HOME » NEWS » National-international » GEHLOT CAMP MLAS LEAVE FAIRMONT HOTEL IN BUS ON WAY TO AIRPORT TO MOVE TO JAISALMER RH

Rajasthan Political Crisis | ಫೈರ್​ಮೌಂಟ್ ಹೋಟೆಲ್​ನಿಂದ ಜೈಸಲ್ಮೇರ್​ಗೆ ಪ್ರಯಾಣ ಬೆಳೆಸಿದ ಸಿಎಂ ಗೆಹ್ಲೋಟ್ ಬಣದ ಶಾಸಕರು

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಜುಲೈ 13ರಂದು ಬಹಿರಂಗವಾಗಿ ಬಂಡಾಯವೆದ್ದು, ತಮ್ಮ ಬಳಿ ಕಾಂಗ್ರೆಸ್​ನ 30 ಶಾಸಕರು ಹಾಗೂ ಪಕ್ಷೇತರ ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತಾರಕಕ್ಕೆ ಏರಿರುವುದರ ಜೊತೆಗೆ ಕುತೂಹಲವನ್ನು ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

news18-kannada
Updated:July 31, 2020, 2:44 PM IST
Rajasthan Political Crisis | ಫೈರ್​ಮೌಂಟ್ ಹೋಟೆಲ್​ನಿಂದ ಜೈಸಲ್ಮೇರ್​ಗೆ ಪ್ರಯಾಣ ಬೆಳೆಸಿದ ಸಿಎಂ ಗೆಹ್ಲೋಟ್ ಬಣದ ಶಾಸಕರು
ಗೆಹ್ಲೋಟ್ ಬಣದ ಶಾಸಕರು ಬಸ್ಸಿನಲ್ಲಿ ಫೈರ್​ಮೌಂಟ್ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಹೊರಟಿರುವುದು.
  • Share this:
ಜೈಪುರ; ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿತ ಕಾಂಗ್ರೆಸ್ ಶಾಸಕರು ಫೈರ್​ಮೌಂಟ್​ ಹೋಟೆಲ್​ನಿಂದ ಬಸ್ಸಿನ ಮೂಲಕ ವಿಮಾನ ನಿಲ್ದಾಣ ತಲುಪಿದ್ದಾರೆ. ಆಗಸ್ಟ್ 14ರಂದು ನಿಗದಿಯಾಗಿರುವ ವಿಧಾನಸಭಾ ಅಧಿವೇಶನದವರೆಗೂ ಅವರು ಜೈಸಲ್ಮೇರ್​ಗೆ ತೆರಳಲಿದ್ದಾರೆ.

ಎಲ್ಲ ಶಾಸಕರುಗಳ ಗುರುತಿನ ಚೀಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಇವರೆಲ್ಲರೂ ಮಾರಿಯಟ್​ ಹೋಟೆಲ್ ಅಥವಾ ಸೂರ್ಯಗರ್ ರೆಸಾರ್ಟ್​ನಲ್ಲಿ ತಂಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಚಿವರುಗಳು ವಾಪಸ್ಸಾಗಿ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಎರಡು ಚಾರ್ಟರ್ ವಿಮಾನಗಳು ಎಲ್ಲ ಶಾಸಕರನ್ನು ಜೈಸಲ್ಮೇರ್​ಗೆ ಕರೆದೊಯ್ಯಲಿವೆ. ಫೈರ್​ಮೌಂಟ್ ಹೋಟೆಲ್​ನಿಂದ ಎಲ್ಲ ಶಾಸಕರನ್ನು ಬಸ್ಸಿನ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಜೈಸಲ್ಮೇರ್​ ಪೊಲೀಸರಿಗೆ ಎಚ್ಚರಿಕೆ ಸಹ ನೀಡಲಾಗಿದೆ.

ರಾಜ್ಯಪಾಲ ಕಲ್ರಾಜ್​ ಮಿಶ್ರಾ ಮತ್ತು ಸಿಎಂ ಗೆಹ್ಲೋಟ್​ ನಡುವಿನ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಆಗಸ್ಟ್ 14ರಂದು ವಿಧಾನಸಭೆ ಅಧಿವೇಶನ ನಡೆಸಲು ಗಡುವು ನಿಗದಿ ಮಾಡಲಾಗಿದೆ.

ಬಿಜೆಪಿ ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಬಂದ ಬಳಿಕ ಜುಲೈ 13ರಂದು ಕಾಂಗ್ರೆಸ್​ನ ಎಲ್ಲ ಶಾಸಕರನ್ನು ಜೈಪುರದ ಫೈರ್​ಮೌಂಟ್ ಹೋಟೆಲ್​ಗೆ ಸ್ಥಳಾಂತರಿಸಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಸಿಎಂ ಗೆಹ್ಲೋಟ್ ಅವರು ಆಗಸ್ಟ್ 14ರವರೆಗೆ ಎಲ್ಲ ಶಾಸಕರು ಜೈಪುರದ ಫೈರ್​ಮೌಂಟ್ ಹೋಟೆಲ್​ನಲ್ಲಿ ಇರುವಂತೆ ಶಾಸಕರಿಗೆ ಹೇಳಿದ್ದರು.

ಇದನ್ನು ಓದಿ: ಆಗಸ್ಟ್‌ 14ಕ್ಕೆ ರಾಜಸ್ಥಾನ ಅಧಿವೇಶನ; ಆಪರೇಷನ್ ಕಮಲಕ್ಕೆ ಹೆದರಿ ಎಲ್ಲಾ ಕೈ ಶಾಸಕರು ರೆಸಾರ್ಟ್‌‌ಗೆ ಶಿಫ್ಟ್
Youtube Video
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಜುಲೈ 13ರಂದು ಬಹಿರಂಗವಾಗಿ ಬಂಡಾಯವೆದ್ದು, ತಮ್ಮ ಬಳಿ ಕಾಂಗ್ರೆಸ್​ನ 30 ಶಾಸಕರು ಹಾಗೂ ಪಕ್ಷೇತರ ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತಾರಕಕ್ಕೆ ಏರಿರುವುದರ ಜೊತೆಗೆ ಕುತೂಹಲವನ್ನು ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published by: HR Ramesh
First published: July 31, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories