ಬೈಬಲ್ ಅಥವಾ ರಾಮಾಯಣದಲ್ಲಿ ಜಿಡಿಪಿ ಇಲ್ಲ, ಭವಿಷ್ಯದಲ್ಲಿ ಅದು ಮುಖ್ಯವೂ ಆಗುವುದಿಲ್ಲ; ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿದೆ. 2013ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕ ನಂತರ ಇಷ್ಟು ಕಳಪೆ ಮಟ್ಟಕ್ಕೆ ಜಿಡಿಪಿ ಕುಸಿದಿರುವುದು ಇದೇ ಮೊದಲು.

HR Ramesh | news18-kannada
Updated:December 2, 2019, 6:39 PM IST
ಬೈಬಲ್ ಅಥವಾ ರಾಮಾಯಣದಲ್ಲಿ ಜಿಡಿಪಿ ಇಲ್ಲ, ಭವಿಷ್ಯದಲ್ಲಿ ಅದು ಮುಖ್ಯವೂ ಆಗುವುದಿಲ್ಲ; ಬಿಜೆಪಿ ಸಂಸದ ನಿಶಿಕಾಂತ್ ದುಬೆ
ಬಿಜೆಪಿ ಸಂಸದ ನಿಶಿಕಾಂತ್ ದುಬೆ.
  • Share this:
ನವದೆಹಲಿ: ಭವಿಷ್ಯದಲ್ಲಿ ದೇಶದ ಜಿಡಿಪಿ ಬೆಳವಣಿಗೆಯೂ ಪ್ರಸ್ತುತವಾಗುವುದಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೋಮವಾರ ಹೇಳಿದ್ದಾರೆ.

ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಜಾರ್ಖಂಡ್​ನ ಗೊಡ್ಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಜಿಡಿಪಿಯನ್ನು 1934ರಲ್ಲಿ ಪರಿಚಯಿಸಲಾಯಿತು. ಅದಕ್ಕೂ ಹಿಂದೆ ಜಿಡಿಪಿಯ ಪರಿಕಲ್ಪನೇ ಇರಲಿಲ್ಲ. ಜಿಡಿಪಿಯನ್ನು ಪರಮಸತ್ಯ ಎಂದು ಪರಿಗಣಿಸುವ ಅವಶ್ಯಕತೆಯೂ ಇಲ್ಲ. ಜಿಡಿಪಿ ಬೈಬಲ್​ನಲ್ಲಿ ಇಲ್ಲ, ರಾಮಾಯಣ ಅಥವಾ ಮಹಾಭಾರತದಲ್ಲೂ ಇಲ್ಲ. ಭವಿಷ್ಯದಲ್ಲಿ ಜಿಡಿಪಿ ಹೆಚ್ಚು ಉಪಯುಕ್ತವಾಗುವುದೂ ಇಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಕಾಲದಲ್ಲಿ ಜನರ ಸುಸ್ಥಿರ ಆರ್ಥಿಕ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸಬೇಕಾಗಿದೆ. ಜಿಡಿಪಿಗೆ ಬದಲಾಗಿದೆ, ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಪ್ರತಿಯೊಬ್ಬರ ಸಂತೋಷ ಎಲ್ಲವುದಕ್ಕಿಂತ ಮುಖ್ಯವಾಗುತ್ತದೆ ಎಂದು ದುಬೆ ಅವರು ಹೊಸ ಸಿದ್ಧಾಂತ ಹೇಳಿದರು.

ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿದೆ. 2013ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕ ನಂತರ ಇಷ್ಟು ಕಳಪೆ ಮಟ್ಟಕ್ಕೆ ಜಿಡಿಪಿ ಕುಸಿದಿರುವುದು ಇದೇ ಮೊದಲು.

ಇದನ್ನು ಓದಿ: 2ನೇ ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತ ಸ್ವೀಕಾರಾರ್ಹವಲ್ಲ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆತಂಕ

ದೇಶದ ಆರ್ಥಿಕತೆ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂಬುದು ಜಿಡಿಪಿ ಬೆಳವಣಿಗೆಯೂ ಅಳತೆ ಮಾಪನವಾಗಿದೆ. ಜಿಡಿಪಿ ದೇಶದ ಆರ್ಥಿಕ ಉತ್ಪಾದನೆಯ ಮಾನದಂಡವಾಗಿದೆ. ಜಿಡಿಪಿ ಬೆಳವಣಿಗೆಯೂ ದೇಶದ ಆರ್ಥಿಕ ಆರೋಗ್ಯದ ಪ್ರಮುಖ  ಸೂಚಕವಾಗಿದೆ. ಜಿಡಿಪಿ ದರ ಉತ್ತಮವಾಗಿದ್ದರೆ ದೇಶದ ಆರ್ಥಿಕತೆ ವಿಸ್ತರಿಸುತ್ತಿದೆ ಎಂದು ಸುಲಭವಾಗಿ ವ್ಯಾಖ್ಯಾನಿಸಬಹುದು.
First published: December 2, 2019, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading