ರಾಜಸ್ಥಾನದ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಪೈಲಟ್​ ಪ್ರಮಾಣವಚನ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ಮಹಾಮೈತ್ರಿ ನಾಯಕರು

ಜೈಪುರದ ಆಲ್ಬರ್ಟ್​ ಹಾಲ್​ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕಲ್ಯಾಣ ಸಿಂಗ್​ ಇಬ್ಬರು ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

news18
Updated:December 17, 2018, 3:24 PM IST
ರಾಜಸ್ಥಾನದ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಪೈಲಟ್​ ಪ್ರಮಾಣವಚನ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ಮಹಾಮೈತ್ರಿ ನಾಯಕರು
ಪ್ರಾತಿನಿಧಿಕ ಚಿತ್ರ
news18
Updated: December 17, 2018, 3:24 PM IST
ಜೈಪುರ (ಡಿ.17):  ರಾಜಸ್ಥಾನದದಲ್ಲಿ ಬಿಜೆಪಿ ಸರ್ಕಾರವನ್ನು ಮಣಿಸಿ ಅಧಿಕಾರದ ಚುಕ್ಕಾಣಿ ಹಿಡಿದು  ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​, ಉಪ ಮುಖ್ಯಮಂತ್ರಿಯಾಗಿ ಸಚಿನ್​ ಪೈಲಟ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜೈಪುರದ ಆಲ್ಬರ್ಟ್​ ಹಾಲ್​ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕಲ್ಯಾಣ ಸಿಂಗ್​ ಇಬ್ಬರು ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿದಂತೆ ತೃತೀಯ ರಂಗದ ನಾಯಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದರು.

ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶನ

ಈ ಹಿಂದೆ ಕರ್ನಾಟಕ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆಗೆ ಮೈತ್ರಿ ಮಾಡಿಕೊಂಡಿದ್ದ ಮಹಾಮೈತ್ರಿ ನಾಯಕರಾದ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಸೋನಿಯಾ ಗಾಂಧಿ, ಅಖಿಲೇಶ್​ ಯಾದವ್​ ಸೇರಿದಂತೆ ಇತರೆ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ್ದರು.ಆದಾದ ಬಳಿಕ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಮೂರರಲ್ಲಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್​ ಮತ್ತೊಮ್ಮೆ ತಮ್ಮ ಬಿಜೆಪಿ ವಿರುದ್ಧ ನಮ್ಮ ಶಕ್ತಿ ಒಗ್ಗಟ್ಟು ಮುಂದುವರೆಯಲಿದೆ ಎಂಬ ಸಂದೇಶ ಸಾರಿದ್ದಾರೆ.
Loading...ಇಂದು ನಡೆದ ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯದಲ್ಲಿ ಕರ್ನಾಟಕ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ ದೇವೇಗೌಡ,  ಎನ್'ಸಿಪಿ ಮುಖ್ಯಸ್ಥ ಶರದ್ ಯಾದವ್, ಎಲ್'ಜೆಡಿ ನಾಯಕ ಶರದ್ ಯಾದವ್,  ಪೈಲಟ್​ ಮಾವ ಹಾಗೂ ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆರ್'ಜೆಡಿ ನಾಯಕ ತೇಜಸ್ವಿ ಯಾದವ್, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಜೆಎಂಎಂ ನಾಯಕ ಹೇಮಂತ್ ಸೊರೆನ್, ಡೆವಿಎಂ ನಾಯಕ ಬಾಬುಲಾಲ್ ಮರಂಡಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂದರಾ ರಾಜೇ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ ವಾಗಿತ್ತು.ಮಹಾ ಮೈತ್ರಿ ಪ್ರಮುಖ ಪಕ್ಷಗಳಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಹಾಗೂ ಬಿಎಎಸ್ಪಿ ನಾಯಕಿ ಮಾಯಾವತಿ ಗೈರಾಗುವ ಮೂಲಕ ಕಾಂಗ್ರೆಸ್​ ನಡುವೆ ಎರ್ಪಟ್ಟಿರುವ ಭಿನ್ನಮತವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
First published:December 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...