ಮನಮೋಹನ್ ಸಿಂಗ್ ಸರ್ಕಾರದ ಸಾಧನೆಯನ್ನು ವೆಬ್​ಸೈಟ್​ನಿಂದ ತೆಗೆದು ಹಾಕಿದ ಕೇಂದ್ರ ಸಚಿವಾಲಯ

news18
Updated:August 21, 2018, 7:00 PM IST
ಮನಮೋಹನ್ ಸಿಂಗ್ ಸರ್ಕಾರದ ಸಾಧನೆಯನ್ನು ವೆಬ್​ಸೈಟ್​ನಿಂದ ತೆಗೆದು ಹಾಕಿದ ಕೇಂದ್ರ ಸಚಿವಾಲಯ
news18
Updated: August 21, 2018, 7:00 PM IST
-ನ್ಯೂಸ್ 18 ಕನ್ನಡ

ಹೊಸದಿಲ್ಲಿ(ಆ.21): ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಉನ್ನತ ಮಟ್ಟದಲ್ಲಿದ್ದ ಜಿಡಿಪಿ ಅಂಕಿ ಅಂಶಗಗಳ ಮಾಹಿತಿಗಳನ್ನು ಸರ್ಕಾರಿ ವೆಬ್​ಸೈಟಿನಿಂದ ತೆಗೆದು ಹಾಕಲಾಗಿದೆ ಎಂದು ಖಾಸಗಿ ವೆಬ್​ಸೈಟ್​ವೊಂದು ವರದಿ ಮಾಡಿದೆ.

2004-05 ರಿಂದ 2010-11ರವರೆಗಿನ ಜಿಡಿಪಿ ಬೆಳವಣಿಗೆಗಳ ಅಂಕಿ ಅಂಶಗಳ ಲೆಕ್ಕಚಾರವನ್ನು ವೆಬ್​ಸೈಟಿನಿಂದ ಎನ್​ಡಿಎ ಸರ್ಕಾರ ತೆರವುಗೊಳಿಸಿದೆ. ಅಲ್ಲದೆ ಕೇಂದ್ರ ಸರಕಾರದ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜುಲೈ 25ರಂದು ಸಚಿವಾಲಯದ ವೆಬ್​ಸೈಟ್​ನಲ್ಲಿ ಈ ಹೊಸ ಅಂಕಿ ಅಂಶಗಳನ್ನು ಪ್ರಕಟಿಸಲಾಗಿದೆ. ಅದರ ಪ್ರಕಾರ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಭಾರತದ ಜಿಡಿಪಿ ಶೇ.10.8ರಷ್ಟು ಪ್ರಗತಿ ಸಾಧಿಸಿತ್ತು. ಇದು ಎನ್​ಡಿಎ ಸರ್ಕಾರದ ಜಿಡಿಪಿ ಬೆಳವಣಿಗೆಗಿಂತ ಉತ್ತಮವಾಗಿರುವುದು ಈ ಮಾಹಿತಿಯನ್ನು ತೆಗೆದು ಹಾಕಲು ಕಾರಣ ಎನ್ನಲಾಗಿದೆ.ಜುಲೈ ತಿಂಗಳಾಂತ್ಯದಲ್ಲಿ ಈ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದ್ದರೂ, ಮಾಧ್ಯಮಗಳಲ್ಲಿ ಕಳೆದ ವಾರವಷ್ಟೇ ವರದಿ ಮಾಡಲಾಗಿತ್ತು. ಈ ಬಗ್ಗೆ ಸರ್ಕಾರವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನಿಸಿದ್ದವು. ಈ ವೇಳೆ ವೆಬ್​ಸೈಟ್​ನಿಂದ ವರದಿಯನ್ನು ತೆಗೆದು ಹಾಕಿದ ಸಚಿವಾಲಯ ಇದು ಅಂತಿಮ ವರದಿಯಲ್ಲವೆಂದು ಸಮಜಾಯಿಷಿ ನೀಡಿತ್ತು.

ಈ ವಿಷಯವನ್ನು ಬಹಿರಂಗ ಪಡಿಸಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ 2004 ರಿಂದ 2014 ರವರೆಗಿನ ಯುಪಿಎ ನೇತೃತ್ವದ ಸರ್ಕಾರವು ಉತ್ತಮ ಆರ್ಥಿಕ ಬೆಳವಣಿಗೆ ಹೊಂದಿತ್ತು ಎಂಬುದನ್ನು ತಿಳಿಸಿದ್ದಾರೆ. ಐದನೇ ವರ್ಷದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರವು 2004ರಲ್ಲಿ ಯುಪಿಎ ಸರ್ಕಾರದ ಸಾಧಿಸಿದ್ದ ಆರ್ಥಿಕ ಬೆಳವಣಿಗೆಯನ್ನು ತಲುಪಲು ಸಾಧ್ಯವಿಲ್ಲ. ಆದರೆ ಎರಡನೇ ಬಾರಿ ಅಧಿಕಾರಕ್ಕೇರಿದ್ದ ಯುಪಿಎ ಸರ್ಕಾರ ಜಿಡಿಪಿ ಅಂಕಿ ಅಂಶಗಳಷ್ಟು ದೇಶ ಪ್ರಗತಿ ಸಾಧಿಸಲು ನಾನು ಬಯಸುವುದಾಗಿ ಚಿದಂಬರಂ ತಿಳಿಸಿದ್ದಾರೆ.



ಕಳೆದ 4 ವರ್ಷದ ಮೋದಿ ಆಡಳಿತದಲ್ಲಿ ಸರಾಸರಿ ಶೇ. 7.3ರಷ್ಟು ಆರ್ಥಿಕ ಅಭಿವೃದ್ಧಿಯಾದರೆ, ಯುಪಿಎ ಸರಕಾರದ ಎರಡು ಅವಧಿಯಲ್ಲಿ ಶೇ. 8.1 ಸರಾಸರಿ ಅಭಿವೃದ್ಧಿಯಾಗಿದೆ. ಕಳೆದ 15 ವರ್ಷಗಳ ಕೇಂದ್ರ ಸರ್ಕಾರದ ಆಡಳಿತದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶೇ. 10.08ರಷ್ಟು ಆರ್ಥಿಕ ಪ್ರಗತಿ ಸಾಧಿಸಿತ್ತು. ಭಾರತದ ಆಡಳಿತದಲ್ಲಿ 1988-89ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಶೇ. 10.20ರಷ್ಟು ಜಿಡಿಪಿ ಬೆಳವಣಿಗೆ ಹೊಂದಿರುವುದು ಇಲ್ಲಿಯವರೆಗಿನ ಗರಿಷ್ಠ ದಾಖಲೆಯಾಗಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ