2018-19ನೇ ಸಾಲಿನ ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ. 6.8 ಅಲ್ಲ, ಶೇ. 6.1 – ಕೇಂದ್ರದಿಂದ ಪರಿಷ್ಕೃತ ದರ

ಪ್ರಾಥಮಿಕ ವಲಯಗಳೆಂದು ಗುರುತಿಸಲಾಗಿರುವ ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ ಕ್ಷೇತ್ರಗಳು ಒಟ್ಟಾರೆ ಶೇ. 1ಷ್ಟು ಮಾತ್ರ ಬೆಳವಣಿಗೆ ಕಂಡಿದ್ದವು. ಹಿಂದಿನ ಹಣಕಾಸು ವರ್ಷದಲ್ಲಿ (2017-18) ಈ ವಲಯ ಶೇ. 5.8ರಷ್ಟು ಅಭಿವೃದ್ಧಿ ಸಾಧಿಸಿತ್ತು. ಇದು ಹಿನ್ನಡೆಗೆ ಪ್ರಮುಖ ಕಾರಣವೆಂದು ಭಾವಿಸಲಾಗಿದೆ.

news18
Updated:January 31, 2020, 7:08 PM IST
2018-19ನೇ ಸಾಲಿನ ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ. 6.8 ಅಲ್ಲ, ಶೇ. 6.1 – ಕೇಂದ್ರದಿಂದ ಪರಿಷ್ಕೃತ ದರ
ಆರ್ಥಿಕ ಸ್ಥಿತಿಯ ಪ್ರಾತಿನಿಧಿಕ ಚಿತ್ರ
  • News18
  • Last Updated: January 31, 2020, 7:08 PM IST
  • Share this:
ನವದೆಹಲಿ(ಜ. 31): ಹಿಂದಿನ ಹಣಕಾಸು ವರ್ಷ (2018-19) ದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಶೇ. 6.1 ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಆ ವರ್ಷದಲ್ಲಿ ಜಿಡಿಪಿ ಶೇ. 6.8 ಅಭಿವೃದ್ಧಿ ಹೊಂದಿರಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಈಗ ವಿವಿಧ ಕಾರಣಗಳಿಂದಾಗಿ ಆ ದರವನ್ನು ಪರಿಷ್ಕರಿಸಿದೆ. ಗಣಿಗಾರಿಕೆ, ಕೃಷಿ, ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳವಣಿಗೆ ಕುಂಠಿತಗೊಂಡಿದ್ದರಿಂದ ಜಿಡಿಪಿಯಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆ ಇದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಇಂದು ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ನ್ಯಾಷನಲ್ ಅಕೌಂಟ್ ಮಾಹಿತಿಯಲ್ಲಿ ಈ ಅಂಶ ಸ್ಪಷ್ಟವಾಗಿದೆ. “ನೈಜ ಜಿಡಿಪಿ(Real GDP) ಪ್ರಮಾಣವು 2018-19ರ ಸಾಲಿನಲ್ಲಿ 139.81 ಲಕ್ಷ ಕೋಟಿ ಇದೆ. 2017-18ರ ಸಾಲಿನಲ್ಲಿ 131.75 ಲಕ್ಷ ಕೋಟಿ ಇದೆ” ಎಂದು ಪರಿಷ್ಕೃತ ವರದಿಯಲ್ಲಿ ಅಂಕಿ ಅಂಶ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದ ನೂತನ ಡಿಜಿ, ಐಜಿಪಿಯಾಗಿ ಪ್ರವೀಣ್ ಸೂದ್ ನೇಮಕ

ಈ ವರದಿ ಪ್ರಕಾರ 2017-18ರ ಸಾಲಿನಲ್ಲಿ ಜಿಡಿಪಿ ಶೇ. 7ರಷ್ಟು ಅಭಿವೃದ್ಧಿ ಸಾಧಿಸಿದ್ದು ಕಂಡುಬಂದಿದೆ. ಆದರೆ, 2019, ಜನವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಪರಿಷ್ಕೃತ ವರದಿಯಲ್ಲಿ 2017-18ರ ಸಾಲಿನ ವರ್ಷದಲ್ಲಿ ಶೇ. 7.2 ಜಿಡಿಪಿ ಬೆಳವಣಿಗೆಯಾಗಿರಬಹುದು ಎಂದು ಅಂದಾಜಿಸಲಾಗಿತ್ತು.

2017ಕ್ಕೆ ಹೋಲಿಸಿದರೆ 2018ರಲ್ಲಿ ಜಿಡಿಪಿ ಅಭಿವೃದ್ಧಿ ಕಡಿಮೆಯಾಗಲು ವಿವಿಧ ವಲಯಗಳ ಕುಂಠಿತ ಬೆಳವಣಿಗೆಯೇ ಕಾರಣವೆಂದು ಗ್ರಹಿಸಲಾಗಿದೆ. ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ, ತಯಾರಿಕೆ, ವಿದ್ಯುತ್, ಅನಿಲ, ಜಲ ಪೂರೈಕೆ, ಹಣಕಾಸು ಸೇವೆ, ಸಾರ್ವಜನಿಕ ಆಡಳಿತ, ರಕ್ಷಣಾ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿಲ್ಲದಿರುವುದು ಜಿಡಿಪಿಯ ಬೆಳವಣಿಗೆಗೆ ತಡೆಗೋಡೆಯಾಗಿತ್ತೆನ್ನಲಾಗಿದೆ.

ಪ್ರಾಥಮಿಕ ವಲಯಗಳೆಂದು ಗುರುತಿಸಲಾಗಿರುವ ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ ಕ್ಷೇತ್ರಗಳು ಒಟ್ಟಾರೆ ಶೇ. 1ಷ್ಟು ಮಾತ್ರ ಬೆಳವಣಿಗೆ ಕಂಡಿದ್ದವು. ಹಿಂದಿನ ಹಣಕಾಸು ವರ್ಷದಲ್ಲಿ (2017-18) ಈ ವಲಯ ಶೇ. 5.8ರಷ್ಟು ಅಭಿವೃದ್ಧಿ ಸಾಧಿಸಿತ್ತು. ಇದು ಹಿನ್ನಡೆಗೆ ಪ್ರಮುಖ ಕಾರಣವೆಂದು ಭಾವಿಸಲಾಗಿದೆ.

 ಇದನ್ನೂ ಓದಿ: ಮುಂಬರುವ ವರ್ಷದಲ್ಲಿ ದೇಶದ ಜಿಡಿಪಿ ಶೇ. 6ರಿಂದ 6.5 ಬೆಳವಣಿಗೆ: ಆರ್ಥಿಕ ಸಮೀಕ್ಷೆ ಅಂದಾಜುಇನ್ನು, ನಾಮಿನಲ್ ನೆಟ್ ನ್ಯಾಷನಲ್ ಇನ್​ಕಮ್ (ಒಟ್ಟಾರೆ ರಾಷ್ಟ್ರೀಯ ಆದಾಯ) ಈಗಿನ ದರದಲ್ಲಿ 2018-19ರ ಸಾಲಿನಲ್ಲಿ 167.89 ಲಕ್ಷ ಕೋಟಿ ಇದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಪ್ರಮಾಣ 151.50 ಲಕ್ಷ ಕೋಟಿ ಇತ್ತು. ಈ ಅಂಕಿ ಅಂಶದಂತೆ 2017-18ರಲ್ಲಿ ಶೇ. 11.2 ರಷ್ಟು ಎನ್​ಎನ್​ಐ ಅಭಿವೃದ್ಧಿ ಹೊಂದಿದೆ. 2018-19ರಲ್ಲಿ ಶೇ. 10.8ರಷ್ಟು ಅಭಿವೃದ್ಧಿ ಹೊಂದಿರುವುದು ಕಂಡುಬಂದಿದೆ.

ಪರಿಷ್ಕೃತ ನ್ಯಾಷನಲ್ ಅಕೌಂಟ್ ದತ್ತಾಂಶದ ಪ್ರಕಾರ ಈ ಎರಡು ವರ್ಷದಲ್ಲಿ ತಲಾದಾಯವು 1,15,293 ಮತ್ತು 1,26,521 ರೂಪಾಯಿ ಇದೆ ಎಂದು ಅಂದಾಜು ಮಾಡಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 31, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading