ಏಳು ವರ್ಷದಲ್ಲೇ ಅತ್ಯಂತ ಪಾತಾಳಕ್ಕೆ ಕುಸಿದ ಭಾರತದ ಜಿಡಿಪಿ; ಅಂಕಿ ಅಂಶ ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯ

2012-13ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.4.3 ರಷ್ಟು ದಾಖಲಾಗಿತ್ತು. ಆ ನಂತರ ಈ ಪ್ರಮಾಣದಲ್ಲಿ ಜಿಡಿಪಿ ಕುಸಿದಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

MAshok Kumar | news18-kannada
Updated:February 28, 2020, 9:35 PM IST
ಏಳು ವರ್ಷದಲ್ಲೇ ಅತ್ಯಂತ ಪಾತಾಳಕ್ಕೆ ಕುಸಿದ ಭಾರತದ ಜಿಡಿಪಿ; ಅಂಕಿ ಅಂಶ ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯ
ಪ್ರಾತಿನಿಧಿಕ ಚಿತ್ರ.
  • Share this:
ದೆಹಲಿ (ಫೆಬ್ರವರಿ 28); ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಕಳೆದ ಅಕ್ಟೋಬರ್-ಡಿಸೆಂಬರ್ 2019 ರ ಕೊನೆಯ ತ್ರೈಮಾಸಿಕದಲ್ಲಿ ಕನಿಷ್ಠ ಶೇ.4.7ಕ್ಕೆ ಇಳಿದಿದೆ. ಇದು ಕಳೆದ 7 ವರ್ಷದಲ್ಲಿ ಉತ್ಪಾದನಾ ವಲಯದ ಉತ್ಪಾದನೆಯಲ್ಲಿನ ಅತ್ಯಂತ ಕಳಪೆ ದಾಖಲಾತಿ ಎಂದು ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

2012-13ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.4.3 ರಷ್ಟು ದಾಖಲಾಗಿತ್ತು. ಆ ನಂತರ ಈ ಪ್ರಮಾಣದಲ್ಲಿ ಜಿಡಿಪಿ ಕುಸಿದಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

2019 ರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಸುಮಾರು ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ದೇಶದ ಆರ್ಥಿಕ ಬೆಳವಣಿಗೆಯ ಪ್ರಮಾಣ ಕುಸಿತ ಹಾದು ಹಿಡಿದಿದೆ ಎಂದು ಸ್ವತಃ ಹಣಕಾಸು ಸಚಿವಾಲಯ ಹೇಳಿದೆ.

ಜಿಡಿಪಿ ಬೆಳವಣಿಗೆಯು 2018-19ರ ಇದೇ ತ್ರೈಮಾಸಿಕದಲ್ಲಿ 5.6% ಎಂದು ದಾಖಲಾಗಿತ್ತು. ಪ್ರಸ್ತುತ ಹಣಕಾಸಿನ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಆರ್ಥಿಕ ಬೆಳವಣಿಗೆಯನ್ನು ಈ ಹಿಂದೆ ಅಂದಾಜು ಮಾಡಿದ 4.5% ರಿಂದ 5.1% ಕ್ಕೆ ಪರಿಷ್ಕರಿಸಲಾಗಿದೆ. ಅಂತೆಯೇ, ಮೊದಲ ತ್ರೈಮಾಸಿಕ ಬೆಳವಣಿಗೆಯನ್ನು ಶೇ.5 ರಿಂದ ಶೇ.5.6 ಗೆ ಪರಿಷ್ಕರಿಸಲಾಗಿದೆ.

ಇದನ್ನೂ ಓದಿ : ‘ಸಿಎಎ ಯಾರ ಪೌರತ್ವವೂ ಕಸಿದುಕೊಳ್ಳುವುದಿಲ್ಲ‘; ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಮರು ಸ್ಪಷ್ಟನೆ
First published:February 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading