• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ರಾಜಸ್ಥಾನದಲ್ಲಿ ಕೇವಲ ಕುರ್ಚಿಗಾಗಿ ಕಾದಾಟ ನಡೆಸುತ್ತಿರುವ ಕಾಂಗ್ರೆಸ್​: ಜನ ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ವ್ಯಂಗ್ಯ

ರಾಜಸ್ಥಾನದಲ್ಲಿ ಕೇವಲ ಕುರ್ಚಿಗಾಗಿ ಕಾದಾಟ ನಡೆಸುತ್ತಿರುವ ಕಾಂಗ್ರೆಸ್​: ಜನ ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ವ್ಯಂಗ್ಯ

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್

ಯಾತ್ರೆಯ ಅಡಿಯಲ್ಲಿ ಸುಮಾರು 200 ಕಿಮೀ ಕ್ರಮಿಸಿದ ನಂತರ ಆಗಸ್ಟ್ 17 ರಂದು  ಹರಿಯಾಣದಿಂದ ರಾಜಸ್ಥಾನದ ಜುಂಜುನು ತಲುಪಿರುವ ಯಾದವ್​ ಭಾರೀ ದೊಡ್ಡ ಮಟ್ಟದಲ್ಲಿ ಯಾತ್ರೆಯ ಸಂಘಟನೆಯನ್ನು ಈ ಭಾಗದಲ್ಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.  ಮುಂದಿನ ಬಾರೀ ರಾಜಸ್ಥಾನದಲ್ಲಿ ಅಧಿಕಾರ ಹಿಡಿದೆ ಹಿಡಿಯುತ್ತೇವೆ ಎನ್ನುವ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆ.

ಮುಂದೆ ಓದಿ ...
  • Share this:

    ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ಗುರುವಾರ ರಾಜಸ್ಥಾನದಲ್ಲಿ ತನ್ನ ಜನ ಆಶೀರ್ವಾದ ಯಾತ್ರೆಯನ್ನು ಅಲ್ವಾರ್ ಜಿಲ್ಲೆಯಿಂದ ಆರಂಭಿಸಿದರು ಮತ್ತು ಆಡಳಿತಾರೂ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.


    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿರಿಯ ನಾಯಕ ಸಚಿನ್ ಪೈಲಟ್ ನಡುವೆ "ಕುರ್ಚಿಗಾಗಿ ಹೋರಾಟ, ಕಿತ್ತಾಟ" ಎರಡೂ ನಡೆಯುತ್ತಿದೆ ಎಂದು ಹೇಳಿದರು. ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಮಂತ್ರಿಗಳನ್ನು ಪರಿಚಯಿಸಿದ ನಂತರ, ಯಾದವ್ ಅವರು ಅಲ್ವಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದರು.


    ಯಾತ್ರೆಯು ಭಿವಾಡಿಯ ಅಲ್ವಾರ್ ಬೈಪಾಸ್‌ನಿಂದ ಆರಂಭ ಮಾಡಲಾಯಿತು. ನೂತನ ಕೇಂದ್ರ ಸಚಿವರನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬರಮಾಡಿಕೊಂಡರು. ನಂತರ ಯಾತ್ರೆಯು ಭಿವಾಡಿಯಲ್ಲಿರುವ ಬಿಜೆಪಿ ಕಚೇರಿಯ ಕಡೆಗೆ ತೆರಳಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತವನ್ನು 'ಆತ್ಮನಿರ್ಭರ ಭಾರತ'ವಾಗಿ ಪರಿವರ್ತಿಸುತ್ತಿದೆ ಎಂದು ಹೇಳಿದರು.

     ವಾಗ್ದಾಳಿ ಮುಂದುವರೆಸಿದ ಯಾದವ್​, ರಾಜಸ್ಥಾನದಲ್ಲಿ ಆಡಳಿತಾರೂಡ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡರು, "ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಕುರ್ಚಿಗಾಗಿ (ಮುಖ್ಯಮಂತ್ರಿ ಹುದ್ದೆ) ಹೋರಾಟವಿದೆ" ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷವು ಮುಂದಿನ ಸರ್ಕಾರವನ್ನು ರಚಿಸಿಯೇ, ರಚಿಸುತ್ತದೆ ಎಂದು ಬಿಜೆಪಿ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

    ಸಾರ್ವಜನಿಕ ಸಭೆಯ ನಂತರ, ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಮುಂದಿನ ಪ್ರಯಾಣವನ್ನು ಮುಂದುವರಿಸಿದರು. ಯಾದವ್, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್, ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಇತರ ನಾಯಕರೊಂದಿಗೆ ಕೇಸರಿ ಬಣ್ಣ ಬಳಿದ ವಾಹನದಲ್ಲಿ ಮೆರವಣಿಗೆ ನಡೆಸಿದರು.
    ಈ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮೋಟಾರ್ ಸೈಕಲ್‌ನಲ್ಲಿ ರ್ಯಾಲಿ ಮಾಡಿಕೊಂಡು ಬಂದಿದ್ದರು, ಕಾರುಗಳ ಮೂಲಕ ತಮ್ಮ ನಾಯಕರನ್ನು ಕರೆದೊಯ್ದರು ಮತ್ತು ಇತರ ವಾಹನಗಳ ಜೊತೆಗೆ ಬಂದಿದ್ದ ನೂರಾರು ಕಾರ್ಯಕರ್ತರು ತಮ್ಮ ನಾಯಕರುಗಳ ವಾಹನಕ್ಕೆ ಬೆಂಗಾವಲಾಗಿ ನಿಂತರು. ಸಂಜೆಯ ವೇಳೆಗೆ ಜೈಪುರವನ್ನು ತಲುಪುವುದು ಯಾತ್ರೆಯ ಭಾಗವಾಗಿತ್ತು. ಶುಕ್ರವಾರ ಜೈಪುರ ಜಿಲ್ಲೆಯನ್ನು ಮತ್ತು ಶನಿವಾರ ಅಜ್ಮೇರ್ ನಲ್ಲಿ ಈ ಜನ ಆಶೀರ್ವಾದ ಯಾತ್ರೆ ಮುಮದುವರೆಯಲಿದೆ ಎಂದು ಬಿಜೆಪಿ ತಿಳಿಸಿದೆ.




    ಯಾತ್ರೆಯ ಅಡಿಯಲ್ಲಿ ಸುಮಾರು 200 ಕಿಮೀ ಕ್ರಮಿಸಿದ ನಂತರ ಆಗಸ್ಟ್ 17 ರಂದು  ಹರಿಯಾಣದಿಂದ ರಾಜಸ್ಥಾನದ ಜುಂಜುನು ತಲುಪಿರುವ ಯಾದವ್​ ಭಾರೀ ದೊಡ್ಡ ಮಟ್ಟದಲ್ಲಿ ಯಾತ್ರೆಯ ಸಂಘಟನೆಯನ್ನು ಈ ಭಾಗದಲ್ಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.  ಮುಂದಿನ ಬಾರೀ ರಾಜಸ್ಥಾನದಲ್ಲಿ ಅಧಿಕಾರ ಹಿಡಿದೆ ಹಿಡಿಯುತ್ತೇವೆ ಎನ್ನುವ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆ. ಆದರೆ ಕಾಂಗ್ರೆಸ್​ ನಾಯಕತ್ವ ಬದಲಾವಣೆ ಮಾಡಿದರೆ ಮಾತ್ರ ಖುರ್ಚಿ ಉಳಿಸಿಕೊಳ್ಳು ಸಾಧ್ಯ ಎನ್ನುವ ತಂತ್ರ ಹೂಡಿಕೆಗೆ ಸಿದ್ದವಾಗಿದೆ.





    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು