• Home
 • »
 • News
 • »
 • national-international
 • »
 • ಇನ್‌ಸ್ಟಾಗ್ರಾಮ್‌ನಲ್ಲಿ ನ್ಯೂಡ್ ಲೈವ್ ಸೆಷನ್ ಮಾಡಿದ ಗೆಹಾನಾ ವಸಿಷ್ಠ: ‘ಇದು ಅಶ್ಲೀಲವೇ?’ ಎಂದು ಪ್ರಶ್ನಿಸಿದ ನಟಿ

ಇನ್‌ಸ್ಟಾಗ್ರಾಮ್‌ನಲ್ಲಿ ನ್ಯೂಡ್ ಲೈವ್ ಸೆಷನ್ ಮಾಡಿದ ಗೆಹಾನಾ ವಸಿಷ್ಠ: ‘ಇದು ಅಶ್ಲೀಲವೇ?’ ಎಂದು ಪ್ರಶ್ನಿಸಿದ ನಟಿ

ರಾಜ್ ಕುಂದ್ರಾ - ಗೆಹೆನಾ ವಸಿಷ್ಟ್

ರಾಜ್ ಕುಂದ್ರಾ - ಗೆಹೆನಾ ವಸಿಷ್ಟ್

ಗೆಹಾನಾ ರಾಜ್ ಕುಂದ್ರಾ ಅವರನ್ನು ಬೆಂಬಲಿಸಿ ಮಾತನಾಡಿದ ಕಾರಣ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಶ್ಲೀಲ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

 • Share this:

  ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ನಿರ್ಮಾಣ ಮಾಡುತ್ತಿದ್ದರು ಎನ್ನಲಾದ ಕುಖ್ಯಾತ ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ ನಟಿ ಗೆಹನಾ ವಸಿಷ್ಠ್ ಇತ್ತೀಚೆಗೆ ಸುದ್ದಿಯಾಗಿದ್ದರು.


  ಮತ್ತೊಮ್ಮೆ ಈ ನಟಿ ಸುದ್ದಿಯಲ್ಲಿದ್ದು ಈಗ ಗೆಹಾನ ವಸಿಷ್ಠ ಅವರ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನ್ಯೂಡ್ ಲೈವ್ ಸೆಷನ್ ನಡೆಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಬೆತ್ತಲೆಯಾಗಿ ನೇರ ಪ್ರಸಾರ ಮಾಡಿದ ಗೆಹಾನಾ ’’ನಾನು ಈಗ ಅಸಭ್ಯವಾಗಿ ಕಾಣುತ್ತಿದ್ದೆನೆಯೇ ಎಂದು ತನ್ನ ವೀಕ್ಷಕರಿಂದ ತಿಳಿಯಲು ಬಯಸಿದ್ದೇನೆ’’ ಎಂದು ಹೇಳಿದ್ದಾರೆ. ಹಾಗು ತನ್ನನ್ನು ವೀಕ್ಷಿಸುತ್ತಿರುವ ಜನರಿಗೆ ಶುಭಾಶಯ ಕೋರುವ ಮೂಲಕ ಗೆಹಾನಾ ಲೈವ್ ಸೆಶನ್ ಆರಂಭಿಸಿದಳು ಮತ್ತು ನಂತರ ಅವಳು ತಕ್ಷಣ ತನ್ನ ಹಿಂಬಾಲಕರಿಗೆ ಹಾಗೂ ಲೈವ್​ ಸೆಷನ್​ ನೋಡುತ್ತಿದ್ದ ವೀಕ್ಷಕರಿಗೆ ಪ್ರಶ್ನೆಯೊಂದನ್ನು ಎಸೆದು ’’ನೀವು ನನ್ನನ್ನು ಈಗ ಅಸಭ್ಯವಾಗಿ ನೋಡುತ್ತಿದ್ದೀರಾ ಎಂದು ಕೇಳಿದಳು?


  ಗೆಹಾನಾ ಲೈವ್​ ಮದ್ಯೆ ಪ್ರಶ್ನೆ ಮಾಡುತ್ತಾ ನಾನು ಈಗ ಅಗ್ಗವಾಗಿ, ಕೆಟ್ಟದಾಗಿ ಕಾಣುತ್ತಿದ್ದೆನೆಯೇ? ಅಥವಾ ಇದನ್ನು ಅಶ್ಲೀಲ ಎಂದು ಪರಿಗಣಿಸಬಹುದೇ? ಈ  ರೀತಿಯಲ್ಲಿ ನೋಡಬಹುದೇ ಎಂದು ಕೇಳಿದರು? ನನ್ನ ಯಾವುದೇ ಚಟುವಟಿಕೆಯು ಅಶ್ಲೀಲ ವರ್ಗದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಆ ರೀತಿ ಇದೆಯೇ ಎಂದು ಅವಳು ಪ್ರಶ್ನಿಸಿದಳು? ಈ ಸತ್ಯವನ್ನು ಎಲ್ಲರಿಗೂ ತಿಳಿಸಿ ಎಂದು ನಟಿ ಜನರಿಲ್ಲಿ ಹಾಗೂ ತನ್ನ ಹಿಂಬಾಲಕರಲ್ಲಿ ಕೇಳಿಕೊಂಡಳು ಮತ್ತು ನಾನು ಒಂದು ಚೂರು ಬಟ್ಟೆಯನ್ನು ಧರಿಸಿಲ್ಲ ಎಂದು ಒತ್ತಿ ಹೇಳಿದಳು.


  ’’ಗಂಧಿ ಬಾತ್’’ ಚಿತ್ರ ಸರಣಿ ಖ್ಯಾತಿಯ ನಟಿಯಾದ ಗೆಹಾನಾ ಮಾತನಾಡುತ್ತಾ ’’ಪ್ರಸ್ತುತ ನಾನು ಏನನ್ನೂ ಧರಿಸಿಲ್ಲವಾದರೂ ಜನರು ವೀಡಿಯೊವನ್ನು ಅಶ್ಲೀಲ ಎಂದು ಪರಿಗಣಿಸುತ್ತಿಲ್ಲ’’. ಆದರೆ ನಾನು ಒಳ್ಳೆಯ ಬಟ್ಟೆಗಳನ್ನು ಧರಿಸಿದ ಇತರ ವೀಡಿಯೊಗಳನ್ನು ಅಶ್ಲೀಲ ವಿಷಯ ಎಂದು ಉಲ್ಲೇಖಿಸಲಾಗಿದೆ. ಅಶ್ಲೀಲ ಚಿತ್ರಗಳ ಚಿತ್ರೀಕರಣ ಹಾಗೂ ಅದರಲ್ಲಿ ಭಾಗವಹಿಸಿರುವ ಬಗ್ಗೆ ಎಲ್ಲರೂ ತನ್ನನ್ನು ದೂಷಿಸುತ್ತಿರುವುದಾಗಿ ಅವಳು ಉಲ್ಲೇಖಿಸಿದಳು ಆದರೆ ಈ ಕ್ಷಣದಲ್ಲಿ ನಾನು ಏನನ್ನೂ ಧರಿಸದೆ ನಿಮ್ಮ ಮುಂದೆ ನಿಂತಿರುವಾಗ ಯಾರೂ ಅದನ್ನು ಅಶ್ಲೀಲ ಎಂದು ಕರೆಯಲಿಲ್ಲ. ನಮ್ಮ ಸಮಾಜದಲ್ಲಿ ಇರುವುದು ಬರೀ ಬೂಟಾಟಿಕೆಯ ಮಾತುಗಳು, ನಡವಳಿಕೆಗಳು ಎಂದು ಅವಳು ಹೇಳಿದಳು.


  ಇದನ್ನೂ ಓದಿ: ಸುಶೀಲ್ ಕುಮಾರ್: ಎರಡೆರಡು ಒಲಂಪಿಕ್ ಪದಕ ಗೆದ್ದು ಮೆರೆದ ಕುಸ್ತಿಪಟು ಜೈಲು ಪಾಲಾದ ಕಥೆ..


  ಗೆಹಾನಾ ರಾಜ್ ಕುಂದ್ರಾ ಅವರನ್ನು ಬೆಂಬಲಿಸಿ ಮಾತನಾಡಿದ ಕಾರಣ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಶ್ಲೀಲ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಆಕೆಯ ಹೆಸರನ್ನು ಉದ್ದೇಶಪೂರ್ವಕವಾಗಿ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: