ರೈಲ್ವೆ ಇಲಾಖೆಯಲ್ಲಿ BE, B Tech ಆದವರಿಗೆ ಉದ್ಯೋಗ

ತಮ್ಮ ಅನುಕೂಲಕ್ಕೆ ತಕ್ಕಂತಹ ಉಡುಗೆ ತೊಡುವ ಹಕ್ಕು:

ಈ ನಿಟ್ಟಿನಲ್ಲಿ ಸರಕಾರ ಈಗಾಗಲೇ ಹಲವು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು ಕೇರಳದಲ್ಲಿರುವ ಶಿಕ್ಷಕರು ಯಾವ ರೀತಿಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಅನುಕೂಲಕ್ಕೆ ತಕ್ಕಂತೆ ಉಡುಗೆ ತೊಡುವ ಎಲ್ಲಾ ಹಕ್ಕುಗಳಿವೆ. ನಮ್ಮ ಶಿಕ್ಷಕರ ಮೇಲೆ ಸೀರೆಯನ್ನು ಹೇರುವ ಈ ಅಭ್ಯಾಸವು ಕೇರಳದ ಪ್ರಗತಿಪರ ಧೋರಣೆಗೆ ಅನುಕೂಲಕರವಾಗಿಲ್ಲ ಎಂದು ಬಿಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by:Latha CG
First published: